ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ತಿಂಗಳ ವೇತನ ಕೊಟ್ಟ ಐಎಎಸ್ ಅಧಿಕಾರಿ

|
Google Oneindia Kannada News

ಕಲಬುರಗಿ, ಜನವರಿ 16 : ಸಂತರ ನಾಡು ಕಲಬುರಗಿಯಲ್ಲಿ 85ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಯುತ್ತಿದೆ. 2020ರ ಫೆಬ್ರವರಿ 5, 6 ಹಾಗೂ 7ರಂದು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಿದ್ದಾರೆ. ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವಂತೆ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.

85ನೇ ಕನ್ನಡ ಸಾಹಿತ್ಯ ಸಮ್ಮೇಳನ; ವೇದಿಕೆ ನಿರ್ಮಾಣಕ್ಕೆ ಶುಕ್ರವಾರ ಪೂಜೆ 85ನೇ ಕನ್ನಡ ಸಾಹಿತ್ಯ ಸಮ್ಮೇಳನ; ವೇದಿಕೆ ನಿರ್ಮಾಣಕ್ಕೆ ಶುಕ್ರವಾರ ಪೂಜೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಕೋಶಾಧ್ಯಕ್ಷರು, ಕಲಬುರಗಿ ಜಿಲ್ಲಾಧಿಕಾರಿಯಾಗಿರುವ ಬಿ. ಶರತ್ ಒಂದು ತಿಂಗಳ ವೇತನ 97,461 ರೂ. ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬದಲಾವಣೆ85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬದಲಾವಣೆ

IAS Officer Donates One Month Salary To Kannada Sahitya Sammelana

ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ವೀರಭದ್ರ ಸಿಂಪಿ ಅವರಿಗೆ ಒಂದು ತಿಂಗಳ ವೇತನದ ಚೆಕ್ ಹಸ್ತಾಂತರಿಸಿದರು.

85ನೇ ಕನ್ನಡ ಸಾಹಿತ್ಯ ಸಮ್ಮೇಳನ; ಲಾಂಛನದ ವಿಶೇಷತೆಗಳು 85ನೇ ಕನ್ನಡ ಸಾಹಿತ್ಯ ಸಮ್ಮೇಳನ; ಲಾಂಛನದ ವಿಶೇಷತೆಗಳು

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಣ ವೀರಭದ್ರ ಸಿಂಪಿ ಅವರು ಸಹ ತಮ್ಮ ಒಂದು ದಿನದ ವೇತನವನ್ನು ನುಡಿ ಹಬ್ಬಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದರು. ಜಿಲ್ಲಾಡಳಿತ ಕನ್ನಡ ಹಬ್ಬಕ್ಕಾಗಿ ಸಿದ್ಧತೆ ಆರಂಭಿಸಿದ್ದು, ಜನವರಿ 17ರಂದು ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗುತ್ತದೆ.

32 ವರ್ಷಗಳ ನಂತರ ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಸಮ್ಮೇಳನದ ಯಶಸ್ಸಿಗಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಸಾಕಷ್ಟು ಅನುದಾನದ ಅವಶ್ಯಕತೆ ಇರುತ್ತದೆ.

ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಕಾರ್ಖಾನೆ-ಉದ್ದಿಮೆಗಳು, ವಿವಿಧ ವ್ಯಾಪಾರಿ ಸಂಘಗಳು ಮುಂತಾದವರು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ. ಎಲ್ಲಾ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸುವಂತೆ ಕರೆ ನೀಡಲಾಗಿದೆ.

ದೇಣಿಗೆ ನೀಡಲು ಬಯಸುವವರು ಈ ಕೆಳಕಂಡ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್. ಮೂಲಕ ಹಣ ವರ್ಗಾಯಿಸಬಹುದಾಗಿದೆ. ಚೆಕ್ ಅಥವಾ ಡಿ.ಡಿ. ಮೂಲಕವೂ ಸಹ ದೇಣಿಗೆ ನೀಡಬಹುದಾಗಿದೆ. ಚೆಕ್ ಮೂಲಕ ದೇಣಿಗೆ ನೀಡಬಯಸುವವರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಚೆಕ್‍ ನೀಡಬಹುದಾಗಿದೆ.

ಬ್ಯಾಂಕ್ ಖಾತೆ ವಿವರ
ಬ್ಯಾಂಕ್ ಖಾತೆ ಹೆಸರು- 85TH ABKSSSK
ಬ್ಯಾಂಕಿನ ಹೆಸರು : ಸಿಂಡಿಕೇಟ್ ಬ್ಯಾಂಕ್
ಶಾಖೆ ಹೆಸರು : ಸ್ಟೇಷನ್ ಬಜಾರ, ತಿಮ್ಮಾಪುರಿ ಚೌಕ್, ಕಲಬುರಗಿ
ಖಾತೆ ಸಂಖ್ಯೆ : 13012010153869
ಐ.ಎಫ್.ಎಸ್.ಸಿ. ಕೋಡ್ : SYNB0001301
ಎಂ.ಐ.ಸಿ.ಆರ್. ಸಂಖ್ಯೆ : 585025003

English summary
Kalaburagi Deputy Commissioner and IAS officer Sharat B. donated one month salary to 85th Kannada Sahitya Sammelana. Sahitya Sammelana will be held in Gulbarga university campus on February 5, 6 and 7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X