ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸೆಟ್ ಆಗ್ತಿಲ್ಲ: ವಿವಾದದ ಬಳಿಕ ಸ್ಪಷ್ಟೀಕರಣ ನೀಡಿದ ಜಾಧವ್

|
Google Oneindia Kannada News

Recommended Video

ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ' ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ: ಡಾ. ಉಮೇಶ್​​ ಜಾಧವ್​​​​​​

ಕುಲಬುರಗಿ, ಏಪ್ರಿಲ್ 20: 'ಗೋವಿಂದ ಕಾರಜೋಳ ಅವರೇ ನನಗೆ ಬಿಜೆಪಿ ಸೆಟ್ಟಾಗ್ತಿಲ್ಲ' ಬಿಜೆಪಿ ಏನೆಂದು ಗೊತ್ತಾಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳುತ್ತೇನೆ ನನಗೆ ಸಹಕಾರ ನೀಡಬೇಕು' ಎಂದು ಡಾ. ಉಮೇಶ್​​ ಜಾಧವ್​​​​​​ ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಉಮೇಶ್ ಜಾಧವ್, ಬಿಜೆಪಿಯಲ್ಲಿ ಹೊಂದಿಕೊಳ್ಳಲು ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬ ಅರ್ಥದಲ್ಲಿ ಹೇಳಿರುವುದಲ್ಲ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಬುರಗಿಯಲ್ಲಿ ನಡೆದ ದಲಿತಾ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಉಮೇಶ್​​​ ಜಾಧವ್, 'ನನಗೆ ಬಿಜೆಪಿಯೊಂದಿಗೆ ಹೊಂದಿಕೊಳ್ಳಲು ಆಗುತ್ತಿಲ್ಲ. ಪಕ್ಷ ಸರಿಹೋಗುತ್ತಿಲ್ಲ. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ನನ್ನ ಗೆಲುವಿಗೆ ನೀವು ಸಹಕರಿಸಬೇಕು ಎಂದು ಹೇಳಿದ್ದರು. ಅವರ ಹೇಳಿಕೆ ವ್ಯಾಪಕವಾಗಿ ಹರಿದಾಡಿತ್ತು, ಇದರಿಂದ ಬಿಜೆಪಿ ನಾಯಕರಿಗೆ ತೀವ್ರ ಇರಿಸುಮುರಿಸು ಉಂಟಾಗಿತ್ತು.

ಕಾಂಗ್ರೆಸ್ಸಿನವರೇ ನನ್ನನ್ನು ಗೆಲ್ಲಿಸುತ್ತಾರೆ: ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್ ಕಾಂಗ್ರೆಸ್ಸಿನವರೇ ನನ್ನನ್ನು ಗೆಲ್ಲಿಸುತ್ತಾರೆ: ಬಿಜೆಪಿ ಅಭ್ಯರ್ಥಿ ಉಮೇಶ್‌ ಜಾಧವ್

ತಮ್ಮ ಹೇಳಿಕೆ ನಕಾರಾತ್ಮಕವಾಗಿ ಪರಿಣಮಿಸುತ್ತಿದೆ ಎಂಬುದನ್ನು ಅರಿತ ಉಮೇಶ್ ಜಾಧವ್ ಅದಕ್ಕೆ ವಿವರಣೆ ನೀಡುವ ಮೂಲಕ ತಿಳಿಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಸ್ಪಷ್ಟೀಕರಣ ನೀಡಿರುವ ಜಾಧವ್, ತಾವು ಆ ಅರ್ಥದಲ್ಲಿ ಹೇಳಿಲ್ಲ ಎಂದಿದ್ದಾರೆ.

ಬಿಜೆಪಿ ಸರಿಹೋಗುತ್ತಿಲ್ಲ

ಬಿಜೆಪಿ ಸರಿಹೋಗುತ್ತಿಲ್ಲ

'ನನಗೆ ಬಿಜೆಪಿ ಸರಿಹೋಗುತ್ತಿಲ್ಲ. ನನ್ನ ಗೆಲುವಿಗೆ ನೀವು ಸಹಕಾರ ನೀಡಬೇಕು. ನಿಮ್ಮ ಕಾಲಿಗೆ ಬಿದ್ದು ಕೇಳಿಕೊಳ್ಳುವೆ' ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಅವರಿಗೆ ಕೈಮುಗಿದು ಕೇಳಿಕೊಂಡಿದ್ದರು.

'ಈ ಬಾರಿ ಚುನಾವಣೆಯಲ್ಲಿ ಪಕ್ಷವನ್ನು ನಂಬಿಕೊಂಡಿದ್ದರೆ ನನಗೆ ಸೋಲು ಖಚಿತ. ಆದ್ದರಿಂದ ನೀವು ನನ್ನ ಗೆಲುವಿಗೆ ಸಹಾಯ ಮಾಡಬೇಕು' ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದರು.

ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ ಅಂತಿಮ, 12 ಅಭ್ಯರ್ಥಿಗಳು ಗುಲ್ಬರ್ಗ ಕ್ಷೇತ್ರದ ಚುನಾವಣಾ ಕಣ ಅಂತಿಮ, 12 ಅಭ್ಯರ್ಥಿಗಳು

ಐಎಎಸ್ ಅಧಿಕಾರಿಗಳು ಒತ್ತಾಯಿಸಿದ್ದರು

ಐಎಎಸ್ ಅಧಿಕಾರಿಗಳು ಒತ್ತಾಯಿಸಿದ್ದರು

'ಅನೇಕ ನಿವೃತ್ತ ಐಎಎಸ್​​​ ಅಧಿಕಾರಿಗಳು ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಬಹಳ ನೋವುಂಟು ಮಾಡಿದ್ದಾರೆ. ಅದಕ್ಕೆ ನೀವು ಚುನಾವಣೆಗೆ ನಿಲ್ಲಬೇಕು ನಾವೆಲ್ಲರೂ ನಿಮಗೆ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದರು ಎಂದು ಜಾಧವ್​​ ಹೇಳಿದರು.

ನರೇಂದ್ರ ಮೋದಿಗೆ ಹೆದರುವ ನಾಯಕ ನಾನಲ್ಲ : ಖರ್ಗೆ

ತಪ್ಪು ಮಾಡಿದ್ದಾಗಿ ಹೇಳಿಲ್ಲ

ತಪ್ಪು ಮಾಡಿದ್ದಾಗಿ ಹೇಳಿಲ್ಲ

'ನಾನು ತುಂಬಾ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. ನನ್ನ ಹೇಳಿಕೆಯನ್ನು ನೀವು ಹತ್ತು ಸಲ ಬೇಕಾದರೂ ರಿವೈಂಡ್ ಮಾಡಿ ಕೇಳಿ. ಪಕ್ಷದಲ್ಲಿ ಇದೇ ರೀತಿ ಸೆಟ್ ಆಗಲು ನಿಮ್ಮ ಆಶೀರ್ವಾದ ಬೇಕು ಎಂದಿದ್ದೆ. ನಾನು ಬಿಜೆಪಿ ಸೇರಿ ತಪ್ಪು ಮಾಡಿದ್ದೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಪಕ್ಷದಲ್ಲಿ ಇನ್ನೂ ಸೆಟ್ ಆಗುತ್ತಿದ್ದೇನೆ ಎಂದು ಮಾತ್ರ ಹೇಳಿದ್ದೆ ಎಂದಿದ್ದಾರೆ.

ಹೊಂದಿಕೊಳ್ಳಲು ಸಮಯ ಬೇಕಲ್ಲವೇ?

ಹೊಂದಿಕೊಳ್ಳಲು ಸಮಯ ಬೇಕಲ್ಲವೇ?

ಮದುವೆಯಾದ ಹೊಸತರಲ್ಲಿ ಹೊಂದಿಕೊಳ್ಳಲು ಗಂಡ-ಹೆಂಡತಿಗೆ ಸಮಯ ಬೇಕಾಗುವುದಿಲ್ಲವೇ ಹಾಗೆಯೇ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ ಎಂದು ಜಾಧವ್ ತಿಳಿಸಿದ್ದಾರೆ.

ನಮ್ಮ ಮನೆಗೆ ನೀವು ದಿನದ 24 ಗಂಟೆಯಲ್ಲಿ ಯಾವ ಸಮಯದಲ್ಲಿ ಬೇಕಾದರೂ ಬಂದು ಕೈ ಹಿಡಿದು ಕೆಲಸ ಮಾಡಿಕೊಳ್ಳಬಹುದು ಎಂದು ಕಲಬುರಗಿ ಜನತೆಗೆ ಉಮೇಶ್​​ ಜಾಧವ್​​ ಆಶ್ವಾಸನೆ ನೀಡಿದ್ದಾರೆ.

English summary
Lok Sabha elections 2019: Kalburgi BJP candidate Umesh Jadhav clarification to his earlier statement, I didn't mean that i can not able to set with BJP, I am happy with joining the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X