ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಬಿಸಿಎಂ ಅಧಿಕಾರಿಗೆ ಶಾಸಕ ರೇವೂರು ಬೆಂಬಲಿಗರಿಂದ ಬೆದರಿಕೆ ಕರೆ

|
Google Oneindia Kannada News

ಕಲಬುರಗಿ, ಮೇ 29: ಕಲಬುರಗಿ ಜಿಲ್ಲಾ ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ್ ಸಂಗಾ ವರ್ಗಾವಣೆಗೆ ಕಲಬುರಗಿ ದಕ್ಷಿಣ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಒತ್ತಡ ಹಾಕಿದ್ದು, ಅಲ್ಲದೆ ಶಾಸಕರ ಬೆಂಬಲಿಗರು ಬೆದರಿಕೆ ಕರೆ ಮಾಡಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.

Recommended Video

ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು | Oneindia Kannada

ಬಿಸಿಎಂ ಅಧಿಕಾರಿ ರಮೇಶ್ ಸಂಗಾ ದುರ್ನಡತೆಯಿಂದ ವರ್ತಿಸುತ್ತಿದ್ದಾರೆ ಹೀಗಾಗಿ ವರ್ಗಾವಣೆ ಮಾಡುವಂತೆ ಶಾಸಕ ಪತ್ರ ಬರೆದಿದ್ದು, ಶಾಸಕ ದತ್ತಾತ್ರೇಯ ಪಾಟೀಲ್ ಆಪ್ತ ದೇವಿಂದ್ರ ಬಿರಾದರ್ ಎನ್ನುವವರ ನೇಮಕಕ್ಕೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಹಣ ಕೊಡದಿದ್ದಕ್ಕೆ ವರ್ಗಾವಣೆ ಮಾಡಲು ಮುಂದಾಗುತ್ತಿದ್ದಾರೆ ಎಂದು ಶಾಸಕ ದತ್ತಾತ್ರೇಯ ಪಾಟೀಲ್ ವಿರುದ್ಧ ಅಧಿಕಾರಿ ರಮೇಶ್ ಸಂಗಾ ಗಂಭೀರ ಆರೋಪ ಮಾಡಿದ್ದಾರೆ.

 ಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿ ಇದು ಪ್ರತಿಯೊಬ್ಬರ ಕರುಳು ಹಿಂಡುವ ಕರುಣಾಜನಕ ಸ್ಟೋರಿ

ಅನೇಕ ಬಾರಿ ಶಾಸಕರು ಮತ್ತು ಶಾಸಕರ ಆಪ್ತ ಸಹಾಯಕ ನನಗೆ ಮಾಮೂಲು ಹಣ ಕೇಳಿದ್ದರು. ನಾನು ಹಣ ಕೊಡದೇ ಇದ್ದಿದ್ದಕ್ಕೆ ತನಗೆ ಅಡ್ಡಿ ಮಾಡುತ್ತಿದ್ದಾರೆ, ತನಗೂ ಸೇರಿದಂತೆ ಜಿಲ್ಲೆಯ ಅಧಿಕಾರಿಗಳಿಗೆ ಶಾಸಕರು ಏಕ ವಚನದಲ್ಲಿಯೇ ಮಾತನಾಡುತ್ತಾರೆ ಎಂದು ಅಧಿಕಾರಿ ಆರೋಪಿಸಿದ್ದಾರೆ.

ಕಿರುಕುಳ ಕೊಟ್ಟರೆ ಕೆಲಸ ಮಾಡೋದು ಹೇಗೆ

ಕಿರುಕುಳ ಕೊಟ್ಟರೆ ಕೆಲಸ ಮಾಡೋದು ಹೇಗೆ

ಕೊರೊನಾ ವೈರಸ್ ಕೆಲಸಕ್ಕೂ ಕೂಡಾ ಶಾಸಕರು ಅಡ್ಡಿ ಮಾಡಿದ್ದಾರೆ. ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಅನೇಕ ಕಡೆ ಕ್ವಾರಂಟೈನ್ ಮಾಡಲು ಕೂಡ ಬಿಡಲಿಲ್ಲ. ಕೇವಲ ಪ್ರಚಾರಕ್ಕಾಗಿ ಅನೇಕ ಕೆಲಸ ಮಾಡುಉತ್ತಿದ್ದು, ನಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ಹೀಗಾದ್ರೆ ನಾವು ಕೆಲಸ ಮಾಡೋದು ಹೇಗೆ ಎಂದು ಅಧಿಕಾರಿ ರಮೇಶ್ ಸಂಗಾ ಪ್ರಶ್ನಿಸಿದ್ದಾರೆ.


ಅವರು ತನ್ನ ಹುದ್ದೆಗೆ ಬೇರೆಯವರನ್ನು ಹಾಕಿಸಲು ಯತ್ನಿಸಿದ್ದರು. ಆದರೆ ಸರ್ಕಾರ ನನ್ನನ್ನು ನೇಮಕ ಮಾಡಿತ್ತು, ಹೀಗಾಗಿ ಪ್ರತಿದಿನ ಶಾಸಕರು ಕಿರುಕುಳ ನೀಡುತ್ತಿದ್ದಾರೆ ಎಂದು ಬಿಸಿಎಂ ಅಧಿಕಾರಿ ರಮೇಶ್ ಸಂಗಾ ಹೇಳಿದ್ದಾರೆ.

ಬಿಸಿಎಂ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬಿಸಿಎಂ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ

ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ್ ಸಂಗಾರಿಂದ ಮಾಧ್ಯಮಗಳ ಮುಂದೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಶಾಸಕರ ಬೆಂಬಲಿಗ, ಪಾಲಿಕೆ ಸದಸ್ಯ ಪ್ರಭು ಹಾದಿಮನಿ ಅವರಿಂದ ಜೀವ ಬೆದರಿಕೆ ಕರೆ ಮಾಡಲಾಗಿದೆ.

""ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಬಗ್ಗೆ ನಿನಗೆನೋ ಗೊತ್ತು, ಕೂತ್ಕೊಂಡು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳೊದು ಬಿಟ್ಟು ಮಾಧ್ಯಮಗಳ ಮುಂದೆ ಯಾಕೆ ಹೋಗಿದಿಯಾ?'' ಎಂದು ತಡರಾತ್ರಿ ಕರೆ ಮಾಡಿ ಬಿಸಿಎಂ ಜಿಲ್ಲಾ ಅಧಿಕಾರಿ ಸಂಗಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ಗುಲ್ಬರ್ಗಾ ವಿವಿ ಠಾಣೆಯಲ್ಲಿ ಪ್ರಕರಣ ದಾಖಲು

ಗುಲ್ಬರ್ಗಾ ವಿವಿ ಠಾಣೆಯಲ್ಲಿ ಪ್ರಕರಣ ದಾಖಲು

""ಏಯ್.. ನಿನ್ನ ಮನೆ ಸಾಯಿ ಮಂದಿರ ಹತ್ತಿರ ಇದೆ, ಇರು ನಾವೆಲ್ಲ ಬರುತ್ತಿದ್ದೇವೆ ನಿಮ್ ಮನೆಗೆ, ನಿನಗೆ ಬಿಡಲ್ಲ.'' ಎಂದು ತಡರಾತ್ರಿ 1.30 ಕ್ಕೆ ಕರೆ ಮಾಡಿ ಕಾರ್ಪೋರೆಟರ್ ಪ್ರಭು ಹಾದಿಮನಿ ಹಾಗೂ ಇನ್ನೊಬ್ಬ ಬೆಂಬಲಿಗ ಚಂದ್ರಕಾಂತ ಜೀವ ಬೆದರಿಕೆ ಹಾಕಿದ್ದಾರೆ.

ಶಾಸಕರ ಬೆಂಬಲಿಗರಿಂದ ಜೀವ ಬೆದರಿಕೆ ಹಿನ್ನಲೆಯಲ್ಲಿ ಗುಲ್ಬರ್ಗಾ ವಿವಿ ಠಾಣೆಗೆ ಪಾಲಿಕೆ ಸದಸ್ಯ ಪ್ರಭು ಹಾದಿಮನಿ ವಿರುದ್ಧ ದೂರು ದಾಖಲಿಸಲಾಗಿದೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಪ್ರಾಣ ಬೆದರಿಕೆ ಇದೆ, ಸೂಕ್ತ ಭದ್ರತೆ ಒದಗಿಸಿ ಎಂದು ಬಿಸಿಎಂ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಮನವಿ ಮಾಡಿದ್ದಾರೆ.

ಅದು ಹೇಗೆ ನೀನು ಹೊರಗಡೆ ತಿರುಗಾಡುತ್ತಿಯಾ

ಅದು ಹೇಗೆ ನೀನು ಹೊರಗಡೆ ತಿರುಗಾಡುತ್ತಿಯಾ

ಬಿಸಿಎಂ ಜಿಲ್ಲಾ ಅಧಿಕಾರಿ ಮತ್ತು ಶಾಸಕರ ಜಟಾಪಟಿ ಇನ್ನೂ ಮುಂದುವರೆದಿದ್ದು, ಪಾಲಿಕೆ ಸದಸ್ಯ ಪ್ರಭು ಹಾದಿಮನಿಯವರಿಂದ ಎರಡನೇ ಬಾರಿ ಇಂದು ಬೆಳಿಗ್ಗೆಯೂ ಜೀವ ಬೆದರಿಕೆ ಕರೆ ಮಾಡಿದ್ದಾರೆ. ಸರ್ಕಾರಿ ಅಧಿಕಾರಿ ರಮೇಶ್ ಸಂಗಾ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ""ಅದು ಹೇಗೆ ನೀನು ಹೊರಗಡೆ ತಿರುಗಾಡುತ್ತಿಯಾ'' ಎಂದು ಪಾಲಿಕೆ ಸದಸ್ಯ ಧಮ್ಕಿ ಹಾಕಿದ್ದಾರೆ.

English summary
Kalaburagi South BJP MLA Dattatreya Patil Revoor has Pressure for the transfer of Kalaburagi BCM district officer Ramesh Sanga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X