ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ಸಮಾವೇಶ: ಅಭಿವೃದ್ಧಿ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

|
Google Oneindia Kannada News

ಕಲಬುರಗಿ, ಮಾರ್ಚ್ 06: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿಂದು ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಮಾರ್ಚ್‌ 6ಕ್ಕೆ ರಾಜ್ಯಕ್ಕೆ ಮೋದಿ, ಖರ್ಗೆ ಕ್ಷೇತ್ರದಲ್ಲಿ 'ಲೋಕ' ಕಹಳೆಮಾರ್ಚ್‌ 6ಕ್ಕೆ ರಾಜ್ಯಕ್ಕೆ ಮೋದಿ, ಖರ್ಗೆ ಕ್ಷೇತ್ರದಲ್ಲಿ 'ಲೋಕ' ಕಹಳೆ

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ನಾನು ಕಲಬುರಗಿಯಲ್ಲಿ ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದೇನೆ. ಬೆಂಗಳೂರಿನ ಇಎಸ್ ಐಸಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ ಹಾಗೂ ಹುಬ್ಬಳ್ಳಿಯ ಕಿಮ್ಸ್ ನ ಮಲ್ಟಿ ಸ್ಪೆಶಾಲಿಟಿ ಬ್ಲಾಕ್ ಗಳನ್ನು ಲೋಕಾರ್ಪಣೆ ಮಾಡಲಿದ್ದೇನೆ. ಅಷ್ಟೇ ಅಲ್ಲ, ಆಯುಷ್ಮಾನ್ ಭಾರತ ಫಲಾನುಭವಿಗಳೊಂದಿಗೂ ಇದು ಸಂವಾದ ನಡೆಸಲಿದ್ದೇನೆ" ಎಂದು ಮೋದಿ ಮಾಹಿತಿ ನೀಡಿದ್ದಾರೆ.

"ರಾಯಚೂರು-ಕಲಬುರಗಿ ಪಿಪಿಸಿಎಲ್ ಡಿಪೋ ಪುನಃಸ್ಥಾಪನೆಗೆ ಅಡಿಗಲ್ಲು ಸ್ಥಾಪಿಸಲಿದ್ದೇನೆ. ಅಷ್ಟೇ ಅಲ್ಲ, ಬೆಂಗಳೂರು ವಿವಿಯಲ್ಲಿ ಓದುತ್ತಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿನಿಯರಿಗಾಗಿ ಮಹಿಳಾ ಹಾಸ್ಟೇಲ್ ಅನ್ನೂ ಲೋಕಾರ್ಪಣೆಗೊಳಿಸಲಿದ್ದೇನೆ. ನಂತರ ನಾನು ಕಲಬುರಗಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿ ತಮ್ಮ ಕಾರ್ಯಕ್ರಮದ ವಿವರ ನೀಡಿದ್ದಾರೆ.

ದಾಳಿಯ ಸಾಕ್ಷ್ಯ ಕೇಳುವವರು ಪಾಕಿಸ್ತಾನದ ದಲ್ಲಾಳಿಗಳು: ಮೋದಿ ದಾಳಿಯ ಸಾಕ್ಷ್ಯ ಕೇಳುವವರು ಪಾಕಿಸ್ತಾನದ ದಲ್ಲಾಳಿಗಳು: ಮೋದಿ

LS polls: PM Modi to address rally in Kalaburagi

ಕಲಬುರಗಿಯು ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರವೂ ಆಗಿರುವುದರಿಂದ ಮೋದಿ ಅವರ ಸಮಾವೇಶ ಸಾಕಷ್ಟು ಕುತೂಹಲ ಕೆರಳಿಸಿದೆ. ಇಂದು ನಡೆಯುವ ಸಮಾವೇಶದಲ್ಲಿ ಇತ್ತೀಚೆಗೆ ಕಾಂಗ್ರೆಸ್ ತೊರೆದ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರು ಸಹ ಬಿಜೆಪಿಗೆ ಸೇರುವ ಸಾಧ್ಯತೆ ಇದೆ.

English summary
Ahead of upcomming Lok Sabha elections, Prime minister Narendra Modi will address mega rally in Kalaburagi, Karnataka today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X