• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರಗಿಯ ಕಾಳಗಿ ಮಠದ ಶಿವಬಸವಚಾರ್ಯ ಸ್ವಾಮೀಜಿ ನಿಧನ

|
Google Oneindia Kannada News

ಕಲಬುರಗಿ, ಜುಲೈ 12: ಕಲಬುರಗಿಯ ಹಿರೇಮಠ ದಕ್ಷಿಣ ಕಾಳಗಿ ಮಠದ ಶಿವಬಸವಚಾರ್ಯ ಸ್ವಾಮೀಜಿ (51) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಸೋಮವಾರ ಬೆಳಗ್ಗೆ 9 ಗಂಟೆಗೆ ಕಾಳಗಿ ಮಠದಲ್ಲಿರುವಾಗಲೇ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಮಠದ ಭಕ್ತರು ಶಿವಬಸವಚಾರ್ಯರನ್ನು ಪಕ್ಕದಲ್ಲಿರುವ ಕಾಳಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ದಾಖಲಾದ ಕೆಲವೇ ನಿಮಿಷಗಳಲ್ಲಿ ತೀವ್ರ ಹೃದಯಾಘಾತದಿಂದ ಶ್ರೀಗಳು ಸಾವನ್ನಪ್ಪಿದ್ದಾರೆ.

ಶಿವಬಸವಚಾರ್ಯ ಶ್ರೀಗಳ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಾಳಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತರು ಶ್ರೀಗಳ ದರ್ಶನ ಪಡೆಯಲು ಮಠದತ್ತ ಆಗಮಿಸಿದರು.

ಶ್ರೀಗಳ ನಿಧನಕ್ಕೆ ಚಿಂಚೋಳಿ ಕ್ಷೇತ್ರದ ಶಾಸಕ ಡಾ.ಅವಿನಾಶ್ ಜಾಧವ್, ಸಂಸದ ಡಾ.ಉಮೇಶ್ ಜಾಧವ್ ಸಂತಾಪ ಸೂಚಿಸಿದ್ದಾರೆ. ಸೋಮವಾರ ಸಂಜೆ ಕಾಳಗಿ ಮಠದಲ್ಲಿ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲು ಮಠದ ಭಕ್ತರು ನಿರ್ಧರಿಸಿದ್ದಾರೆ.

English summary
Shivabasavacharya Swamiji (51) of Hiremath Dakshina Kalagi Math, Kalaburagi, died on Monday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X