ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಂಚೋಳಿ ವನ್ಯಜೀವಿ ಧಾಮದಲ್ಲಿ 3 ಹಸುಗಳನ್ನು ತಿಂದ ಚಿರತೆ

|
Google Oneindia Kannada News

ಕಲಬುರಗಿ ಜುಲೈ 1: ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಕುಸರಂಪಳ್ಳಿಯ ಗೊಟ್ಟಂಗೊಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೂರು ಹಸುಗಳನ್ನು ಚಿರತೆ ತಿಂದು ಹಾಕಿದೆ.

ತೆಲಂಗಾಣದ ಪಡಿಯಾಲ ತಾಂಡಾ, ಕುಸ್ರಂಪಳ್ಳಿ ತಾಡಾ ಹಾಗೂ ಕುಸ್ರಂಪಳ್ಳಿ ಗ್ರಾಮದ ದನಗಳನ್ನು ಚಿರತೆ ಕೊಂದಿದೆ. ಚಿರತೆಯನ್ನು ದನ ಕಾಯುವ ಹುಡುಗರು ನೋಡಿದ್ದಾರೆ. ಇದುವರೆಗೆ ಮೂರು ಆಕಳುಗಳನ್ನು ಕೊಂದು ಚಿರತೆ ರಕ್ತ ಕುಡಿದಿದೆ.

ಚಾಮರಾಜನಗರ; ಬಾವಿಗೆ ಬಿದ್ದಿದ್ದ ಚಿರತೆ ಏಣಿ ಏರಿ ಪರಾರಿಚಾಮರಾಜನಗರ; ಬಾವಿಗೆ ಬಿದ್ದಿದ್ದ ಚಿರತೆ ಏಣಿ ಏರಿ ಪರಾರಿ

ಚಂದ್ರಂಪಳ್ಳಿ ಜಲಾಶಯದ ಹಿಂಬದಿಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಪ್ರತ್ಯಕ್ಷದಿಂದ ಜನರು ಆತಂಕಗೊಂಡಿದ್ದಾರೆ. ಜಾನುವಾರು ಸಾವನ್ನಪ್ಪಿರೋ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದೆ. ವಲಯ ಅರಣ್ಯಾಧಿಕಾರಿ ಸಂಜೀವ ಕುಮಾರ ಚವ್ಹಾಣ ಮತ್ತು ಅರಣ್ಯ ರಕ್ಷಕ ಸಿದ್ದಾ ರೂಢ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆಯ ಹೆಜ್ಜೆ ಗುರುತುಗಳ ಪತ್ತೆಗೆ ಸಿಬ್ಬಂದಿ ಮುಂದಾಗಿದ್ದಾರೆ.

Leopard Eaten Three Cows In Chincholi Wildlife Sanctuary

ಈ ಪ್ರದೇಶದ ಗ್ರಾಮಗಳಲ್ಲಿ ಡಂಗೂರ ಸಾರಿ ಜಾಗೃತಿ ನೀಡಲಾಗಿದೆ.ಅರಣ್ಯ ಪ್ರದೇಶದ ಕಡೆ ಹೋಗದಿರುವಂತೆ, ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಚಿರತೆ ಕಾಣಿಸಿಕೊಂಡಿಲ್ಲ. ಊರವರಿಗೆ ಕಾಣಸಿಕೊಂಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸಜೀವಕುಮಾರ ಚವ್ಹಾಣ ಮಾಹಿತಿ ನೀಡಿದ್ದಾರೆ.

English summary
The leopard has eaten three cows in chincholi wildlife sanctuary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X