ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: SSLC ಯಲ್ಲಿ 51% ಅಂಕ ಪಡೆದ ಮಗನಿಗೆ ಡಿಜೆ ಬ್ಯಾಂಡ್ ಸ್ವಾಗತ

ದೇವಪ್ಪನವರು ತಮ್ಮ ಮಗ ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ ಎಂದುಕೊಂಡಿದ್ದರಂತೆ. ಆದರೆ ಫಲಿತಾಂಶ ಬಂದಾಗ ಮಗ ಪಾಸ್ ಆಗಿದ್ದ. ಇದರಿಂದ ಖುಷಿಯಾದ ತಂದೆ ಮಗನಿಗೆ ಭರ್ಜರಿ ಸ್ವಾಗತ ನೀಡಿ ಊರಿಗೆ ಕರೆ ತಂದಿದ್ದಾರೆ.

By Sachhidananda Acharya
|
Google Oneindia Kannada News

ಕಲಬುರಗಿ, ಮೇ 17: ರ್ಯಾಂಕ್ ಪಡೆದ ಮಕ್ಕಳೊಂದಿಗೆ ತಂದೆ ತಾಯಿ ಸಂಭ್ರಮಿಸುವುದನ್ನು ಕೇಳಿದ್ದೇವೆ. ಇನ್ನೂ ಕೆಲವು ಕಡೆಗಳಲ್ಲಿ ಶೇಕಡಾ 90 ಅಂಕ ಪಡೆದರೂ ತಂದೆ ತಾಯಿ ಮಕ್ಕಳಿಗೆ ಯಾವುದೇ ಕೊಡುಗೆ ನೀಡುವುದಿಲ್ಲ. ಆದರೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನ ಹಳ್ಳಿಯ ಈ ತಂದೆ ಹಾಗಲ್ಲ.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಗ ಶೇಕಡಾ 51 ಅಂಕಗಳನ್ನು ಪಡೆದು ಪಾಸಾಗಿದ್ದಕ್ಕೆ ತಂದೆ ಡಿಜೆ ಬ್ಯಾಂಡ್ ಮೂಲಕ ಮಗನನ್ನು ಭರ್ಜರಿ ಮೆರವಣಿಗೆಯಲ್ಲಿ ಊರಿಗೆ ಕರೆತಂದಿದ್ದಾರೆ.

 Kalburgi: Father takes out procession with DJ Band for Son who passes SSLC with 51%

ಸೇಡಂನ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ ದೇವಪ್ಪ ಎಂಬವವರ ಮಗ ಅರ್ಜುನ್ ಈ ಅದ್ದೂರಿ ಸ್ವಾಗತ ಪಡೆದ ಅದೃಷ್ಟಶಾಲಿ.

ದೇವಪ್ಪನವರು ತಮ್ಮ ಮಗ ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ ಎಂದುಕೊಂಡಿದ್ದರಂತೆ. ಆದರೆ ಫಲಿತಾಂಶ ಬಂದಾಗ ಮಗ ಪಾಸ್ ಆಗಿದ್ದ. ಇದರಿಂದ ಖುಷಿಯಾದ ತಂದೆ ಮಗನಿಗೆ ಭರ್ಜರಿ ಸ್ವಾಗತ ನೀಡಿ ಊರಿಗೆ ಕರೆ ತಂದಿದ್ದಾರೆ.

ಶೇಕಡಾ 51 ಅಂಕ ಪಡೆದಿದ್ದಕ್ಕೆ ಸಾವಿರಾರು ರೂಪಾಯಿ ಖರ್ಜು ಮಾಡಿ ಮಗನಿಗೆ ಅದ್ದೂರಿ ಸ್ವಾಗತ ನೀಡಿದ್ದನ್ನು ನೋಡಿ ಗ್ರಾಮಸ್ಥರೆಲ್ಲಾ ಮೂಗು ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಎಲ್ಲಿಯಾದರೂ ಆತ ಡಿಸ್ಟಿಂಕ್ಷನ್ ಪಡೆದಿದ್ದರೆ ಪರಿಸ್ಥಿತಿ ಏನಿರುತ್ತಿತ್ತೋ ದೇವರೇ ಬಲ್ಲ!

English summary
For some people it may look bit unusual. A proud father spent thousands of rupees to celebrate when his son passed SSLC exam with just 51% marks in Sedam talluk of Kalaburgi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X