ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಾರ್ದನ ರೆಡ್ಡಿ ಅಂದು ಕಂಡ ಕನಸು ಈಗ ನನಸು

|
Google Oneindia Kannada News

ಕಲಬುರಗಿ, ಫೆಬ್ರವರಿ 17 : ಮಾಜಿ ಸಚಿವ ಜನಾರ್ದನ ರೆಡ್ಡಿ ಕನಸು ಕಂಡ ಈಗ ನನಸಾಗಿದೆ. ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಂಕು ಸ್ಥಾಪನೆ ಮಾಡಿದ್ದ ಯೋಜನೆ ಇಂದು ಸಾಕಾರಗೊಂಡಿದೆ.

ಸೋಮವಾರ ಜನಾರ್ದನ ರೆಡ್ಡಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. 'ರೋಮಾಂಚನಗೊಂಡ ಕ್ಷಣಗಳು... ಅಭಿವೃದ್ಧಿಯ ನೂರು ಕನಸುಗಳು' ಎಂದು ತಮ್ಮ ಫೋಸ್ಟ್‌ಗೆ ಶೀರ್ಷಿಕೆಯನ್ನು ಹಾಕಿದ್ದಾರೆ.

ವಿಡಿಯೋ : ರೆಡ್ಡಿ ಮನೆಗೆ ಹೊಸ ಅತಿಥಿ; ಮುದ್ದಾದ ಹೆಸರಿಟ್ಟ ಕುಟುಂಬವಿಡಿಯೋ : ರೆಡ್ಡಿ ಮನೆಗೆ ಹೊಸ ಅತಿಥಿ; ಮುದ್ದಾದ ಹೆಸರಿಟ್ಟ ಕುಟುಂಬ

"ಮುಖ್ಯಮಂತ್ರಿ ಯಡಿಯೂರಪ್ಪನವರ ಜೊತೆ ಮಾತನಾಡಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನಾನು ಕಂಡಿರುವ ಇನ್ನೂ ಅನೇಕ ಯೋಜನೆಗಳ ಬಗ್ಗೆ ವಿವರವಾಗಿ ಚರ್ಚಿಸಿ ಅಭಿವೃದ್ಧಿ ಕಾರ್ಯಗಳು ಸಾಕಾರಗೊಳ್ಳುವ ನಿಟ್ಟಿನಲ್ಲಿ ಸದಾ ನನ್ನ ಕೈಲಾದ ಸೇವೆಯನ್ನು ಮುಂದುವರಿಸುತ್ತೇನೆ" ಎಂದು ಜನಾರ್ದನ ರೆಡ್ಡಿ ಭರವಸೆ ನೀಡಿದ್ದಾರೆ.

ಕಲಬುರಗಿ-ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ ಕಲಬುರಗಿ-ಬೆಂಗಳೂರು-ಮೈಸೂರು ವಿಮಾನದ ವೇಳಾಪಟ್ಟಿ

2008ರಲ್ಲಿ ಜನಾರ್ದನ ರೆಡ್ಡಿ ಅವರು ಸಚಿವರಾಗಿದ್ದಾಗ ಕಲಬುರಗಿ ವಿಮಾನ ನಿಲ್ದಾಣ ಯೋಜನೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಾಗಿದ್ದು, ಈಗ ವಿಮಾನ ಹಾರಾಟ ನಡೆಯುತ್ತಿದೆ.

ಜನಾರ್ದನ ರೆಡ್ಡಿ ಇದ್ದಿದ್ದರೆ ಶ್ರೀರಾಮುಲು ಡಿಸಿಎಂ ಆಗಿರುತ್ತಿದ್ದರುಜನಾರ್ದನ ರೆಡ್ಡಿ ಇದ್ದಿದ್ದರೆ ಶ್ರೀರಾಮುಲು ಡಿಸಿಎಂ ಆಗಿರುತ್ತಿದ್ದರು

ಜನಾರ್ದನ ರೆಡ್ಡಿ ಕನಸೇನು?

ಜನಾರ್ದನ ರೆಡ್ಡಿ ಕನಸೇನು?

"ನಿನ್ನೆಯ ದಿವಸ ನನ್ನ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಯ ಕನಸುಗಳನ್ನು ಇಟ್ಟುಕೊಂಡು 2008 ರಲ್ಲಿ ಕರ್ನಾಟಕ ಸರ್ಕಾರದ ಮೂಲಭೂತ ಸೌಕರ್ಯದ ಸಚಿವನಾಗಿದ್ದ ನಾನು ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಅಂದು ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿದ್ದೆವು" ಎಂದು ಜನಾರ್ದನ ರೆಡ್ಡಿ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

ವಿಮಾನ ನಿಲ್ದಾಣಕ್ಕೆ ಭೇಟಿ

ವಿಮಾನ ನಿಲ್ದಾಣಕ್ಕೆ ಭೇಟಿ

"12 ವರ್ಷಗಳ ನಂತರ ಕಳೆದ ತಿಂಗಳು ಅಷ್ಟೇ ಉದ್ಘಾಟನೆಗೊಂಡು ಕಾರ್ಯ ಆರಂಭಿಸಿದ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ನಾನು ನಿನ್ನೆ ಇಳಿದಾಗ ರೋಮಾಂಚನಗೊಂಡ ಆ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ" ಎಂದು ಜನಾರ್ದನ ರೆಡ್ಡಿ ಸಂತಸ ಹಂಚಿಕೊಂಡಿದ್ದಾರೆ.

ಹಿಂದಿನ ನೆನಪು ಮಾಡಿಕೊಂಡರು

ಹಿಂದಿನ ನೆನಪು ಮಾಡಿಕೊಂಡರು

ಯಾದಗಿರಿ ಜಿಲ್ಲೆಯ ಶ್ರೀ ಕ್ಷೇತ್ರ ಹೆಡಗಿನಮುದ್ರೆ ಗ್ರಾಮದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಬೇಕಾಗಿದ್ದ ಜನಾರ್ದನ ರೆಡ್ಡಿ ವಿಮಾನದ ಮೂಲಕ ಕಲಬುರಗಿಗೆ ತೆರಳಿದರು. ವಿಮಾನ ನಿಲ್ದಾಣದಲ್ಲಿ ಇಳಿದಾಗ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡರು.

"ಆ ಸಮಯದಲ್ಲಿ ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ನಾನು ಬಂದು ಇಳಿದಾಗ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಕಂಡ ಹಲವಾರು ಕನಸುಗಳು ನನ್ನ ಕಣ್ಣ ಮುಂದೆ ಒಂದು ಬಾರಿ ಬಂದು ಹೋದವು" ಎಂದು ಅವರು ನೆನಪಿಸಿಕೊಂಡಿದ್ದಾರೆ.

ಕೈಲಾದ ಸೇವೆ ಮುಂದುವರೆಸುವೆ

ಕೈಲಾದ ಸೇವೆ ಮುಂದುವರೆಸುವೆ

"ಅಭಿವೃದ್ಧಿಯ ಕನಸುಗಳನ್ನು ಇಟ್ಟುಕೊಂಡು ಅಂದು ನಾನೇ ಭಾಗವಹಿಸಿ ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಇಂದು ಅದೇ ವಿಮಾನ ಆಶ್ರಯದಲ್ಲಿ ನಾನು ಬಂದು ಇಳಿದಾಗ ನಿಜಕ್ಕೂ ನನಗೆ ಎಲ್ಲಿಲ್ಲದ ಸಂತೋಷವಾಯಿತು" ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.

English summary
Former minister Janardhana Reddy dream comes true. Kalaburagi airport now open for public. Foundation stone laid for airport project when Janardhana Reddy was minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X