ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಅಂಬ್ಯುಲೆನ್ಸ್; ಕಲಬುರಗಿ ಪಾಲಿಕೆ ವಿನೂತನ ಪ್ರಯತ್ನ

|
Google Oneindia Kannada News

ಕಲಬುರಗಿ, ಮೇ 21; ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಕಲಬುರಗಿ ಸಹ ಸೇರಿದೆ. ಕೋವಿಡ್ ಸೋಂಕಿತರನ್ನು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಮಹಾನಗರ ಪಾಲಿಕೆ ವಿನೂತನ ಪ್ರಯತ್ನ ಮಾಡಿದೆ.

Recommended Video

ಕೊರೊನಾ ರೋಗಿಗಳಿಗಾಗಿ ಕಲ್ಬುರ್ಗಿಯಲ್ಲಿ ಉಚಿತ ಆಟೋ ಆಂಬುಲೆನ್ಸ್ ಸೇವೆ | Oneindia Kannada

ಜನರು ಅಂಬ್ಯುಲೆನ್ಸ್‌ಗೆ ಕರೆ ಮಾಡಿದರೆ ಅದು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಆಗಮಿಸುವುದು ವಿಳಂಬವಾಗಬಹುದು. ಇದರಿಂದ ರೋಗಿಗಳು ಪರದಾಡಬೇಕಾಗುತ್ತದೆ. ಆದ್ದರಿಂದ ಕಲಬುರಗಿ ಮಹಾನಗರ ಪಾಲಿಕೆ ಆಟೋ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದೆ.

ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್‌ಡೌನ್ಕಲಬುರಗಿ ಜಿಲ್ಲೆಯಲ್ಲಿ ಮೇ 20ರಿಂದ ಸಂಪೂರ್ಣ ಲಾಕ್‌ಡೌನ್

ಪಾಲಿಕೆ ಆಯುಕ್ತರಾದ ಸ್ನೇಹಾಲ್ ಲೋಖಂಡೆ ಈ ಕುರಿತು ಮಾಹಿತಿ ನೀಡಿದ್ದಾರೆ. "ಒಟ್ಟು 5 ಆಟೋಗಳನ್ನು ಈ ಉದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೆಳಗ್ಗೆ 3, ರಾತ್ರಿ 2 ಆಟೋ ಅಂಬ್ಯುಲೆನ್ಸ್ ಸಂಚಾರ ನಡೆಸಲಿವೆ" ಎಂದು ಹೇಳಿದ್ದಾರೆ.

ಕಲಬುರಗಿ; ಶಹಾಬಾದ್ ಇಎಸ್‌ಐ ಆಸ್ಪತ್ರೆ ಶೀಘ್ರವೇ ಕೋವಿಡ್ ಕೇರ್ ಸೆಂಟರ್ ಕಲಬುರಗಿ; ಶಹಾಬಾದ್ ಇಎಸ್‌ಐ ಆಸ್ಪತ್ರೆ ಶೀಘ್ರವೇ ಕೋವಿಡ್ ಕೇರ್ ಸೆಂಟರ್

 Free Auto Ambulance Service For COVID Patients

"ಕೆಲವು ಸಂದರ್ಭದಲ್ಲಿ ಅಂಬ್ಯುಲೆನ್ಸ್ ತಲುಪುವುದು ತಡವಾಗಬಹುದು. ಆಗ ಜನರು ಉಚಿತವಾಗಿ ಲಭ್ಯವಿರುವ ಆಟೋ ಅಂಬ್ಯುಲೆನ್ಸ್ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು" ಎಂದು ಆಯುಕ್ತರು ತಿಳಿಸಿದ್ದಾರೆ.

ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ! ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ!

ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕಾಗಿ ಕಲಬುರಗಿ ಜಿಲ್ಲೆಯಾದ್ಯಂತ ಮೇ 20ರ ಬೆಳಗ್ಗೆ 6 ಗಂಟೆಯಿಂದ ಮೇ 23ರ ಬೆಳಗ್ಗೆ 6 ಗಂಟೆ ತನಕ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ಅತ್ಯಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಹೋಟೆಲ್‌ಗಳಲ್ಲಿ ಊಟ ಮತ್ತು ಉಪಹಾರ ಪಾರ್ಸಲ್ ಸೇವೆ ಲಭ್ಯವಿರಲಿವೆ. ಆಸ್ಪತ್ರೆ, ಔಷಧಿ ಅಂಗಡಿಗಳು, ಅಂಬುಲೆನ್ಸ್, ಅಗ್ನಿಶಾಮಕ, ಪೆಟ್ರೋಲ್ ಬಂಕ್ ಹಾಗೂ ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಮೇ 20ರ ವರದಿಯಂತೆ ಕಲಬುರಿಗಿ ಜಿಲ್ಲೆಯಲ್ಲಿ 399 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6690. ಇದವರೆಗೂ ಜಿಲ್ಲೆಯಲ್ಲಿ 694 ಜನರು ಗುಣಮುಖರಾಗಿದ್ದಾರೆ.

English summary
Kalaburagi city corporation has launched free auto ambulance service for COVID patients. Three autos to ply in day and two at night said commissioner Snehal Lokhande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X