• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚುನಾವಣೆ; ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ. 73.32ರಷ್ಟು ಮತದಾನ

|

ಕಲಬುರಗಿ, ಅಕ್ಟೋಬರ್ 28: ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬುಧವಾರ ಮತದಾನ ನಡೆಯಿತು. ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಒಟ್ಟು ಶೇ. 73.32 ರಷ್ಟು ಮತದಾನವಾಗಿದೆ. ನವೆಂಬರ್ 2ರಂದು ಫಲಿತಾಂಶ ಪ್ರಕಟವಾಗಲಿದೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಒಳಪಡುತ್ತವೆ. ಬುಧವಾರ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯ ತನಕ ಕಲಬುರಗಿ ಜಿಲ್ಲೆಯಲ್ಲಿ ಶೇ. 67.72 ರಷ್ಟು ಮತದಾನವಾಗಿದೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ 62ರಷ್ಟು ಮತದಾನ

ಜಿಲ್ಲೆಯಲ್ಲಿ ಒಟ್ಟು 9,529 ಮತದಾರರು ಇದ್ದರು. 6,453 ಮತದಾರರು ಮತ ಚಲಾಯಿಸಿದ್ದಾರೆ. ಇದರಲ್ಲಿ 4,245 ಪುರುಷರು ಹಾಗೂ 2,208 ಮಹಿಳಾ ಮತದಾರರು ಇದ್ದಾರೆ. ಕಲಬುರಗಿ ನಗರದ 8 ಸೇರಿದಂತೆ ಜಿಲ್ಲೆಯ ಒಟ್ಟು 41 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ.

ಪರಿಷತ್ ಚುನಾವಣೆ; ಕೋವಿಡ್ ಮಾರ್ಗಸೂಚಿಗಳು

"ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು ಒಟ್ಟು ಶೇ. 73.32 ರಷ್ಟು ಮತದಾನವಾಗಿದೆ" ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆ; ನೋಟಾ ಆಯ್ಕೆ ಲಭ್ಯವಿಲ್ಲ

ಕ್ಷೇತ್ರದಲ್ಲಿ ಒಟ್ಟು 29,236 ಮತದಾರರು ಇದ್ದರು. 21,436 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 15,058 ಪುರುಷರು ಹಾಗೂ 6,378 ಮಹಿಳಾ ಮತದಾರರು ಇದ್ದಾರೆ.

ಜಿಲ್ಲಾವಾರು ವಿವರ: ಕಲಬುರಗಿ ಜಿಲ್ಲೆಯಲ್ಲಿ ಶೇ. 67.72, ಯಾದಗಿರಿಯಲ್ಲಿ ಶೇ. 81.59, ರಾಯಚೂರು ಜಿಲ್ಲೆಯಲ್ಲಿ ಶೇ. 74.97, ಬೀದರ್‌ನಲ್ಲಿ ಶೇ. 74.40, ಬಳ್ಳಾರಿಯಲ್ಲಿ ಶೇ. 74.34 ಹಾಗೂ ಕೊಪ್ಪಳದಲ್ಲಿ ಶೇ. 80.86 ರಷ್ಟು ಮತದಾನವಾಗಿದೆ.

English summary
Total 73.32 per cent voting in Karnataka north east teachers constituency. Voting held to elect legislative council member. Election result will be announced on November 2, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X