ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಕಲಬುರಗಿಯಲ್ಲಿ ವೃದ್ಧನ ಸಾವಿಗೆ ಕೊರೊನಾ ವೈರಸ್ ಕಾರಣವಲ್ಲ"

|
Google Oneindia Kannada News

ಕಲಬುರಗಿ, ಮಾರ್ಚ್.11: ಸೌದಿ ಅರೆಬಿಯಾದಿಂದ ವಾಪಸ್ ಆದ ಬಳಿಕ ಕಲಬುರಗಿಯಲ್ಲಿ ಪ್ರಾಣ ಬಿಟ್ಟ 76 ವರ್ಷದ ವೃದ್ಧನಲ್ಲಿ ಕೊರೊನಾ ವೈರಸ್ ಸೋಂಕು ಇರಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ.

ಕಲಬುರಗಿಯಲ್ಲಿ ಬುಧವಾರ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಈ ಬಗ್ಗೆ ಮಾತನಾಡಿದರು. ಮೃತ ವೃದ್ಧನ ಗಂಟಲಿನಲ್ಲಿರುವ ದ್ರಾವಣವನ್ನು ಪರೀಕ್ಷಿಸಲಾಗಿದ್ದು, ಕೊರೊನಾ ವೈರಸ್ ಸೋಂಕು ನೆಗೆಟಿವ್ ಎಂದು ಬಂದಿದೆ.

ಕಲಬುರಗಿ ವೃದ್ಧ ಶಂಕಿತ ಕೊರೊನಾಗೆ ಬಲಿ; ಡಿಸಿ ಹೇಳಿದ್ದೇನು? ಕಲಬುರಗಿ ವೃದ್ಧ ಶಂಕಿತ ಕೊರೊನಾಗೆ ಬಲಿ; ಡಿಸಿ ಹೇಳಿದ್ದೇನು?

ಕಳೆದ ಫೆಬ್ರವರಿ.29ರಂದು ಸೌದಿ ಅರೆಬಿಯಾದಿಂದ 76 ವರ್ಷದ ವೃದ್ಧ ಹೈದ್ರಾಬಾದ್​ ಏರ್​ಪೋರ್ಟ್​ಗೆ ಆಗಮಿಸಿದ್ದರು. ಮಾ.5ರಂದು ವೃದ್ಧನ ಪರೀಕ್ಷೆ ನಡೆಸಲಾಗಿತ್ತು. ಮಾ.6ರಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಅವರೇ ಸ್ವಇಚ್ಛೆಯಿಂದ ಮಾ. 9ರಂದು ಹೈದ್ರಾಬಾದ್​ಗೆ ತೆರಳಿದ್ದರು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

Kalburgi Death: 76 Year Old-Man Not Infected By Coronavirus

ಮೃತಪಟ್ಟ ವೃದ್ಧನಲ್ಲಿ ಹೈ-ಬಿಪಿ, ಅಸ್ತಮಾ:

ಬುಧನವಾರ ಮೃತಪಟ್ಟ ವೃದ್ಧ ಅಸ್ತಮಾ ಮತ್ತು ಬಿಪಿ ಪೇಶೆಂಟ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ಹೈದ್ರಾಬಾದ್ ಗೆ ತೆರಳಿದ್ದರೇ ವಿನಃ ಯಾವುದೇ ರೀತಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ. ಇನ್ನು, ರಾಜ್ಯದಲ್ಲಿ ಇದುವರೆಗೂ 1ಲಕ್ಷಕ್ಕೂ ಅಧಿಕ ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂತು ತಿಳಿಸಿದ್ದಾರೆ.

English summary
Kalburgi Death: 76 Year Old-Man Not Infected By Coronavirus. Karnataka Health Minister Shreeramulu Clarification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X