ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ; ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಿಗೆ ಸೋಂಕಿಲ್ಲ

|
Google Oneindia Kannada News

ಕಲಬುರಗಿ, ಮಾರ್ಚ್ 15 : " ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಕಲಬುರಗಿಯ ವೃದ್ಧನ ಕುಟುಂಬದ ಸದಸ್ಯರ ನಾಲ್ಕು ಜನರ ಪೈಕಿ 3 ಜನರಿಗೆ ಸೋಂಕು ಇಲ್ಲ" ಎಂದು ಆರೋಗ್ಯ ಸಚಿವ ಬಿ. ಶ್ರೀರಾಮಲು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವರು ಶನಿವಾರ ಕಲಬುರಗಿಯಲ್ಲಿ ಜಿಲ್ಲಾಡಳಿತ, ಶಾಸಕರು ಮತ್ತು ಆರೋಗ್ಯ ಇಲಾಖೆಯ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕೊರೊನಾ ತಡೆಗಟ್ಟಲು ಇದೂವರೆಗೆ ಕೈಗೊಂಡ ಮುಂಜಾಗ್ರತೆ ಕ್ರಮ ಮತ್ತು ಸ್ಥಿತಿಗತಿ ಕುರಿತು ಮಾಹಿತಿ ಪಡೆದರು.

ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ? ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?

ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಕುಟುಂಬ ಸದಸ್ಯರಲ್ಲಿಯೂ ಸೊಂಕಿನ ಶಂಕೆ ವ್ಯಕ್ತವಾಗಿದ್ದರಿಂದ ನಾಲ್ವರು ಸದಸ್ಯರ ಗಂಟಲು ದ್ರವ್ಯವನ್ನು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿತ್ತು. ಇಂದು 3 ಸದಸ್ಯರ ವರದಿ ಬಂದಿದೆ" ಎಂದು ಹೇಳಿದರು.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ? ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ವೈದ್ಯಕೀಯ ವರದಿ ಹೇಳಿತ್ತು.

 ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್ ಕರ್ನಾಟಕದಲ್ಲಿ ಕೊರೊನಾ; ಶನಿವಾರದ ಹೆಲ್ತ್ ಬುಲಿಟಿನ್

ಕಲಬುರಗಿ ವೃದ್ಧ ಮೃತಪಟ್ಟಿದ್ದ

ಕಲಬುರಗಿ ವೃದ್ಧ ಮೃತಪಟ್ಟಿದ್ದ

ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂಬ ವರದಿ ಬಂದಿತ್ತು. ಆದ್ದರಿಂದ, ವೃದ್ಧನ ಕುಟುಂಬ ನಾಲ್ವರು ಸದಸ್ಯರ ಮೇಲೆ ನಿಗಾ ವಹಿಸಲಾಗಿತ್ತು. ಆದರೆ, ಈಗ ಮೂವರ ವರದಿ ಬಂದಿದ್ದು, ಸೋಂಕು ತಗುಲಿಲ್ಲ ಎಂದು ದೃಢಪಟ್ಟಿದೆ.

ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ

ಎಲ್ಲರೂ ಆಸ್ಪತ್ರೆಯಲ್ಲಿದ್ದಾರೆ

"ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಜೊತೆ ನೇರ ಸಂಪರ್ಕದಲ್ಲಿದ್ದ ಕುಟುಂಬದ 4 ಜನ ಸದಸ್ಯರನ್ನು ನಗರದ ಇ.ಎಸ್.ಐ.ಸಿ ಮೆಡಿಕಲ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ" ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.

ಅಗತ್ಯ ಎಚ್ಚರಿಕೆಗಳನ್ನು ಕೈಗೊಳ್ಳಬೇಕು

ಅಗತ್ಯ ಎಚ್ಚರಿಕೆಗಳನ್ನು ಕೈಗೊಳ್ಳಬೇಕು

"ದೇಶದಲ್ಲಿ ಕೊರೊನಾ ಸೊಂಕಿಗೆ ಕಲಬುರಗಿಯ ವ್ಯಕ್ತಿ ಮೊದಲು ಮೃತರಾಗಿದ್ದು, ತುಂಬಾ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಅಗತ್ಯ ಮುನ್ನೆಚರಿಕೆ ತೆಗೆದುಕೊಂಡಲ್ಲಿ ಇದರಿಂದ ಪಾರಾಗಬಹುದು. ಜನರಿಗೆ ಈ ಬಗ್ಗೆ ಹೆಚ್ಚಿನ ಅರಿವೂ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು" ಎಂದು ಶ್ರೀರಾಮುಲು ಸೂಚನೆ ನೀಡಿದರು.

ಲೈಸೆನ್ಸ್ ರದ್ದುಗೊಳಿಸಿ

ಲೈಸೆನ್ಸ್ ರದ್ದುಗೊಳಿಸಿ

ಇ.ಎಸ್.ಐ.ಸಿ. ಮೆಡಿಕಲ್ ಆಸ್ಪತ್ರೆಯಲ್ಲಿ 200 ಕ್ವಾರೈಂಟೈನ್ ಬೆಡ್ ಸ್ಥಾಪಿಸಿದ್ದು, ಇಲ್ಲಿ ರೋಗಿಗಳ ಮೇಲೆ ನಿಗಾ ಇಡಲು ಪೊಲೀಸ್ ಭದ್ರತೆ ನೀಡುವಂತೆ, ವೈದ್ಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚಿಸಿದರು.

ಕಲಬುರಗಿ ನಗರದಲ್ಲಿ ಹೆಚ್ಚಿನ ದರದಲ್ಲಿ ಮಾಸ್ಕ್ ಮತು ಸ್ಯಾನಿಟೈಜರ್ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದ್ದು, ಕೂಡಲೆ ಅಂತಹ ಮೆಡಿಕಲ್ ಮತ್ತು ಜನರಲ್ ಅಂಗಡಿಗಳ ತಪಾಸಣೆ ಮಾಡಿ ಲೈಸೆನ್ಸ್ ರದ್ದುಗೊಳಿಸಿ ಎಂದು ನಿರ್ದೇಶನ ನೀಡಿದರು.

English summary
Family members of the 76 year old Kalaburagi man not infected with coronavirus said Karnataka health minister B. Sriramulu. 76 year old man returned from Saudi Arabia died on March 10, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X