ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ : ಕಲಬುರಗಿಯಲ್ಲಿ ಮತ್ತೊಂದು ಕಂಟೇನ್‍ಮೆಂಟ್ ಝೋನ್

|
Google Oneindia Kannada News

ಕಲಬುರಗಿ, ಏಪ್ರಿಲ್ 03: ಕಲಬುರಗಿಯಲ್ಲಿ ಮತ್ತೊಂದು ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿದೆ. ಸೋಂಕು ಪತ್ತೆಯಾದ ಅಪ್ಪರ್ ಮಡ್ಡಿ ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಶಹಾಬಾದ ಪಟ್ಟಣದ 60 ವರ್ಷದ ಮಹಿಳೆಗೆ ಕೊರೊನಾ ಸೋಂಕು ತಗಲಿದೆ. ಮಹಿಳೆ ವಾಸಿಸುವ ಅಪ್ಪರ್ ಮಡ್ಡಿ ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ. ಇಲ್ಲಿಂದ ಬೇರೆ ಪ್ರದೇಶಕ್ಕೆ ಸೋಂಕು ಹರಡದಂತೆ ಮುಂಜಾಗ್ರತವಾಗಿ ಸ್ಕ್ರೀನಿಂಗ್ ಮತ್ತು ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ ಕೊರೊನಾ ವಿರುದ್ಧ ಹೋರಾಡಿ ಗೆದ್ದ ಕಲಬುರಗಿ ವೈದ್ಯ

ಅಪ್ಪರ್ ಮಡ್ಡಿ ಪ್ರದೇಶಕ್ಕೆ ಇರುವ ಎಲ್ಲಾ ಪ್ರವೇಶದ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಸರ್ದಾರ ವಲ್ಲಭಭಾಯಿ ಪಟೇಲ್ ಚೌಕ್ ಕಡೆಗೆ ಹೋಗುವ ಮುಖ್ಯ ರಸ್ತೆಯನ್ನು ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ರಸ್ತೆ ಮೂಲಕ ಸಂಚರಿಸುವ ಪ್ರತಿಯೊಬ್ಬರ ಮೇಲೆ ನಿಗಾ ಇಡಲು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಖಾಲಿ ಇದೆ ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಖಾಲಿ ಇದೆ

Kalaburagi Announced One More Place As Containment Zone

ಅಪ್ಪರ್ ಮಡ್ಡಿ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ಸ್ಯಾನಿಟೈಜೇಷನ್, ಬ್ಲೀಚಿಂಗ್ ಪೌಡರ್, ಫಾಗಿಂಗ್ ಸಿಂಪರಣೆ ಮಾಡಲಾಗಿದೆ. ಪೌರಕಾರ್ಮಿಕ ಸಿಬ್ಬಂದಿಗಳು ಪ್ರದೇಶದ ಪ್ರತಿ ಓಣಿಯಲ್ಲಿ ಸಂಚರಿಸಿ ಫಾಗಿಂಗ್ ಮಾಡಲಿದ್ದಾರೆ.

ಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆಕಲ್ಲಂಗಡಿ ಪೂರೈಕೆ ಮಾಡಲಾಗದೇ ಕಲಬುರಗಿ ರೈತ ಆತ್ಮಹತ್ಯೆ

ಪಟ್ಟಣದಾದ್ಯಂತ ಕೊರೊನಾ ಸೋಂಕು ಹರಡದಂತೆ ಶುಕ್ರವಾರ ಅಗ್ನಿಶಾಮಕ ದಳ ತಂಡದಿಂದ ಪಟ್ಟಣದ ರಸ್ತೆಗಳಲ್ಲಿ ಮುನ್ನೆಚರಿಕೆಯಾಗಿ ಫಾಗಿಂಗ್ ಸಿಂಪರಣೆ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯಾದ್ಯಂತ ಸಿ. ಆರ್. ಪಿ. ಸಿ 144 ನಿಷೇಧಾಜ್ಞೆ ಇರುವುದರಿಂದ ಸಾರ್ವಜನಿಕರು ಅನಗತ್ಯ ರಸ್ತೆ ಮೇಲೆ ತಿರುಗಾಡಬಾರದು. ಅವಶ್ಯಕ ವಸ್ತುಗಳಿಗೆ ಮನೆಯ ಓರ್ವ ಸದಸ್ಯ ಬಂದು ತೆಗೆದುಕೊಂಡು ಹೋಗಬೇಕು ಎಂದು ಸೂಚನೆ ನೀಡಲಾಗಿದೆ.

English summary
One more place in Kalaburagi district of Karnataka announced as containment zone. If someone is found positive for Covid-19 place will announce as containment zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X