ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನು ಉಚ್ಛಾಟಿಸಲಾಯಿತು: ಸಿದ್ದರಾಮಯ್ಯ

|
Google Oneindia Kannada News

ಕಲಬುರಗಿ, ಮೇ 11: ನಾನು ಜೆಡಿಎಸ್ ಪಕ್ಷ ಬಿಡಲಿಲ್ಲ, ನನ್ನನ್ನು ದೇವೇಗೌಡ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು ಎಂದು ಸಿದ್ದರಾಮಯ್ಯ, ತಮ್ಮನ್ನು ಪಕ್ಷಾಂತರಿ ಎಂದ ಬಿಜೆಪಿಯವರಿಗೆ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ ಉಮೇಶ್ ಜಾಧವ್ ಅವರನ್ನು ಸಿದ್ದರಾಮಯ್ಯ ಟೀಕಿಸಿದ್ದರು, ಇದಕ್ಕೆ ಪ್ರತಿಯಾಗಿ ಬಿಜೆಪಿಯ ಆರ್.ಅಶೋಕ್ ಅವರು 'ಸಿದ್ದರಾಮಯ್ಯ ಸಹ ಜೆಡಿಎಸ್ ಬಿಟ್ಟವರೇ, ಅವರೂ ಪಕ್ಷಕ್ಕೆ ದ್ರೋಹ ಎಸಗಿದವರೇ' ಎಂದಿದ್ದರು. ಇದಕ್ಕೆ ಈಗ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ನೀವು ಜೆಡಿಎಸ್ ಬಿಟ್ಟು ಬಂದಿದ್ದೇಕೆ ಸಿದ್ದರಾಮಯ್ಯಗೆ ಆರ್ ಅಶೋಕ ಪ್ರಶ್ನೆ ನೀವು ಜೆಡಿಎಸ್ ಬಿಟ್ಟು ಬಂದಿದ್ದೇಕೆ ಸಿದ್ದರಾಮಯ್ಯಗೆ ಆರ್ ಅಶೋಕ ಪ್ರಶ್ನೆ

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಜೆಡಿಎಸ್ ಬಿಡಲಿಲ್ಲ, ನಾನು ಮಾಡುತ್ತಿದ್ದ ಅಹಿಂದ ಹೋರಾಟದಿಂದಾಗಿ ದೇವೇಗೌಡ ಅವರು ನನ್ನನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

I did not left JDS party, Deve Gowda expelled me: Deve Gowda

ಇದೇ ವೇಳೆ ಆರ್.ಅಶೋಕ್ ವಿರುದ್ಧ ವಾಗ್ದಾಳಿಯನ್ನೂ ನಡೆಸಿದ ಸಿದ್ದರಾಮಯ್ಯ, ಅಶೋಕ್ ಅವರು ಸತ್ಯ ತಿಳಿದುಕೊಂಡು ಮಾತನಾಡಬೇಕು, ಆತನ ಮಾತಿಗೆ ಹಿಂದೂ ಇಲ್ಲ ಮುಂದೂ ಇಲ್ಲ ಎಂದು ವ್ಯಂಗ್ಯವಾಡಿದರು.

ಮಾಜಿ ಬೆಂಬಲಿಗ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ಮಾಜಿ ಬೆಂಬಲಿಗ ಉಮೇಶ್ ಜಾಧವ್ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ

ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ನೀಡಿತ್ತು, ಆತನನ್ನು ಶಾಸಕನನ್ನಾಗಿ ಬೆಳಿಸಿತ್ತು, ಆದರೆ ಆತ ತನ್ನ ಲಾಭಕ್ಕಾಗಿ ಕಾಂಗ್ರೆಸ್‌ಗೆ ದ್ರೋಹ ಮಾಡಿದ ಆದರೆ ನಾನು ಆತನಂತೆ ಮಾಡಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ತೇಜಸ್ವಿನಿ ಮಾತನಾಡಿದರೆ ಬಣ್ಣ ಬಯಲಾಗುತ್ತದೆ: ಬಿಜೆಪಿಗೆ ಸಿದ್ದು ಎಚ್ಚರಿಕೆ ತೇಜಸ್ವಿನಿ ಮಾತನಾಡಿದರೆ ಬಣ್ಣ ಬಯಲಾಗುತ್ತದೆ: ಬಿಜೆಪಿಗೆ ಸಿದ್ದು ಎಚ್ಚರಿಕೆ

ಅಹಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಸಿದ್ದರಾಮಯ್ಯ ಅವರನ್ನು ಅಹಿಂದ ಕೈಬಿಡುವಂತೆ ದೇವೇಗೌಡ ಅವರು ಒತ್ತಡ ಹೇರಿದ್ದರು, ಆದರೆ ಅದನ್ನು ಸಿದ್ದರಾಮಯ್ಯ ಮಾಡಲಿಲ್ಲ, ಆಗ ಸಿದ್ದರಾಮಯ್ಯ ಅವರನ್ನು ದೇವೇಗೌಡ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದರು, ಆನಂತರ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾದರು.

ಉಮೇಶ್ ಜಾಧವ್ ಗೆ ಕಾಂಗ್ರೆಸ್ ಎಲ್ಲ ನೀಡಿತ್ತು, ಆದರೂ ಆತ ಪಕ್ಷಕ್ಕೆ ದ್ರೋಹ ಬಗೆದ

ಜೆಡಿಎಸ್ ಬಿಡಲಿಲ್ಲ, ಅಶೋಕ್ ಸತ್ಯ ತಿಳಿದುಕೊಳ್ಳಬೇಕು, ಅಹಿಂದ ಕಾರ್ಯಕ್ಕೆ,

English summary
I did not let JDS party, Deve Gowda expelled me from the party for my Ahinda workers said former CM Siddaramaiah. He said this because BJP's R.Ashok accused that Siddaramaiah is party defective.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X