ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗಿದ್ದಾರೆ

|
Google Oneindia Kannada News

ಕಲಬುರಗಿ, ಅ 26: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ನಿನ್ನೆ ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ, ಅಲ್ಲಿ ಸುಮಾರು ಎರಡೂವರೆ ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಮನೆ ಕುಸಿತ, ಜಾನುವಾರುಗಳ ಸಾವು, ಆಸ್ತಿ ಹಾನಿ ಹೀಗೆ ಒಟ್ಟು ಅಂದಾಜು ರೂ.2,000 ಕೋಟಿ ನಷ್ಟ ಸಂಭವಿಸಿದೆ"ಎಂದು ಹೇಳಿದ್ದಾರೆ.

"ಅಶ್ವಥ್ ನಾರಾಯಣಗೆ ಧಮ್ ಇದ್ದರೆ ಮೋದಿ ಬಳಿ ಹೋಗಿ ನೆರೆ ಪರಿಹಾರ ತರಲಿ''

"ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ, ಅಂದರೆ ಸುಮಾರು ರೂ.100 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಇದರ ಜೊತೆಗೆ ರಸ್ತೆಗಳು, ಶಾಲೆಗಳು, ಮನೆ, ಜಾನುವಾರು, ಆಸ್ತಿಪಾಸ್ತಿ ಎಲ್ಲವೂ ಸೇರಿ ಒಟ್ಟು ನಷ್ಟ ರೂ.700 ಕೋಟಿ ನಷ್ಟ ಸಂಭವಿಸಿದೆ ಎಂದು ಸರ್ಕಾರ ಅಂದಾಜಿಸಿದೆ"ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಅಫ್ಜಲ್‌ಪುರ, ಜೇವರ್ಗಿ, ಶಹಾಪುರ, ಯಾದಗಿರಿ ಭಾಗಗಳ ಪ್ರವಾಹಪೀಡಿತ ಪ್ರದೇಶಗಳಿಗೆ ನಾನು ಇಂದು ಭೇಟಿ ನೀಡಲಿದ್ದೇನೆ. ಅಫ್ಜಲ್‌ಪುರ ಕ್ಷೇತ್ರದಲ್ಲಿ ಮೂರು ಸಣ್ಣನೀರಾವರಿ ಕೆರೆಗಳು ಒಡೆದು ಹೋಗಿ ನೂರಾರು ಎಕರೆ ಬೆಳೆ ನಷ್ಟವಾಗಿದೆ. ಕೃಷಿಭೂಮಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ರೈತರ ಬದುಕು ದುಸ್ತರವಾಗಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

 ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಹುದ್ದೆ ಚರ್ಚೆ: ಕೊನೆಗೂ ಮೌನ ಮುರಿದ ಡಿಕೆಶಿ! ಕಾಂಗ್ರೆಸ್‌ ಪಕ್ಷದಲ್ಲಿ ಸಿಎಂ ಹುದ್ದೆ ಚರ್ಚೆ: ಕೊನೆಗೂ ಮೌನ ಮುರಿದ ಡಿಕೆಶಿ!

ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ತಲೆ ಹಾಕಿಲ್ಲ

ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ತಲೆ ಹಾಕಿಲ್ಲ

ಕಲಬುರ್ಗಿ ಜಿಲ್ಲೆ ಆಗಸ್ಟ್‌ನಿಂದ ಈ ವರೆಗೆ ಮೂರು ಬಾರಿ ಪ್ರವಾಹದಿಂದ ಹಾನಿಗೊಳಗಾಗಿದೆ, ಇದರ ಜೊತೆಗೆ ಕೊರೊನಾದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಇಂತಹ ಕಷ್ಟಕಾಲದಲ್ಲಿ ರೈತರು, ಬಡವರ ಜೊತೆಗಿದ್ದು ಅವರಿಗೆ ಸಾಂತ್ವನ ಹೇಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ತಲೆ ಹಾಕಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ವಿರುದ್ದ ಕಿಡಿ

ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ವಿರುದ್ದ ಕಿಡಿ

"ಕಲಬುರ್ಗಿ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಪರಿಹಾರ ಕಾರ್ಯಗಳಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ನಂತರ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ಹೊತ್ತ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಅಂತಾದ್ರೆ ಇನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸ್ಪಂದಿಸಬಹುದು" ಎಂದು ಸಿದ್ದರಾಮಯ್ಯ ಜಿಲ್ಲಾ ಉಸ್ತುವಾರಿ ವಿರುದ್ದ ಕಿಡಿಕಾರಿದ್ದಾರೆ.

ಆರ್. ಅಶೋಕ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗಿದ್ದಾರೆ

ಆರ್. ಅಶೋಕ್ ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗಿದ್ದಾರೆ

ಕಂದಾಯ ಸಚಿವರು (ಆರ್. ಅಶೋಕ್) ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗಿದ್ದಾರೆ, ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಿದ್ರು ಅವರಿಗೆ ಪ್ರವಾಹದ ಹಾನಿ ಎಷ್ಟು ಕಂಡಿದ್ಯೋ ಬಿಟ್ಟಿದ್ಯೋ ಅವರಿಗೆ ಗೊತ್ತು. ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿದ್ರೆ ವಾಸ್ತವ ಪರಿಸ್ಥಿತಿ ಅರಿವಾಗಿರೋದು, ಅದನ್ನೇ ಸರ್ಕಾರ ಮಾಡಿಲ್ಲ ಎಂದು ಅಶೋಕ್ ವಿರುದ್ದ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ

ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ

ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಬೇಕು ಅಂತ ಕಾಯುತ್ತಾ ಇದ್ದರೆ ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬೇರೆ ಯಾರಿಗೂ ಸಿಗದೆ ವಾಪಾಸು ಹೋಗಿದ್ದಾರೆ. ಜನರ ಕಷ್ಟ ಕೇಳೋಕೆ ಸರ್ಕಾರದ ಪ್ರತಿನಿಧಿಗಳು ಯಾರೂ ಜನರ ಬಳಿ ಹೋಗ್ತಿಲ್ಲ ಅಂದರೆ ಜನರ ಪಾಲಿಗೆ ಸರ್ಕಾರ ಸತ್ತಿದೆ ಅಂತಲ್ಲವೇ?

ಟ್ವೀಟ್ ಮೂಲಕ, ಬಿಎಸ್ವೈ ಸರಕಾರದ ತರಾಟೆ

ಟ್ವೀಟ್ ಮೂಲಕ, ಬಿಎಸ್ವೈ ಸರಕಾರದ ತರಾಟೆ

"ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಕಳೆದ ವರ್ಷದ ನೆರೆ ಪರಿಹಾರದ ಹಣವೇ ಇನ್ನೂ ಎಲ್ಲರನ್ನು ತಲುಪಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ರೆ ತಾನೆ ಜನರಿಗೆ ಪರಿಹಾರದ ಹಣ ತಲುಪಲು ಸಾಧ್ಯ. ಹೋಗಲಿ ಇವರಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ಕೇಳುವ ಧೈರ್ಯವಾದರೂ ಇದೆಯಾ? ಅದೂ ಇಲ್ಲ" ಎಂದು ಟ್ವೀಟ್ ಮೂಲಕ, ಬಿಎಸ್ವೈ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

English summary
Flood Relief: Opposition Leader Siddaramaiah Angry On Yediyurappa, R Ashok, Govind Karjol,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X