ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಳಗಿ ಹಿರೇಮಠದ ಉತ್ತರಾಧಿಕಾರಿಯಾಗಿ 4 ವರ್ಷದ ಬಾಲಕ ನೇಮಕ

|
Google Oneindia Kannada News

ಕಲಬುರಗಿ, ಜುಲೈ 14: ಸಾಮಾನ್ಯವಾಗಿ ಯಾವುದೇ ಮಠದ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಬೇಕಾದರೆ ಜ್ಞಾನ, ತಿಳುವಳಿಕೆ ಸಂಪಾದನೆ, ಅನುಭವ ಹೊಂದಿರಬೇಕು ಮತ್ತು ಅದಕ್ಕೊಂದು ಸಮಯ ಮತ್ತು ವಯಸ್ಸಿನ ಮಿತಿ ಇರುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಕಾಳಗಿ ಪಟ್ಟಣದಲ್ಲಿರುವ ಸಂಸ್ಥಾನ ಹಿರೇಮಠದ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ವಿಭಿನ್ನವಾಗಿದ್ದು, 4 ವರ್ಷ ವಯಸ್ಸಿನ ನೀಲಕಂಠಯ್ಯಸ್ವಾಮಿಯನ್ನು ನೇಮಿಸಲಾಗಿದೆ.

ಕಲಬುರಗಿಯ ಕಾಳಗಿ ಮಠದ ಶಿವಬಸವಚಾರ್ಯ ಸ್ವಾಮೀಜಿ ನಿಧನಕಲಬುರಗಿಯ ಕಾಳಗಿ ಮಠದ ಶಿವಬಸವಚಾರ್ಯ ಸ್ವಾಮೀಜಿ ನಿಧನ

ಕಾಳಗಿ ಹಿರೇಮಠದ ಮಠದ ಪೀಠಾಧಿಪತಿಯಾಗಿದ್ದ ಶಿವಬಸವ ಶಿವಾಚಾರ್ಯ ಸ್ವಾಮೀಜಿ(45) ಇದೇ ಜುಲೈ 12ರಂದು ಲಿಂಗೈಕ್ಯರಾದರು. ಕಾಳಗಿ ಪಟ್ಟಣದಲ್ಲಿ ಲಿಂಗೈಕ್ಯ ಸ್ವಾಮೀಜಿಯ ಅಂತ್ಯಕ್ರಿಯೆ ನಡೆದಿದ್ದು, ಇದೇ ಸಂದರ್ಭದಲ್ಲಿ ಅನೇಕ ಸ್ವಾಮೀಜಿಗಳ ಸಮ್ಮುಖದಲ್ಲಿ ನಾಲ್ಕು ವರ್ಷದ ಬಾಲಕನನ್ನು ಮುಂದಿನ ಮಠದ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿ, ಕೆಲ ವಿಧಿ ವಿಧಾನಗಳನ್ನು ಕೂಡ ನೆರವೇರಿಸಲಾಯಿತು.

 Kalaburagi: Hiremath Swamiji Appoints 4 Year Old Boy As His Successor For Kalagi Math

ಕಲಬುರಗಿ ಜಿಲ್ಲೆ ಹಿರೇನಾಗಾಂವ ಮಠದ ಲಿಂಗೈಕ್ಯರಾಗಿರುವ ಶಿವಬಸವ ಶಿವಾಚಾರ್ಯ ಸ್ವಾಮೀಜಿ ತಲೆಮೇಲಿದ್ದ ಹಸಿರು ಶಾಲು, ಕೈಯಲ್ಲಿದ್ದ ಬೆತ್ತವನ್ನು ಉತ್ತರಾಧಿಕಾರಿಯಾಗಿ ನೇಮಕವಾದ ನೀಲಕಂಠಯ್ಯಸ್ವಾಮಿಗೆ ಹಸ್ತಾಂತರ ಮಾಡಲಾಗಿದೆ.

ನಾಲ್ಕು ವರ್ಷದ ಬಾಲಕ ನೀಲಕಂಠಸ್ವಾಮಿ ಬೇರಾರು ಅಲ್ಲ, ಲಿಂಗ್ಯಕ್ಯರಾದ ಶಿವಬಸವ ಶಿವಾಚಾರ್ಯ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಗುರುನಂಜಯ್ಯ ಹಿರೇಮಠರ ಪುತ್ರ. ಇನ್ನೂ ಶಾಲೆಯ ಮೆಟ್ಟಿಲು ಹತ್ತದ ಬಾಲಕ ಇದೀಗ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ.

ಸದ್ಯ ನೀಲಕಂಠಯ್ಯಸ್ವಾಮಿ ಮಠದ ಉತ್ತರಾಧಿಕಾರಿಯಾಗಿದ್ದರೂ ಕೂಡಾ, ಮಠದ ಉಸ್ತುವಾರಿಯನ್ನು ಬಾಲಕ ಹದಿನೆಂಟು ವರ್ಷದವನಾಗುವವರಗೆ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು ನಿರ್ವಹಿಸಲಿದ್ದಾರೆ.

ಪುತ್ರವರ್ಗ ಪೀಠ ಪರಂಪರೆಯ ಮಠ
"ಶಿವಾಚಾರ್ಯ ಪರಂಪರೆಯಲ್ಲಿ ಎರಡು ರೀತಿಯ ಮಠಗಳಿವೆ. ಒಂದು ಪುತ್ರವರ್ಗ ಪೀಠ, ಮತ್ತೊಂದು ಶಿಷ್ಯ ಪರಂಪರೆಯ ಪೀಠ. ಪುತ್ರವರ್ಗ ಪೀಠ ಪರಂಪರೆಯಲ್ಲಿ, ಲಿಂಗ್ಯಕ್ಯರಾಗಿರುವ ಸ್ವಾಮೀಜಿಗಳ ಕುಟುಂಬದವರಲ್ಲಿ ಯಾರಾದರು ಇದ್ದರೆ, ಅವರನ್ನೇ ಮಠದ ಮುಂದಿನ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ. ಅವರ ಕುಟುಂಬದಲ್ಲಿ ಯಾರೂ ಇರದಿದ್ದರೆ, ಇದ್ದರೂ ಸ್ವಾಮೀಜಿಗಳಾಗಲು ಆಸಕ್ತಿ ತೋರದಿದ್ದರೆ ಮಾತ್ರ ಬೇರೆಯವರನ್ನು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ನೇಮಿಸುವ ಪರಂಪರೆ ಇದೆ.''

"ಶಿಷ್ಯ ವರ್ಗದ ಪೀಠಗಳಲ್ಲಿ ಬೇರೆಯವರನ್ನು ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲು ಅವಕಾಶವಿದೆ. ಕಾಳಗಿಯ ಸಂಸ್ಥಾನ ಹಿರೇಮಠ ಪುತ್ರವರ್ಗ ಪರಂಪರೆಯ ಮಠವಾಗಿದ್ದು, ಅವರ ಕುಟುಂಬದವರ ಒಪ್ಪಿಗೆ ಪ್ರಕಾರ, ನಾಲ್ಕು ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆಮ,'' ಎಂದು ಇಲ್ಲಿನ ಸ್ವಾಮೀಜಿಗಳು ತಿಳಿಸಿದ್ದಾರೆ.

ಸದ್ಯ ಪೀಠಾದಿಪತಿಯಾಗಿದ್ದವರು ಲಿಂಗ್ಯಕ್ಯರಾದ ಮೇಲೆ ಮಠದ ಪೀಠಾಧಿಪತಿ ಸ್ಥಾನವನ್ನು ಖಾಲಿ ಬಿಡಲು ಆಗುವುದಿಲ್ಲ. ಹೀಗಾಗಿ ಅವರ ಕುಟುಂಬದಲ್ಲಿದ್ದವರಿಗೆ ಪೀಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬೇಕಾಗುತ್ತದೆ. ಅವರ ಕುಟುಂಬದವರು ನಿರ್ಧಾರ ಮಾಡಿ ನೀಲಕಂಠಯ್ಯಸ್ವಾಮಿಗೆ ಉತ್ತರಾಧಿಕಾರಿ ನೇಮಕ ಮಾಡಲು ಒಪ್ಪಿಗೆ ನೀಡಿದ್ದರಿಂದ ಈ ಬಾಲಕನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲಾಗಿದೆ.

English summary
4-year-old Neelakanthaiah swamy has been appointed as the successor of Kalagi Hiremath in Chincholi taluk of Kalaburagi district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X