ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸವ ತತ್ವದ ಮೇಲೆ ಹೊಸ ಪಕ್ಷ ಸ್ಥಾಪನೆ: ಅನುಪಮಾ ಶೆಣೈ

By ನಮ್ಮ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಅಕ್ಟೋಬರ್ 12: ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ನೂತನ ಪಕ್ಷ ಸ್ಥಾಪಿಸುವುದಾಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಪುನರುಚ್ಚರಿಸಿದ್ದಾರೆ.

ನವೆಂಬರ್ ನಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ: ಅನುಪಮ ಶೆಣೈನವೆಂಬರ್ ನಲ್ಲಿ ಹೊಸ ಪಕ್ಷ ಅಸ್ತಿತ್ವಕ್ಕೆ: ಅನುಪಮ ಶೆಣೈ

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ ಅನುಪಮಾ ಶೆಣೈ, ಹೊಸ ಪಕ್ಷ ಕಟ್ಟುವ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

Kalaburagi: New Party will follow Basavanna's Philosophy: Anupama Shenoy

'ಭ್ರಷ್ಟಾಚಾರ ನಿರ್ಮೂಲನೆ, ಸರಕಾರಿ ನೌಕರರಿಗೆ ಭದ್ರತೆ, ಕೂಲಿ ಕಾರ್ಮಿಕರ ಸಮಸ್ಯೆಗಳಿಗೆ ಮುಕ್ತಿ ಕೊಡಿಸುವುದು ಪಕ್ಷದ ಉದ್ದೇಶವಾಗಿದೆ. ನವೆಂಬರ್‌ 1 ರಂದು ಪಕ್ಷದ ಹೆಸರು, ಉದ್ದೇಶಗಳನ್ನು ಘೋಷಣೆ ಮಾಡಲಾಗುವುದು' ಎಂದು ಶೆಣೈ ಹೇಳಿದರು.

ಬಸವಣ್ಣನವರ ತತ್ವದ ಮೇಲೆ ನಮ್ಮ ಪಕ್ಷ ನಡೆಯಲಿದ್ದು, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಒತ್ತು ನೀಡುತ್ತೇನೆ. ಬಳ್ಳಾರಿ ನನ್ನ ಕರ್ಮಭೂಮಿಯಾಗಿರುವುದರಿಂದ ಬಳ್ಳಾರಿ ಜಿಲ್ಲೆಯಿಂದ ನಾನು ಸ್ಪರ್ಧಿಸಲು ಇಚ್ಚಿಸುತ್ತೇನೆ.

ಎಲ್ಲಾ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಇಚ್ಛೆ ಹೊಂದಿದ್ದೇನೆ. ರಾಜ್ಯದ ತುಂಬಾ ಪ್ರಚಾರ ನಡೆಸಲು ಸಿದ್ಧತೆ ನಡೆದಿದೆ ಎಂದರು.

ನನ್ನ ಪಕ್ಷದಲ್ಲಿ ಕೃಷಿ, ಆರೋಗ್ಯ, ಕಾನೂನು ಮತ್ತು ಸುವ್ಯವಸ್ಥೆ. ಸಾರಿಗೆ ಮತ್ತು ಶಿಕ್ಷಣದಲ್ಲಿರುವವರಿಗೆ ಪಕ್ಷದಿಂದ ಸ್ಪರ್ದಿಸಲು ಹೆಚ್ಚು ಒತ್ತುಕೊಡಲಿದ್ದೇವೆ ಎಂದರು.

English summary
Former Deputy SP Anupama Shenoy said She is all set to float a new political party on November 1. and it will be based on Basavanna's Philosophy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X