ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ

|
Google Oneindia Kannada News

ಕಲಬುರಗಿ, ಮಾರ್ಚ್ 31 : ಕಲಬುರಗಿಯ ವೈದ್ಯರು ಕೊರೊನಾ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿತ ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ಸೋಂಕು ತಗುಲಿತ್ತು.

ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಈ ಕುರಿತು ಮಾಹಿತಿ ನೀಡಿದ್ದಾರೆ. "ಕೊರೊನಾ‌ ಸೋಂಕಿನಿಂದ ಮೃತರಾದ ಕಲಬುರಗಿಯ ವಯೋವೃದ್ಧನಿಗೆ ಚಿಕಿತ್ಸೆ ನೀಡಿದ 63 ವರ್ಷದ ವೈದ್ಯರು ಸೋಂಕಿನಿಂದ ಗುಣಮುಖರಾಗಿದ್ದಾರೆ" ಎಂದರು.

ಕಲಬುರಗಿ: ಮೃತ ವೃದ್ಧನ ಮಗಳು ಕೊರೊನಾದಿಂದ ಗುಣಮುಖಕಲಬುರಗಿ: ಮೃತ ವೃದ್ಧನ ಮಗಳು ಕೊರೊನಾದಿಂದ ಗುಣಮುಖ

ಕೊರೊನಾದಿಂದ ಮೃತಪಟ್ಟ ವೃದ್ಧನ ನೇರ ಸಂಪರ್ಕಕ್ಕೆ ಬಂದಿದ್ದರಿಂದ ವೈದ್ಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನ ಐಸೋಲೇಷನ್ ವಾರ್ಡ್‌ನಲ್ಲಿನ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿ ಮಾರಣಾಂತಿಕ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕೇರಳದ ವೃದ್ಧ ದಂಪತಿ

Kalaburagi Doctor Recovered From Corona

"ಚಿಕಿತ್ಸೆಯ 14 ದಿನಗಳ ನಂತರ ಕೋವಿಡ್-19 ಪರೀಕ್ಷೆ ಮಾಡಿದಾಗ ನೆಗೆಟಿವ್ ಕಂಡುಬಂದಿದೆ. 24 ಗಂಟೆ‌ ನಂತರ‌ ಮತ್ತೊಮ್ಮೆ ಪರೀಕ್ಷಿಸಿದಾಗ ಸಹ ನೆಗೆಟಿವ್ ವರದಿ ಬಂದಿರುತ್ತದೆ" ಎಂದು ಶರತ್ ಬಿ. ಹೇಳಿದ್ದಾರೆ.

ಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆ

ಕಲಬುರಗಿಯ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕ್ಕಿ ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ವಾಪಸ್ ಆಗಿದ್ದರು. ಮಾರ್ಚ್ 10ರಂದು ಅವರು ಮೃತಪಟ್ಟಿದ್ದರು. ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಮಾರ್ಚ್ 12ರಂದು ದೃಢಪಟ್ಟಿತ್ತು. ದೇಶದಲ್ಲಿಯೇ ಕೊರೊನಾದಿಂದ ಸಂಭವಿಸಿದ ಮೊದಲ ಸಾವು ಇದಾಗಿತ್ತು.

ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 9 ರಂದು ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರ ಅತಿಯಾಗಿ ಕಾಣಿಸಿದ್ದರಿಂದ ಕಲಬುರಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಬಳಿಕ ಅದೇ ದಿನದಂದು ರಾತ್ರಿ ವೈದ್ಯಕೀಯ ಸಲಹೆ ಕಡೆಗಣಿಸಿ ಕುಟುಂಬಸ್ಥರು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಹೈದರಾಬಾದ್‌ನ ಕೇರ್ ಹಾಸ್ಪಿಟಲ್ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಮಾರ್ಚ್ 10 ರಂದು ಹೈದರಾಬಾದ್‌ನಿಂದ ವಾಪಸ್ ಕರೆದುಕೊಂಡು ಬರುವಾಗ ಮಹ್ಮದ್ ಹುಸೇನ್ ಸಿದ್ದಿಕ್ಕಿ ಮೃತಪಟ್ಟಿದ್ದರು. ಈ ರೋಗಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಸೋಂಕು ತಗುಲಿತ್ತು.

English summary
Kalaburagi doctor recovered from coronavirus. Doctor who treated coronavirus patient tested positive after the death of the patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X