ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುಲಬರ್ಗಾ ವಿವಿ ಗ್ರಂಥಾಲಯದಲ್ಲಿ ಬೆಂಕಿ, ಅಪಾರ ಪ್ರಮಾಣದ ಪುಸ್ತಕಗಳು ಭಸ್ಮ

By Ramesh
|
Google Oneindia Kannada News

ಕಲಬುರಗಿ, ಡಿಸೆಂಬರ್. 08 : ಕಲಬುರಗಿಯ ಸೇಡಂ ರಸ್ತೆಯಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್ ನಲ್ಲಿರುವ ಗ್ರಂಥಾಲಯದಲ್ಲಿ ಕಿಡಿಗೇಡಿಗಳು ಬುಧವಾರ ಬೆಂಕಿ ಹಚ್ಚಿದ್ದು, ಅಪಾರ ಪ್ರಮಾಣದ ಪುಸ್ತಕಗಳು ಬೆಂಕಿಗಾಹುತಿಯಾಗಿವೆ.

ವಿಷಯ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ರಂಥಾಲಯದಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದು. ರಾತ್ರಿ 12 ರ ಸುಮಾರಿಗೆ ವ್ಯಕ್ತಿಯೋರ್ವ ಒಳ ಪ್ರವೇಶದ ದೃಶ್ಯ ಪತ್ತೆಯಾಗಿದೆ.

ಒಳಬಂದ ವ್ಯಕ್ತಿ ಒಂದನೇ ಮಹಡಿಯಲ್ಲಿ ಬೆಂಕಿ ಹಚ್ಚಿದ್ದು, ಚೇರ್ ಹಾಗೂ ಪುಸ್ತಕ ಒಂದೆಡೆ ಇಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗುಲಬರ್ಗಾ ವಿವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Fire at Gulbarga University library

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಸಿ.ಎಸ್ ಪಾಟೀಲ್, ಕೆಲ ಕಿಡಿಗೇಡಿಗಳು ಕಟ್ಟಡ ಮೇಲ್ಭಾಗದಿಂದ ಗ್ರಂಥಾಲಯದೊಳಗೆ ನುಗ್ಗಿ ಬೆಂಕಿ ಹಚ್ಚಿದ್ದಾರೆ.

ಮೊದಲು ಪುಸ್ತಕಗಳನ್ನ ಒಂದೆಡೆ ಹಾಕಿ ಬೆಂಕಿ ಹಚ್ಚಲಾಗಿದೆ. ನಂತರ ಇಡೀ ಪುಸ್ತಕ ವಿಭಾಗಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ವಿವಿ ಮಟ್ಟದಲ್ಲಿ ಉನ್ನತಮಟ್ಟದ ತನಿಖೆಗೊಳಪಡಿಸಲಾಗುವುದು ಎಂದಿದ್ದಾರೆ.

ಇನ್ನು, ಕಟ್ಟಡ ಮೇಲ್ಭಾಗದಿಂದ ಆರೋಪಿ ಒಳಗೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಕೆಲಸದಿಂದ ತೆಗೆದಿದ್ದ ವ್ಯಕ್ತಿಯ ಈ ಕೃತ್ಯ ನಡೆಸಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿವೆ.

English summary
A major fire broke out in the library building on the Gulbarga University campus in Kalaburagi on Wednesday. No injuries were reported. There was no one in the library at the time of the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X