ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ತಂದೆ ಸಾವು: ಮೃತ್ಯು ದವಡೆಯಿಂದ ಪಾರಾದ ಮಗಳು

|
Google Oneindia Kannada News

ಕಲಬುರಗಿ ಮಾರ್ಚ್ 31: ಕೊರೋನಾ ಸೋಂಕಿನಿಂದ‌ ಮೃತರಾದ ಕಲಬುರಗಿಯ 76 ವರ್ಷದ ವಯೋವೃದ್ಧನ ಮಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು,‌ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.

76 ವರ್ಷದ ವಯೋವೃದ್ಧ ಕಳೆದ‌ ಮಾರ್ಚ್ 10 ರಂದು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ. ಇದರಿಂದ ಕಲಬುರಗಿ ರೆಡ್ ಅಲರ್ಟ್ ಆಗಿ ಮಾರ್ಪಟ್ಟಿತ್ತು.

ಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆ

ಮೃತನ ನೇರ ಸಂಪರ್ಕದಲ್ಲಿ ಬಂದಿದ್ದ ಆತನ 45 ವರ್ಷದ ಮಗಳನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ದೃಢವಾದ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್ ನಲ್ಲಿಟ್ಟು ತೀವ್ರ ನಿಗಾದಡಿ ಚಿಕಿತ್ಸೆ ನೀಡಲಾಗಿತ್ತು.

ನೆಗೆಟಿವ್ ಕಂಡುಬಂದಿದೆ

ನೆಗೆಟಿವ್ ಕಂಡುಬಂದಿದೆ

ಚಿಕಿತ್ಸೆಯ 14 ದಿನಗಳ ನಂತರ ಸದರಿ ಮಹಿಳೆಗೆ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ‌ ನಂತರ‌ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

4 ಜನ ಪ್ರತ್ರಕರ್ತರಿಗೆ ಕ್ವಾರಂಟೈನ್

4 ಜನ ಪ್ರತ್ರಕರ್ತರಿಗೆ ಕ್ವಾರಂಟೈನ್

4 ಜನ ಪ್ರತ್ರಕರ್ತರೂ ಕ್ವಾರಂಟೈನ್ ಇನ್ನು ಸುದ್ದಿ ನೀಡುವ ಧಾವಂತದಲ್ಲಿ ಸೋಂಕಿತ ವ್ಯಕ್ತಿಯ ಕುಟುಂಬಸ್ಥರ ನೇರ ಸಂಪರ್ಕಕ್ಕೆ ಬಂದಿದ್ದ ನಾಲ್ಕು ಜನ ಪತ್ರಕರ್ತರನ್ನೂ ಕ್ವಾರಂಟೈನ್ ಮಾಡಲಾಗಿತ್ತು. ಅವರ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೊರೊನಾ ಹಾಟ್‌ಸ್ಪಾಟ್‌ ನಗರಗಳು

ಕೊರೊನಾ ಹಾಟ್‌ಸ್ಪಾಟ್‌ ನಗರಗಳು

ದೇಶದ ಗ್ರಾಮೀಣ ಪ್ರದೇಶಗಳನ್ನು ಹಾಗೂ ಸಣ್ಣ ತಾಲೂಕು ಜಿಲ್ಲಾ ಕೇಂದ್ರಗಳನ್ನು ಹೊರುತುಪಡಿಸಿ ಪ್ರಮುಖ ನಗರಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಹೆಚ್ಚು ಸೋಂಕು ಕಾಣಿಸಿಕೊಂಡ 17 ನಗರಗಳನ್ನು ಕೊರೊನಾ ಹಾಟ್‌ಸ್ಪಾಟ್‌ಗಳೆಂದು ಗುರುತಿಸಿ, ಆ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ.

43 ಜನ ಮೃತಪಟ್ಟಿದ್ದಾರೆ

43 ಜನ ಮೃತಪಟ್ಟಿದ್ದಾರೆ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ನಿಜಕ್ಕೂ ತನ್ನ ಅಟ್ಟಹಾಸವನ್ನು ತೋರಿಸುತ್ತಿದೆ. ಮಂಗಳವಾರಕ್ಕೆ 1300 ಹೆಚ್ಚು ಜನರಿಗೆ ಸೋಂಕು ತಗುಲಿ, 43 ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 98 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು 3 ಜನ ಮೃತಪಟ್ಟಿದ್ದಾರೆ.

English summary
Kalaburugi Corona Death Person Daughter Released From Hospital. she is tested positive and recovered from coronavirus. dc sharth b confirms it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X