ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ : 761 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

|
Google Oneindia Kannada News

ಕಲಬುರಗಿ, ಜೂನ್ 09 : 'ಕಲಬುರಗಿ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟು 761 ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಲಾಗಿದ್ದು, ಅವುಗಳ ಪೈಕಿ 215 ಗ್ರಾಮಗಳಿಗೆ 197 ಟ್ಯಾಂಕರ್ ಹಾಗೂ 121 ಬಾಡಿಗೆ ಜಲಮೂಲಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ' ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬರ ಪರಿಸ್ಥಿತಿ ಕುರಿತು ಸಭೆ ನಡೆಸಿದ ಸಚಿವರು, 'ಟಾಸ್ಕಫೋರ್ಸ್‌ಗೆ ಒಟ್ಟು 9.75 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದು, ಆ ಪೈಕಿ 6.50 ರೂ. ಕೋಟಿ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ 697 ತುರ್ತು ಕುಡಿಯುವ ನೀರಿನ‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ರೂ 5.91 ಕೋಟಿ ಖರ್ಚು ಮಾಡಲಾಗಿದೆ' ಎಂದರು.

ಶಿವಮೊಗ್ಗ : ನೀರಿನ ಕೊರತೆ, ನಗರದಲ್ಲಿ ಜೂ.10ರಿಂದ 2 ದಿನಕ್ಕೊಮ್ಮೆ ನೀರುಶಿವಮೊಗ್ಗ : ನೀರಿನ ಕೊರತೆ, ನಗರದಲ್ಲಿ ಜೂ.10ರಿಂದ 2 ದಿನಕ್ಕೊಮ್ಮೆ ನೀರು

ಜಿಲ್ಲೆಯಲ್ಲಿ 14 ಮೇವು ಬ್ಯಾಂಕುಗಳನ್ನು ಸ್ಥಾಪಿಸಲಾಗಿದೆ. ಅಗತ್ಯವೆನಿಸಿದರೆ ಹೆಚ್ಚುವರಿ 6 ಮೇವು ಬ್ಯಾಂಕ್ ಸ್ಥಾಪನೆ ಮಾಡಲು ಯೋಚಿಸಲಾಗಿದೆ. ಇದಲ್ಲದೇ, ಜಿಲ್ಲೆಯಲ್ಲಿ 24 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು ಆ ಪೈಕಿ ಒಂದು ಪೂರ್ಣಗೊಂಡಿದ್ದು ಉಳಿದ 19 ಕಾರ್ಯಾಚರಣೆ ಹಾಗೂ ನಿರ್ವಹಣೆಯಲ್ಲಿವೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆರಾಜ್ಯದ ಬರ ಜಿಲ್ಲೆಗಳಲ್ಲಿ ಮೋಡ ಬಿತ್ತನೆಗೆ ಸರ್ಕಾರ ಸಿದ್ಧತೆ

 Kalaburagi 761 villages facing drinking water problem

ಕಲಬುರಗಿ ನಗರಪಾಲಿಕೆ ವ್ಯಾಪ್ತಿಯ 21 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ‌ ಸಮಸ್ಯೆ ತಲೆದೋರಿದ್ದು 1.14 ಕೋಟಿ ವೆಚ್ಚದಲ್ಲಿ ಕೊಳೆವೆ ಬಾವಿ ಕೊರೆಸಿ 80 ಜನ ವಸತಿಗಳಿಗೆ ನೀರು ಒದಗಿಸಲಾಗುತ್ತಿದೆ. 2018-19 ರ ಸಾಲಿಗೆ ನಗರ, ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ‌ ಯೋಜನೆ ಜಾರಿಗೊಳಿಸಲು ಟಾಸ್ಕ್ ಫೋರ್ಸ್ ಸಮತಿಗೆ 3.46 ಕೋಟಿ ಅನುದಾನ‌ ಬಿಡುಗಡೆ ಮಾಡಲಾಗಿದೆ.

ಕಲಬುರಗಿ : 133 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆಕಲಬುರಗಿ : 133 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ

ಒಟ್ಟು 1049 ಜನವಸತಿ ಪ್ರದೇಶಗಳಿಗೆ 167.15 ಕೋಟಿ ವೆಚ್ಚದ ಯೋಜನೆಗಳನ್ನು ಜಾರಿಗೊಳಿಸಲು ಅನುಮೋದನೆಗಾಗಿ ಕಳಿಸಲಾಗಿದೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಜೇವರ್ಗಿ ತಾಲೂಕಿನ 164 ಜನವಸತಿ ಪ್ರದೇಶಗಳಿಗೆ ನೀರು ಒದಗಿಸಲು 37.84 ಕೋಟಿ, ಅಫಜಲ್ ಪುರ ತಾಲೂಕಿನ 130 ಜನವಸತಿ ಪ್ರದೇಶಕ್ಕೆ 17.81 ಕೋಟಿ, ಚಿತ್ತಾಪುರ ತಾಲೂಕಿನ 195 ಜನವಸತಿ ಪ್ರದೇಶಕ್ಕಾಗಿ 26.91 ಕೋಟಿ, ಕಲಬುರಗಿ ತಾಲೂಕಿನ 223 ಜನವಸತಿ ಪ್ರದೇಶಕ್ಕಾಗಿ 34.13 ಕೋಟಿ, ಆಳಂದ್‌ ತಾಲೂಕಿನ 185 ಜನವಸತಿ ಪ್ರದೇಶಕ್ಕಾಗಿ 24.22 ಕೋಟಿ ಹಾಗೂ ಸೇಡಂ ತಾಲೂಕಿನ 152 ಜನವಸತಿ ಪ್ರದೇಶಗಳಿಗೆ ನೀರು ಒದಗಿಸಲು 26.10 ಕೋಟಿ ಯೋಜನೆಗೆ ಅನುಮೋದನೆಗಾಗಿ ಕಳಿಸಲಾಗಿದೆ.

English summary
Due drought situation 761 villages of Kalaburagi district facing drinking water problem. Drinking water providing to 215 villages trough tanker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X