ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆತ್ತವರಂತೆ ಮದುವೆ ಮಾಡಿಕೊಟ್ಟ ಕಲಬುರಗಿ ಮಹಿಳಾ ನಿಲಯ

|
Google Oneindia Kannada News

ಕಲಬುರಗಿ, ಅಕ್ಟೋಬರ್ 12 : ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಶುಕ್ರವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹೂವು, ಮಾವಿನ ತೋರಣ, ರಂಗೋಲಿಗಳಿಂದ ಅಲಂಕೃತಗೊಂಡ ನಿಲಯದಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ನಿರತರಾಗುತ್ತಿದ್ದ ಸಿಬ್ಬಂದಿಗಳು ಮದುವೆಯ ಶಾಸ್ತ್ರದ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.

ಹೌದು, ನಿಲಯದಲ್ಲಿ ಕಳೆದ 4 ವರ್ಷಗಳಿಂದ ಇರುವ ಅಂಬಿಕಾ ಮತ್ತು 7 ವರ್ಷಗಳಿಂದ ಇರುವ ಅಶ್ವಿನಿಯ ಮದುವೆ ಸಮಾರಂಭ ಶುಕ್ರವಾರ ನಡೆಯಿತು. ಅನಾಥೆಯರಿಗೆ ಆಶ್ರಯಕೊಟ್ಟ ಮಹಿಳಾ ನಿಲಯವು ನಿವಾಸಿಗಳ ಒಪ್ಪಿಗೆ ಪಡೆದು ಹೆತ್ತವರಂತೆ ಮದುವೆ ಮಾಡಿಕೊಟ್ಟಿತ್ತು.

ಜ್ಯೋತಿಯ ಬಾಳು ಬೆಳಗಿದ ಗಿರೀಶ್ ಕುಮಾರ್ಜ್ಯೋತಿಯ ಬಾಳು ಬೆಳಗಿದ ಗಿರೀಶ್ ಕುಮಾರ್

ಅಂಬಿಕಾಳನ್ನು ಗುಂಡುರಾವ ಜೋಷಿ ಹಾಗೂ ಅಶ್ವಿನಿ ಅವರನ್ನು ಪವನಕುಮಾರ ಕುಲಕರ್ಣಿ ಅವರು ವಿವಾಹವಾಗುವ ಮೂಲಕ ಅನಾಥೆಯರ ಬಾಳಿಗೆ ಬೆಳಕು ನೀಡಿದರು. ವಸತಿ ನಿಲಯದಲ್ಲಿ ನಡೆದ 19 ಮತ್ತು 20ನೇ ಮದುವೆ ಇದಾಗಿದೆ.

ಕೊಪ್ಪಳದಲ್ಲಿ ಮಧುಚಂದ್ರದ ರಾತ್ರಿಯೇ ಮದುಮಗಳ ಅಪಹರಣಕೊಪ್ಪಳದಲ್ಲಿ ಮಧುಚಂದ್ರದ ರಾತ್ರಿಯೇ ಮದುಮಗಳ ಅಪಹರಣ

ನಿಲಯದ ಪ್ರತಿ ನಿವಾಸಿಗಳ ಮದುವೆ ಖರ್ಚಿಗೆ ಸರ್ಕಾರ 20 ಸಾವಿರ ರೂ. ಅನುದಾನ ನೀಡುತ್ತದೆ. 5 ಸಾವಿರ ರೂ. ವಧುವಿನ ತಾಳಿ, ಉಂಗುರ ಇನ್ನೀತರ ಶಾಸ್ತ್ರ ಕಾರ್ಯಕ್ಕೆ ಉಪಯೋಗಿಸಿಕೊಂಡು ಉಳಿದ 15 ಸಾವಿರ ರೂ. ಗಳನ್ನು ನಿವಾಸಿಯ ಹೆಸರಿಗೆ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತದೆ.

19 ವರ್ಷದ ಯುವತಿ ಜತೆಗೆ ಇಷ್ಟವಿರದ ಮದುವೆ ಮಾಡಿಸಿದರೆಂದು ಯುವಕ ದೂರು19 ವರ್ಷದ ಯುವತಿ ಜತೆಗೆ ಇಷ್ಟವಿರದ ಮದುವೆ ಮಾಡಿಸಿದರೆಂದು ಯುವಕ ದೂರು

ವಿಥುನ ಲಗ್ನದಲ್ಲಿ ವಿವಾಹ

ವಿಥುನ ಲಗ್ನದಲ್ಲಿ ವಿವಾಹ

ಶುಕ್ರವಾರ ಬೆಳಗ್ಗೆ 9.30ಕ್ಕೆ ದೈವ ಅಕ್ಷತೆ ಹಾಗೂ 11.42 ಗಂಟೆಗೆ ಮಿಥುನ ಲಗ್ನದ ಶುಭಮುಹೂರ್ತದಲ್ಲಿ ಅಂಬಿಕಾಳನ್ನು ಗುಂಡುರಾವ ಜೋಷಿ ಹಾಗೂ ಅಶ್ವಿನಿ ಅವರನ್ನು ಪವನಕುಮಾರ ಕುಲಕರ್ಣಿ ವಿವಾಹವಾದರು. ನವ ವಧು-ವರರು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶುಭ ಸಮಾರಂಭಕ್ಕೆ ಹಲವರು ಸಾಕ್ಷಿಯಾದರು. ಅಚಾರ್ಯ ಬಾಪುರಾವ ಅವರು ಹಿಂದು ಧರ್ಮದ ಪ್ರಕಾರ ಮದುವೆ ಶಾಸ್ತ್ರ ಕಾರ್ಯವನ್ನು ನಡೆಸಿದರು.

3 ವರ್ಷ ಯೋಗ ಕ್ಷೇಮ ವಿಚಾರಣೆ

3 ವರ್ಷ ಯೋಗ ಕ್ಷೇಮ ವಿಚಾರಣೆ

ನಿಲಯದ ಪ್ರತಿ ನಿವಾಸಿಗಳ ಮದುವೆ ಖರ್ಚಿಗೆ ಸರ್ಕಾರ 20 ಸಾವಿರ ರೂ. ಅನುದಾನ ಒದಗಿಸುತ್ತದೆ. 5 ಸಾವಿರ ರೂ. ವಧುವಿನ ತಾಳಿ, ಉಂಗುರ ಇನ್ನಿತರ ಶಾಸ್ತ್ರ ಕಾರ್ಯಕ್ಕೆ ಉಪಯೋಗಿಸಿಕೊಂಡು ಉಳಿದ 15 ಸಾವಿರ ರೂ. ಗಳನ್ನು ನಿವಾಸಿಯ ಹೆಸರಿಗೆ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತದೆ. ಮದುವೆ ನಂತರ 3 ವರ್ಷದ ವರೆಗೆ ವರನ ಮನೆಯೊಂದಿಗೆ ಸಂಪರ್ಕದಲ್ಲಿದ್ದು ನಿವಾಸಿಯ ಯೋಗಕ್ಷೇಮವನ್ನು ವಿಚಾರಿಸಲಾಗುತ್ತದೆ.

ವರನ ಹಿನ್ನಲೆ

ವರನ ಹಿನ್ನಲೆ

ಅಂಬಿಕಾಳನ್ನು ವಿವಾಹವಾದ ಗುಂಡುರಾವ ಜೋಷಿ (34) ಅವರು ಯಾದಗಿರಿ ಮೂಲದ ಇಂದಿರಾಬಾಯಿ ಮತ್ತು ಬಾಪುರಾವ ಜೋಷಿ ಅವರ ಪುತ್ರ. ಬಿ.ಎ. ಪದವೀಧರರಾಗಿದ್ದು ಹಿಂದೂ (ಬ್ರಾಹ್ಮಣ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸ್ವಂತ ಹಾರ್ಡ್‍ವೇರ್ ಅಂಗಡಿ ಹೊಂದಿದ್ದು, ಮಾಸಿಕ 20 ರಿಂದ 25 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ.

ಅಶ್ವಿನಿ ಅವರನ್ನು ವಿವಾಹವಾದ ಜಿಲ್ಲೆಯ ಶಹಾಬಾದ ಪಟ್ಟಣದ ನಿವಾಸಿ ವಸಂತಮಾಲಾ ಮತ್ತು ಪ್ರಕಾಶಬಾಬು ಕುಲಕರ್ಣಿ ಅವರ ಪುತ್ರ ಪವನಕುಮಾರ ಕುಲಕರ್ಣಿ (34) ಸಹ ಹಿಂದೂ (ಬ್ರಾಹ್ಮಣ) ಸಮುದಾಯಕ್ಕೆ ಸೇರಿದವರು. ಬಿ.ಎ. ಪದವೀಧರರು. ಜೀವನೋಪಾಯಕ್ಕೆ ಜನರಲ್ ಸ್ಟೋರ್ಸ್ ಅಂಗಡಿ ನಡೆಸುತ್ತಿದ್ದು ಮಾಸಿಕ 25 ಸಾವಿರ ರೂ. ಸಂಪಾದಿಸುತ್ತಾರೆ.

ನವ ವಿವಾಹಿತರು ಹೇಳಿದ್ದೇನು?

ನವ ವಿವಾಹಿತರು ಹೇಳಿದ್ದೇನು?

'ಸಮಾಜಮುಖಿ ಕೆಲಸ ಮಾಡಬೇಕೆಂಬ ತುಡಿತವಿತ್ತು ಮತ್ತು ಸಮುದಾಯದಲ್ಲಿ ಹೆಣ್ಣುಮಕ್ಕಳ ಕೊರತೆ ಕಾರಣ ಕುಟುಂಬದವರ ಒಪ್ಪಿಗೆ ಪಡೆದು ಅನಾಥೆಯನ್ನು ಮದುವೆ ಮಾಡಿಕೊಂಡಿದ್ದು ಸಂತಸ ತಂದಿದೆ' ಎನ್ನುತ್ತಾರೆ ಪವನಕುಮಾರ ಕುಲಕರ್ಣಿ.

'ಸ್ವಂತ ಕಬ್ಬಿಣದ ಅಂಗಡಿ ಹೊಂದಿರುವ ನಾನು ಮಾಸಿಕ 20 ಸಾವಿರ ಸಂಪಾದಿಸುತ್ತೇನೆ. ಅಂಬಿಕಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ' ಎಂದು ಗುಂಡುರಾವ ಜೋಷಿ ಹೇಳಿದರು.

19 ಮತ್ತು 20ನೇ ಮದುವೆ

19 ಮತ್ತು 20ನೇ ಮದುವೆ

ಕಲಬುರಗಿ ರಾಜ್ಯ ಮಹಿಳಾ ವಸತಿ ನಿಲಯದಲ್ಲಿ ಇದೂವರೆಗೆ 18 ನಿವಾಸಿಗಳ ಮದುವೆಯಾಗಿದೆ. ಇಂದಿನದು 19 ಮತು 20ನೇ ಮದುವೆಯಾಗಿದ್ದು ದಾಖಲೆಯಾಗಿದೆ. ಕಳೆದ 2014-15 ರಿಂದ 2017-18ನೇ ಸಾಲಿನ ವರೆಗೆ 9 ಮದುವೆಗಳು ವಸತಿ ನಿಲಯದಲ್ಲಿ ನಡೆದಿವೆ. ಕಲಬುರಗಿ ಸೇರಿದಂತೆ ರಾಜ್ಯಾದ್ಯಂತ 8 ಮಹಿಳಾ ವಸತಿ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.

English summary
Kalaburagi State Home of Women in on Friday, October 12, 2018 witnessed for two marriage. This is the 19th and 20th marriage in state homes for women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X