ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ; ಪತ್ನಿ ಸ್ಟ್ರೆಚರ್ ತಾನೇ ಎಳೆದುಕೊಂಡು ಹೋದ ವೃದ್ಧ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಮೇ 09: ಹಲವು ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದಿದ್ದ ವೃದ್ಧೆಯನ್ನು ಸರಿಯಾಗಿ ಗಮನಿಸದೇ ಅಲ್ಲಿನ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು, ಪತ್ನಿಯನ್ನು ಮಲಗಿಸಿದ ಸ್ಟ್ರೆಚರ್ ಅನ್ನು ವೃದ್ಧನೇ ತಳ್ಳಿಕೊಂಡು ಹೋದ ಅಮಾನವೀಯ ಘಟನೆ ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ನಿವಾಸಿ ನಾಗಮ್ಮ ಮೈ ಕೈ ನೋವು ಸೇರಿದಂತೆ ಕೆಲ ಸಮಸ್ಯೆಗಳಿಂದ ಬಳಲುತ್ತಿದ್ದು, ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಆದರೆ ವೃದ್ಧೆಯೆಡೆಗೆ ಆಸ್ಪತ್ರೆ ಸಿಬ್ಬಂದಿ ಗಮನ ಹರಿಸಿಲ್ಲ. ವೃದ್ಧೆಯನ್ನು ದಾಖಲಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ನೆಪಕ್ಕೆ ಎಕ್ಸ್ ರೇ ಮಾಡಿ ವೃದ್ಧೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಆನಂತರ ಏನು ಮಾಡಬೇಕೆಂದೂ ತಿಳಿಸಿಲ್ಲ.

 ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಸಿಬ್ಬಂದಿ ಸಾವು ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಸಿಬ್ಬಂದಿ ಸಾವು

Gims Hospital Negligence Towards Old Woman

ಏನು ಮಾಡಬೇಕೆಂದು ತೋಚದೇ, ಸ್ಟ್ರೆಚರ್ ತಳ್ಳಲು ಯಾರೂ ಸಹಾಯಕ್ಕೆ ಬಾರದೇ ನಾಗಮ್ಮ ಪತಿ ಜಂಪಣ್ಣ ತಾವೇ ಎಕ್ಸರೇ ಕೋಣೆಯಿಂದ ಒಪಿಡಿಗೆ ಸ್ಟ್ರೆಚರ್ ಎಳೆದುಕೊಂಡು ಹೋಗಿದ್ದಾರೆ. ಆದರೆ ಈ ದೃಶ್ಯವನ್ನು ಕಂಡರೂ ಕಂಡೂ ಕಾಣದಂತೆ ಆಸ್ಪತ್ರೆ ಸಿಬ್ಬಂದಿ ಓಡಾಡಿಕೊಂಡಿದ್ದಾರೆ. ವೃದ್ಧ ಸ್ಟ್ರೆಚರ್ ಎಳೆದುಕೊಂಡು ಹೋಗುತ್ತಿದ್ದ ಈ ದೃಶ್ಯ ಎಂಥವರಿಗೂ ಅಯ್ಯೋ ಅನ್ನಿಸುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ನೋಡಿಯೂ ಅದನ್ನು ಗಮನಿಸದವರಂತೆ ನಿರ್ಲಕ್ಷ್ಯ ವಹಿಸಿದ್ದಾರೆ.

English summary
Inhuman incident happened in gims hospital today. because of staff negligence, old man himself pulled stretcher of his wife to opd section,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X