• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಳ್ಳುಹಂದಿ ಕೊಂದು ತಿಂದು ಜೈಲು ಸೇರಿದ 'ಟಿಕ್ ಟಾಕ್' ಭೂಪ.!

|

ಮಾರ್ಚ್ 02, : ಹಾಡುಗಳಿಗೆ ಹೆಜ್ಜೆ ಹಾಕುವುದು, ಅಬ್ಬರದ ಡೈಲಾಗ್ ಗಳಿಗೆ ಡಬ್ ಮಾಡುವುದು, ಜನಪ್ರಿಯ ಸನ್ನಿವೇಶಗಳಿಗೆ ಅಬ್ಬರಿಸಿ, ಬೊಬ್ಬಿರಿಯುವುದು ಟಿಕ್ ಟಾಕ್ ನಲ್ಲಿ ಕಾಮನ್. ಕೆಲವರಂತೂ ಟಿಕ್ ಟಾಕ್ ನಲ್ಲಿ ತಮ್ಮ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳಲು ಮಾಡುವ ಸಾಹಸ ಒಂದೆರಡಲ್ಲ ಬಿಡಿ.

ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಲು ಹೋಗಿ ಕೆಲವರು ಬೆನ್ನು ಮೂಳೆ ಮುರಿದುಕೊಂಡಿದ್ದು, ಪ್ರಾಣಕ್ಕೆ ಅಪಾಯ ತಂದುಕೊಂಡ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದಿವೆ. ಹೀಗಿರುವಾಗಲೇ, ಟಿಕ್ ಟಾಕ್ ನಲ್ಲಿ ಫಾಲೋವರ್ಸ್ ಸಂಖ್ಯೆ ಜಾಸ್ತಿ ಮಾಡಿಕೊಳ್ಳುವ ಸಲುವಾಗಿ ಓರ್ವ ವ್ಯಕ್ತಿ ಮುಳ್ಳುಹಂದಿಯನ್ನೇ ಕೊಂದು ತಿಂದಿದ್ದಾನೆ.

ತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆತುಮಕೂರಿನ ಬನ್ನಿಕುಪ್ಪೆ ಅರಣ್ಯದಲ್ಲಿ ಮಹಿಳೆಯನ್ನು ಕೊಂದು ತಿಂದಿರುವ ಚಿರತೆ

ಟಿಕ್ ಟಾಕ್ ವಿಡಿಯೋಗಾಗಿ ವನ್ಯಜೀವಿಯನ್ನ ಕೊಂದು ತಿಂದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಜೈಲಿನಲ್ಲಿ ಮುದ್ದೆ ಮುರಿಯುವ ಹಾಗಾಗಿದೆ. ಮುಂದೆ ಓದಿರಿ...

ಟಿಕ್ ಟಾಕ್ ಗಾಗಿ ಮುಳ್ಳುಹಂದಿ ತಿಂದ ವ್ಯಕ್ತಿ

ಟಿಕ್ ಟಾಕ್ ಗಾಗಿ ಮುಳ್ಳುಹಂದಿ ತಿಂದ ವ್ಯಕ್ತಿ

ಕಲಬುರ್ಗಿ ಮೂಲದ 25 ವರ್ಷದ ಮಂಜುನಾಥ್ ಬಿರಿಯಾಲ್ಹಿಸ್ಸಾ ಎಂಬ ವ್ಯಕ್ತಿ ಸ್ನೇಹಿತರ ಜೊತೆಗೆ ಸೇರಿಕೊಂಡು ಮುಳ್ಳುಹಂದಿ (ಇಂಡಿಯನ್ ಪಾರ್ಕ್ಯುಪೈನ್) ಯನ್ನ ಕೊಂದು ತಿಂದಿದ್ದಾನೆ. ಬಳಿಕ 18 ಸೆಕೆಂಡ್ ಗಳನ್ನ ವಿಡಿಯೋ ಮಾಡಿ ಟಿಕ್ ಟಾಕ್ ನಲ್ಲಿ ಹಾಕಿದ್ದಾನೆ.

ಮುಳ್ಳುಹಂದಿಯನ್ನ ಕಲ್ಲಲ್ಲಿ ಹೊಡೆದು ಸಾಯಿಸಿದರು

ಮುಳ್ಳುಹಂದಿಯನ್ನ ಕಲ್ಲಲ್ಲಿ ಹೊಡೆದು ಸಾಯಿಸಿದರು

ಕಳೆದ ಶುಕ್ರವಾರ ವಿಜಯಪುರದ ಸಿಂಧಗಿ ಪ್ರದೇಶದಲ್ಲಿ ಮುಳ್ಳುಹಂದಿಯನ್ನ ಹಿಡಿದು, ಮಂಜುನಾಥ್ ಮತ್ತು ಸ್ನೇಹಿತರು ಕಲ್ಲಲ್ಲಿ ಹೊಡೆದು ಸಾಯಿಸಿದ್ದಾರೆ. ಬಳಿಕ ಮುಳ್ಳುಹಂದಿಯ ಮಾಂಸವನ್ನು ಫ್ರೈ ಮಾಡಿಕೊಂಡು ತಿಂದಿದ್ದಾರೆ. ಈ ಬಗ್ಗೆ ಟಿಕ್ ಟಾಕ್ ವಿಡಿಯೋದಲ್ಲಿ ಮಂಜುನಾಥ್ ಮಾತನಾಡಿದ್ದಾನೆ. ವಿಡಿಯೋ ಮೂಲಕ ವಿಷಯ ತಿಳಿದ ಪೊಲೀಸರು ಮಂಜುನಾಥ್ ನ ಬಂಧಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿ ಶಂಕಾಸ್ಪದ ಸಾವುಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿ ಶಂಕಾಸ್ಪದ ಸಾವು

ಜೈಲು ಸೇರಿದ ಮಂಜುನಾಥ್

ಜೈಲು ಸೇರಿದ ಮಂಜುನಾಥ್

ಜೇವರ್ಗಿ ತಾಲೂಕಿನ ನಿವಾಸಿ ಮಂಜುನಾಥ್ ನ ಅರಣ್ಯ ಅಧಿಕಾರಿಗಳು ಮಾರ್ಚ್ 1 ರಂದು ಟ್ರ್ಯಾಕ್ ಮಾಡಿ ಬಂಧಿಸಿದ್ದಾರೆ. ಟಿಕ್ ಟಾಕ್ ನಲ್ಲಿ ಹೆಚ್ಚು ಲೈಕ್ಸ್ ಮತ್ತು ಹಿಂಬಾಲಕರನ್ನು ಪಡೆಯಲು ಹೋಗಿ, ಮಂಜುನಾಥ್ ಜೈಲು ಸೇರುವಂತಾಗಿದೆ.

ಟಿಕ್ ಟಾಕ್ ಗೀಳು

ಟಿಕ್ ಟಾಕ್ ಗೀಳು

ವನ್ಯಜೀವಿ ಸಂರಕ್ಷಣಾ ಕಾಯ್ಡೆ 1972 ಅಡಿ ಬರುವ ಮುಳ್ಳುಹಂದಿಯನ್ನು ಬೇಟೆಯಾಡುವುದು, ಕೊಲ್ಲುವುದು ಅಪರಾಧ. ಇಲ್ಲಿಯವರೆಗೂ ಟಿಕ್ ಟಾಕ್ ಗಾಗಿ ಹಲವು ಬಾರಿ ಸಾಹಸ ಪ್ರದರ್ಶಿಸಿ ವಿಡಿಯೋ ಮಾಡಿ ತನ್ನ ಊರಲ್ಲಿ ಫೇಮಸ್ ಆಗಿದ್ದ ಮಂಜುನಾಥ್ ಇದೀಗ ಟಿಕ್ ಟಾಕ್ ಗೀಳಿನಿಂದಾಗಿ ವನ್ಯಜೀವಿಯೊಂದನ್ನ ಕೊಂದಿದ್ದಾನೆ. ಟಿಕ್ ಟಾಕ್ ಗೀಳು ಏನೆಲ್ಲ ಮಾಡಿಸುತ್ತೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ.

ಬಂಡೀಪುರದ ಹೆದ್ದಾರಿಯಲ್ಲಿ ರಾಜಗಾಂಭೀರ್ಯ ಮೆರೆದ ಕರಡಿಬಂಡೀಪುರದ ಹೆದ್ದಾರಿಯಲ್ಲಿ ರಾಜಗಾಂಭೀರ್ಯ ಮೆರೆದ ಕರಡಿ

English summary
Karnataka Man arrested for killing porcupine and eating its meat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X