• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಲಬುರ್ಗಿ ಯುವಕನ ಹತ್ಯೆ ಪ್ರಕರಣ: ಇಬ್ಬರ ಬಂಧನ

|
Google Oneindia Kannada News

ಕಲಬುರಗಿ, ಮೇ 27: ಅನ್ಯಧರ್ಮೀಯ ಯುವತಿ ಪ್ರೀತಿಸಿದ್ದಕ್ಕೆ ಯುವಕನ ನಡುರಸ್ತೆಯಲ್ಲಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಾಡಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಹ್ಮದ ಶಾಬುದ್ದಿನ್ ಹಾಗೂ ಮಹ್ಮದ ನವಾಜ್ ಎಂಬುವವರೆ ಬಂಧಿತ ಆರೋಪಿಗಳು, ಇವರಿಬ್ಬರು ಬುಧವಾರ ರಾತ್ರಿ ವಿಜಯ್ ಕಾಂಬಳೆ(25) ಎಂಬ ಯುವಕನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿ ಶಾಬುದ್ದಿನ್‌ನ ಸಹೋದರಿಯನ್ನ ಕಳೆದ 2 ವರ್ಷಗಳಿಂದ ವಿಜಯ್ ಕಾಂಬಳೆ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದ್ದು, ಹಲವು ಬಾರಿ ಈ ಬಗ್ಗೆ ಬಿಡುವಂತೆ ಹೇಳಿದರೂ ಪ್ರೀತಿ ಮುಂದುವರೆಸಿದ್ದ. ಇದರಿಂದ ಕುಪಿತಗೊಂದ ಶಾಬುದ್ದಿನ್‌ ತನ್ನ ಸಹಚರನೊಂದಿಗೆ ಬಂದು ಬುಧವಾರ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ಕುಳಿತಿದ್ದ ವಿಜಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ.

ಅನ್ಯಧರ್ಮೀಯ ಯುವತಿಯ ಜೊತೆ ಪ್ರೇಮ, ನಡುರಸ್ತೆಯಲ್ಲಿ ಕೊಲೆಅನ್ಯಧರ್ಮೀಯ ಯುವತಿಯ ಜೊತೆ ಪ್ರೇಮ, ನಡುರಸ್ತೆಯಲ್ಲಿ ಕೊಲೆ

ವಿಜಯನನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಕಲಬುರಗಿಯಲ್ಲಿ ತಲೆಮರೆಸಿಕೊಂಡಿದ್ದರು. ಶುಕ್ರವಾರ ವಾಡಿ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೆ ಮಾಡಿ ಕರೆಸಿಕೊಂಡ ಕೊಲೆ
ವಿಜಯ್ ಕೆಲಸ ಮುಗಿಸಿ ಮನೆಗೆ ಬಂದಿದ್ದ. ಅವರಿಗೆ ಯಾರೋ ಕರೆ ಮಾಡಿದರು. ಹತ್ತು ನಿಮಿಷ ಬರುತ್ತೇನೆಂದು ಹೇಳಿ ಹೋಗಿದ್ದ. ನಂತರ ಘಟನೆ ಬಗ್ಗೆ ನಮಗೆ ಸುದ್ದಿ ಬಂತು. ಹೋಗಿ ನೋಡುವಷ್ಟರಲ್ಲಿ ಆತ ಮೃತಪಟ್ಟಿದ್ದ. ನನ್ನ ಮಗನನ್ನು ಹೀನಾಯವಾಗಿ ಕೊಚ್ಚಿ ಕೊಲೆಗೈದಿದ್ದಾರೆ. ಆತನ ಸ್ನೇಹಿತೆಯ ಮನೆಯವರು ಯಾವುದೇ ಬೆದರಿಕೆಯಾಕಿರಲಿಲ್ಲ, ಆದರೆ ಆಕೆಯ ಅಣ್ಣ ಮಾತ್ರ ಜೀವ ಬೆದರಿಕೆ ಹಾಕಿದ್ದ ಎಂದು ತಿಳಿಸಿದರು.

ಕಾರಣ ಗೊತ್ತಿಲ್ಲ , ಅಚಾನಕ್ ಆಗಿ ನಡೆದೋಯ್ತು ವಿಜಯ್ ಪ್ರೀತಿಸುತ್ತಿದ್ದ ಹುಡುಗಿ ಮನೆಯವರು, ನಮ್ಮ ಮನೆಯವರು ಈ ವಿಷಯದ ಬಗ್ಗೆ ಮಾತನಾಡಿದ್ದೆವು. ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅಚಾನಕ್​ ಆಗಿ ಈ ಘಟನೆ ನಡೆಸಿದೆ. ಆದರೆ ಇದಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಿಲ್ಲ ಮೃತನ ಸಂಬಂಧಿ ರಾಜಶೇಖರ ಎಂಬುವವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Kalaburagi district, Chittapur taluk, Wadi police arrested 2 accused, in the case of killing a 25-year-old Hindu youth for he love with a girl of a different religion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X