ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ ಗರ್ಭಿಣಿಯ ಹೋಂ ಕ್ವಾರಂಟೈನ್ ತಂದ ಆತಂಕ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಮೇ 23: ಗರ್ಭಿಣಿ ಎಂಬ ಕಾರಣಕ್ಕೆ ಮುಂಬೈನಿಂದ ಬಂದಿದ್ದ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ವಿಧಿಸದೇ ಹೋಂ ಕ್ವಾರಂಟೈನ್ ಹಾಕಿದ್ದೇ ಈಗ ಜಿಲ್ಲಾಡಳಿತಕ್ಕೆ ಆಘಾತ ನೀಡಿದೆ.

Recommended Video

ತರಕಾರಿಯಿಂದಲು ಹಬ್ಬುತ್ತಿದೆ ಕೊರೋನಾ ಮಹಾಮಾರಿ!! ಎಚ್ಚರ!! | Oneindia Kannada

ಕಲಬುರಗಿಯಲ್ಲಿ ಮುಂಬೈನಿಂದ ವಾಪಸ್ ಆಗಿದ್ದ 22 ವರ್ಷದ ಗರ್ಭಿಣಿಯಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಗರ್ಭಿಣಿ ಎಂಬ ಕಾರಣಕ್ಕೆ ಮನೆಯಲ್ಲೇ ಕ್ವಾರಂಟೈನ್ ವಿಧಿಸಿದ್ದು, ಈ ಮಹಿಳೆಯಿಂದ ಅದೆಷ್ಟು ಜನರಿಗೆ ಕೊರೊನಾ ಹರಡಿದೆಯೋ ಎಂಬ ಆತಂಕ ಎದುರಾಗಿದೆ.

ಮುಂಬೈನಿಂದ ಕಲಬುರಗಿಗೆ ಸಾವಿರಾರು ಜನ: ಗಡಿಯಲ್ಲಿ ಢವ ಢವ ಮುಂಬೈನಿಂದ ಕಲಬುರಗಿಗೆ ಸಾವಿರಾರು ಜನ: ಗಡಿಯಲ್ಲಿ ಢವ ಢವ

Pregnant In Home Quarantine Got Coronavirus Positive In Kalaburagi


ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮಕ್ಕೆ ಮುಂಬೈನಿಂದ ಇವರು ವಾಪಸ್ಸಾಗಿದ್ದರು. ನಂತರ ಹೋಮ್‌ ಕ್ವಾರೆಂಟೈನ್ ನಲ್ಲಿದ್ದು, ಆಕೆ ತಾನಿದ್ದ ಸುತ್ತಮುತ್ತಲ ಪ್ರದೇಶದಲ್ಲೂ ಓಡಾಡಿದ್ದಾರೆ. ಹೀಗಾಗಿ ಆಕೆಯ ಮನೆಯವರು ಸೇರಿ‌ ಆ ಗ್ರಾಮದ ಜನರಲ್ಲೂ ಭೀತಿ ಶುರುವಾಗಿದೆ. ಸದ್ಯಕ್ಕೆ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಎಂಟು ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಇಂದು ಇಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ 60 ಜನರು ಗುಣಮುಖರಾಗಿದ್ದು, 134 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ 7 ಜನ ಬಲಿಯಾಗಿದ್ದಾರೆ. ಇನ್ನೂ 67 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

English summary
Pregnant who is in home quarantine reported coronavirus positive today. It has created fear among jevargi village in kalaburagi,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X