• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಲೆ; ಜೀವಾವಧಿ ಶಿಕ್ಷೆ ರದ್ದು ಮಾಡಿದ ಹೈಕೋರ್ಟ್!

|

ಕಲಬುರಗಿ, ಅಕ್ಟೋಬರ್ 28 : ಕೊಲೆ ಆರೋಪದಲ್ಲಿ ವ್ಯಕ್ತಿಯೊಬ್ಬರಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.

ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪನ್ನು ನೀಡಿದೆ. ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನಲೆಯಲ್ಲಿ ಶಿಕ್ಷೆ ರದ್ದಾಗಿದೆ.

ನಟ ಸುರೇಂದ್ರ ಬಂಟ್ವಾಳ್ ಕೊಲೆ ಪ್ರಕರಣಕ್ಕೆ ಮತ್ತೊಂದು ತಿರುವು

2012ರ ಮೇ 18ರಂದು ರಾಚಪ್ಪ ಎಂಬುವವರ ಕೊಲೆ ನಡೆದಿತ್ತು. ವಿಜಯಪುರ ಜಿಲ್ಲೆಯ ದೇವರ ಗೆಣ್ಣೂರು ಗ್ರಾಮದ ಅಶೋಕ್ ಆರೋಪಿ ಎಂದು ಬಂಧಿಸಲಾಗಿತ್ತು. 2014ರ ಜೂನ್ 16ರಂದು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

ತಂದೆಯ ಕೊಲೆ ಮಾಡಿ, ಪೊಲೀಸರಿಗೆ ಕರೆ ಮಾಡಿದ ಬಾಲಕಿ

ಹೈಕೋರ್ಟ್‌ಗೆ ಅರ್ಜಿ : ಜೀವಾವಧಿ ಶಿಕ್ಷೆ ತೀರ್ಪು ಪ್ರಶ್ನಿಸಿ ಅಶೋಕ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ರಾಚಪ್ಪ ಹತ್ಯೆಯಾಗಿದ್ದಾರೆ ಎಂಬುದನ್ನು ವೈದ್ಯಕೀಯ ದಾಖಲೆ ಹೇಳುತ್ತಿವೆ. ಆದರೆ, ಪ್ರತ್ಯಕ್ಷ ಸಾಕ್ಷಿ ಇಲ್ಲ ಎಂದು ಹೇಳಿದೆ.

ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಕೊಲೆ; ಹರಿದಾಡುತ್ತಿದೆ ಆಡಿಯೋ ಮೆಸೇಜ್‌

ಹಣಕಾಸಿನ ವಹಿವಾಟಿನ ಹಿನ್ನಲೆಯಲ್ಲಿ ರಾಚಪ್ಪರನ್ನು ಅಶೋಕ್ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಹಣಕಾಸಿನ ವಹಿವಾಟು ನಡೆದಿದೆ ಎಂಬುದನ್ನು ಸಾಬೀತು ಮಾಡಲು ಯಾವುದೇ ಸಾಕ್ಷ್ಯಗಳು ಇರಲಿಲ್ಲ.

ರಾಚಪ್ಪ ಅವರಿಂದ ಅಶೋಕ್ 50 ಸಾವಿರ ಹಣ ಪಡೆದಿರುವುದಾಗಿ ಆರೋಪ ಮಾಡಲಾಗಿದೆ. ಹಣ ಕೊಟ್ಟಿರುವುದನ್ನು ರಾಚಪ್ಪ ಪುತ್ರ ನೋಡಿಲ್ಲ. ಸಣ್ಣ ಡೈರಿಯಲ್ಲಿ ಹಣಕಾಸಿನ ವಿಚಾರ ನಿರ್ವಹಣಣೆ ಮಾಡುತ್ತಿದ್ದರು ಎಂದು ತಿಳಿಸಲಾಗಿದೆ. ಆದರೆ ಕೋರ್ಟ್‌ಗೆ ಡೈರಿ ಹಾಜರುಪಡಿಸಿಲ್ಲ ಎಂದು ನ್ಯಾಯಲಯ ತೀರ್ಪಿನಲ್ಲಿ ತಿಳಿಸಿದೆ.

ನ್ಯಾಯಾಲಯ ರಾಚಪ್ಪ ಅವರ ಮಗಳನ್ನೂ ವಿಚಾರಣೆ ನಡೆಸಿಲ್ಲ. ಹಣದ ವ್ಯವಹಾರ ನಡೆದಿದೆ ಎಂಬುದೇ ರುಜುವಾತಾಗಿಲ್ಲ ಎಂದು ಹೇಳಿರುವ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

English summary
Karnataka high court Kalaburagi bench cancelled the life imprisonment of the murder accused. Session court sentenced life imprisonment in the year of 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X