ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 23ರ ಬಳಿಕ ಬಿಜೆಪಿಯವರು ಕಾಂಗ್ರೆಸ್ ಸೇರ್ತಾರೆ : ಕೆಸಿ ವೇಣುಗೋಪಾಲ್

|
Google Oneindia Kannada News

ಕಲಬುರಗಿ, ಮೇ 13 : 'ಮೇ 23ರ ಬಳಿಕವೂ ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುಂದುವರೆಯಲಿದೆ. ಬಿಜೆಪಿಯವರು ವರ್ಷಗಳಿಂದ ಮೈತ್ರಿ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಿದ್ದಾರೆ' ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸೋಮವಾರ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಪತ್ರಿಕಾಗೋಷ್ಠಿ ನಡೆಸಿದರು. 'ಮೇ 23ರ ಬಳಿಕ ಮೋದಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ' ಎಂದರು.

ಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿ

'ಈ ತನಕ ರಾಜ್ಯದ ಮೈತ್ರಿ ಸರ್ಕಾರಕ್ಕೆ ಏನೂ ಆಗಿಲ್ಲ. ಸಮ್ಮಿಶ್ರ ಸರ್ಕಾರ ಐದು ವರ್ಷಗಳನ್ನು ಪೂರೈಸಲಿದೆ. ಮೇ 23ರ ಬಳಿಕ ಬಿಜೆಪಿಯವರೇ ಕಾಂಗ್ರೆಸ್ ಸೇರಲಿದ್ದಾರೆ. ಕಾಂಗ್ರೆಸ್‌ನ ಯಾವ ಶಾಸಕರು ಬಿಜೆಪಿಗೆ ಹೋಗುವುದಿಲ್ಲ' ಎಂದು ತಿಳಿಸಿದರು.

ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?ಡಿಕೆಶಿ ಜೊತೆ ಕಾಣಿಸಿಕೊಂಡ ಮಹೇಶ್ ಕಮಟಳ್ಳಿ, ರಮೇಶ್ ಏಕಾಂಗಿ?

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಭಾನುವಾರದಿಂದ ಚಿಂಚೋಳಿ, ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರವನ್ನು ಕೈಗೊಂಡಿದ್ದಾರೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.....

ಸಣ್ಣ-ಪುಟ್ಟ ಗೊಂದಲಗಳಿವೆ

ಸಣ್ಣ-ಪುಟ್ಟ ಗೊಂದಲಗಳಿವೆ

'ಮೇ 23ರ ಬಳಿಕವೂ ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಮುಂದುವರೆಯಲಿದೆ. ಮೈತ್ರಿ ಪಕ್ಷಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಣ್ಣ-ಪುಟ್ಟ ಗೊಂದಲಗಳಿದ್ದರೆ ಬಗೆಹರಿಸಿಕೊಳ್ಳಲಾಗುತ್ತದೆ. ಆದರೆ, ಸರ್ಕಾರ ಪತನ ಅಸಾಧ್ಯ' ಎಂದು ಕೆ.ಸಿ.ವೇಣುಗೋಪಾಲ್ ಹೇಳಿದರು.

ಉಪ ಚುನಾವಣೆ ದುರದೃಷ್ಟಕರ

ಉಪ ಚುನಾವಣೆ ದುರದೃಷ್ಟಕರ

ಡಾ.ಉಮೇಶ್ ಜಾಧವ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆ.ಸಿ.ವೇಣುಗೋಪಾಲ್ ಅವರು, 'ಚಿಂಚೋಳಿ ಚುನಾವಣೆ ಅನಿವಾರ್ಯ ಆಗಿರಲಿಲ್ಲ. ಉಮೇಶ್ ಜಾಧವ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ ಹಲವು ಸ್ಥಾನಮಾನಗಳನ್ನು ನೀಡಲಾಗಿತ್ತು. ಆದರೆ, ಅದೆಲ್ಲವನ್ನೂ ಮರೆತು ಬಿಜೆಪಿಗೆ ಹೋಗಿ ಕಾಂಗ್ರೆಸ್‌ಗೆ ದ್ರೋಹ ಬಗೆದಿದ್ದಾರೆ' ಎಂದರು.

ತಕ್ಕಪಾಠ ಕಲಿಸಲಿದ್ದಾರೆ

ತಕ್ಕಪಾಠ ಕಲಿಸಲಿದ್ದಾರೆ

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, 'ಪಕ್ಷಾಂತರ ಮಾಡಿದ ಡಾ.ಉಮೇಶ್ ಜಾಧವ್ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಅವರ ವ್ಯಕ್ತಿತ್ವ ಏನೆಂದು ಜನಸಾಮಾನ್ಯರಿಗೆ ಗೊತ್ತಾಗಿದೆ. ಅಧಿಕಾರಕ್ಕಾಗಿ ಏನೇನು ಮಾಡಿದ್ದಾರೆ ತಿಳಿದಿದೆ' ಎಂದು ಹೇಳಿದರು.

ಉಪ ಚುನಾವಣೆ ಗೆಲ್ಲುತ್ತೇವೆ

ಉಪ ಚುನಾವಣೆ ಗೆಲ್ಲುತ್ತೇವೆ

'ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಬಿಜೆಪಿಯವರು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ವಿಧಾನಸೌಧದ ಮೂರನೇ ಮಹಡಿ ಮಾತ್ರ ಕಾಣುತ್ತಿದೆ. ರಾಜ್ಯದಲ್ಲಿನ ಬರದ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ' ಎಂದು ದಿನೇಶ್ ಗುಂಡೂರಾವ್ ದೂರಿದರು.

English summary
Karnataka coalition govt will continue after May 23 Lok sabha elections 2019 result said Karnataka Congress in-charge K.C.Venugopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X