ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಹಿತ್ಯ ಸಮ್ಮೇಳನದಲ್ಲಿ ಮಿಂಚಿದ 'ಭುವನೇಶ್ವರಿ' ವೇಷಧಾರಿ

|
Google Oneindia Kannada News

ಕಲಬುರಗಿ, ಫೆಬ್ರವರಿ 7: ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಯುತ್ತಿದೆ. ಲಕ್ಷಾಂತರ ಜನರು ಈ ಕನ್ನಡ ನುಡಿ ಜಾತ್ರೆಯಲ್ಲಿ ಮಿಂದೆದ್ದು ಕನ್ನಡಾಭಿಮಾನ ತೋರುತ್ತಿದ್ದಾರೆ.

ಈ ಸಮ್ಮೇಳನದಲ್ಲಿ ಆಕರ್ಷಣಿಯವಾಗಿ ಕಂಡುಬಂದಿದ್ದು, ಕನ್ನಡಾಭಿಮಾನಿ ಶೋಭಾ ತಲೆ ಮೇಲೆ ಕನ್ನಡದ ಕಿರೀಟ ತೊಟ್ಟು ನೆರೆದಿದ್ದ ಜನರ ಗಮನಸೆಳೆದಿರುವುದು. ಜೊತೆಗೆ ಕನ್ನಡ ಧ್ವಜದ ಬಣ್ಣವಿರೋ ಉಡುಪು ಧರಿಸಿ ಕನ್ನಡ ಬಾವುಟ ಕೈಯಲ್ಲಿ ಹಿಡಿದುಕೊಂಡು ಕನ್ನಡ ಅಭಿಮಾನವನ್ನ ವ್ಯಕ್ತಪಡಿಸಿದರು. ಭುವನೇಶ್ವರಿಯ ವೇಷ ಧರಿಸಿ ಅಭಿಮಾನ ಮೆರೆದರು.

ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲಿ

ಶೋಭಾ ಅವರು ಮೂಲತ: ಹುಬ್ಬಳ್ಳಿಯವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ತೆರಳಿ ಕನ್ನಡದ ಕಂಪು ಪಸರಿಸುತ್ತಿದ್ದಾರೆ. ಇನ್ನು ಕನ್ನಡದಂತಹ ಹಬ್ಬಗಳು ಎಲ್ಲೆ ನಡೆದರೂ ಅಲ್ಲಿ ಶೋಭಾ ಅವರು ಹಾಜರಿರುತ್ತಾರೆ. ಇಂಥ ಕನ್ನಾಡಾಭಿಮಾನಿ ಶೋಭಾ ಅವರಿಗೆ ನಮ್ಮ ನಿಮ್ಮ ಕಡೆಯಿಂದ ಶುಭ ಹಾರೈಸೋಣ.

Kannada Fan Focus In 85th Akhil Bharat Kannada Sahitya Sammelana

ಕಲಬುರಗಿಯ ಗುಲ್ಬರ್ಗಾ ವಿವಿ ಆವರಣದಲ್ಲಿ ಸಮ್ಮೇಳನ ಕಳೆದ ಫೆ ೫ ರಿಂದ ನಡೆಯುತ್ತಿದೆ. ಶುಕ್ರವಾರ ಸಂಜೆ ಸಮ್ಮೇಳನಕ್ಕೆ ಅದ್ಧೂರಿ ತೆರೆ ಬಿಳ್ಳಲಿದೆ. ಮುಂದಿನ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಏಲಕ್ಕಿ ಕಂಪಿನ ನಗರಿ ಹಾವೇರಿಯಲ್ಲಿ ನಡೆಯಲಿದೆ.

English summary
A Kannada Lady Fan Focus In 85th Akhil Bharat Kannada Sahitya Sammelana. Lady Shoba Wear The Bhuvaneshwari Dress And Kannada Peta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X