ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಹೆತ್ತ ತಾಯಿಗೆ ಬೇಡವಾದ ಹೆಣ್ಣು ಮಗು !

|
Google Oneindia Kannada News

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಡಿಸೆಂಬರ್ 14 ರಂದು ವೈದ್ಯರು ಮಾಡಿದ್ದ ಎಡವಟ್ಟಿನಿಂದ ನವಜಾತ ಶಿಶುಗಳು ಅದಲುಬದಲಾಗಿದ್ದವು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಂದಮ್ಮ ಎಂಬುವವರಿಗೆ ಗಂಡು ಮಗು ಕೊಟ್ಟು, ಗಂಡು ಮಗುವಿಗೆ ಜನ್ಮ ನೀಡಿದ್ದ ನಜ್ಮಾ ಬೇಗಂ ಅವರಿಗೆ ಹೆಣ್ಣು ಮಗುವನ್ನು ನೀಡಿದ್ದರು.

ಬಳಿಕ ತಪ್ಪಿನ ಅರಿವಾಗಿ ಸಿಬ್ಬಂದಿ ಮಕ್ಕಳನ್ನು ಅವರ ತಾಂದಿರಿಗೆ ನೀಡಲು ಪ್ರಯತ್ನಿಸಿದ್ದರು. ಆದರೆ, ನಂದಮ್ಮ ಅವರ ಕುಟುಂಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ನಂದಮ್ಮ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದು, ಬೇರೆಯವರು ಹೆತ್ತ ಹೆಣ್ಣು ಮಗುವನ್ನು ಇದೀಗ ನಮಗೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ನವಜಾತ ಶಿಶು ಸಾವುಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ನವಜಾತ ಶಿಶು ಸಾವು

ನಜ್ಮಾ ಕೂಡ ನಾಣು ಗಂಡು ಮಗುವಿಗೆ ಜನ್ಮ ನೀಡಿದ್ದೇನೆ ನಾಣು ಹೆತ್ತ ಮಗುವನ್ನು ಬೇರೆಯವರಿಗೆ ನೀಡುವುದಿಲ್ಲ ಎಂದು ಹೇಳಿದ್ದರು. ವೈದ್ಯರು ಎಷ್ಟೇ ಹೇಳಿದರೂ ಈ ವಿಚಾರ ಇತ್ಯರ್ಥ ಆಗುವವರೆಗೂ ಮಗುವಿಗೆ ಹಾಲುಣಿಸುವುದಿಲ್ಲ ಎಂದು ತಾಯಂದಿರು ಹಠ ಹಿಡಿದಿದ್ದರು.

Kalaburagi: Exchange of infants case resolve

ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಕ್ತ ಪರೀಕ್ಷೆ ವರದಿಯಂತೆ ತಾಯಂದಿರಿಗೆ ನೀಡಲಾದ ಮಕ್ಕಳಿಗೆ ಹಾಲುಣಿಸುವಂತೆ ಸೂಚಿಸಿದ್ದರು.
ಬಳಿಕ ಮಕ್ಕಳ ಹಾಗೂ ಪೋಷಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಶಿಶುಗಳ ಅದಲು ಬದಲು : ಮಗುವಿಗೆ ಹಾಲುಣಿಸಲು ನಿರಾಕರಿಸಿದ ತಾಯಂದಿರುಶಿಶುಗಳ ಅದಲು ಬದಲು : ಮಗುವಿಗೆ ಹಾಲುಣಿಸಲು ನಿರಾಕರಿಸಿದ ತಾಯಂದಿರು

ಇದೀಗ ಇದರ ವರದಿ ಬಂದಿದ್ದು ನಂದಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಡಿಎನ್ ಎ ಪರೀಕ್ಷೆ ಬಳಿಕವೂ ಅವರ ಕುಟುಂಬಸ್ಥರು ಮಗುವನ್ನು ಸ್ವೀಕರಿಸಲು ನಿರಾಕರಿಸಿ ಆಸ್ಪತ್ರೆಯಲ್ಲಿಯೇ ಇರಿಸಿದ್ದಾರೆ ಎಂದು ತಿಳಿದುಬಂದಿದೆ.

English summary
With confirmation of laboratory report on DNA test, a curious case of Kalaburagi infants exchange case has been resolved by the district hospital authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X