ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಬಗೆಹರಿಯುತ್ತಾ ವಲ್ಲ್ಯಾಪುರೆ,ಯಾಕಾಪುರ್ ಟಿಕೇಟ್ ಫೈಟ್ ?

By Manjunatha
|
Google Oneindia Kannada News

ಕಲಬುರಗಿ, ಡಿಸೆಂಬರ್ 08: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರಿವರ್ತನಾ ಯಾತ್ರೆ ಇಂದು (ಡಿಸೆಂಬರ್ 08) ಕಲಬುರಗಿ ಜಿಲ್ಲೆಯ ಚಿಂಚೋಳಿ‌ ಪಟ್ಟಣಕ್ಕೆ ಆಗಮಿಸಿದೆ, ಬಿಜೆಪಿಯನ್ನು ಬಲಪಡಿಸಬೇಕೆಂದು ಯಾತ್ರೆ ಬಂದಿದೆಯಾದರೂ ಚಿಂಚೋಳಿ ಬಿಜೆಪಿ ಕಾರ್ಯಕರ್ತರಿಗೆ ಇರುವ ಸಮಸ್ಯೆ ಚಿಂಚೋಳಿ ಬಿಜೆಪಿ ಘಟಕದಲ್ಲಿರುವ ಬಿಜೆಪಿ, ಕೆಜೆಪಿ ಒಡಕು.

ಚಿಂಚೋಳಿ ಬಿಜೆಪಿ ಟಿಕೇಟ್ ಗಾಗಿ ಇದೀಗ ಮಾಜಿ ಸಚಿವ ಸುನೀಲ್ ವಲ್ಲ್ಯಾಪುರೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯ ಸಂಜೀವ್ ಯಾಕಾಪೂರ್ ನಡುವೆ ಟಿಕೆಟ್‌ಗಾಗಿ ಬಿಗ್ ಪೈಟ್ ಪ್ರಾರಂಭವಾಗಿದೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ದಿಸುವ ವಿಚಾರ‌ ಹೊಂದಿದ್ದ ಸುನೀಲ್ ವಲ್ಲಾಪೂರೆ, ಅಲ್ಲಿ ಟಿಕೇಟ್ ಸಿಗೋದಿಲ್ಲಾ ಅಂತ‌‌ ಗೊತ್ತಾದಮೇಲೆ ಮತ್ತೆ ಚಿಂಚೋಳಿಗೆ ಮರಳಿದ್ದಾರೆ. ಇಗಾಗಲೇ ಚುನಾವಣಾ ತಯಾರಿಯನ್ನು ಕೂಡಾ ಸುನೀಲ್ ವಲ್ಲಾಪೂರೆ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಯಾವುದೇ ಕಾರಣಕ್ಕೂ ವಲ್ಲ್ಯಾಪುರೆಗೆ ಟಿಕೇಟ್ ನೀಡಬಾರದು ಅನ್ನೋದು ಮೂಲ ಬಿಜೆಪಿಗರಾದ ಸಂಜೀವ್ ಯಾಕಾಪೂರ್ ಬೆಂಬಲಿಗರ ಆಗ್ರಹವಾಗಿದೆ.

Fight between Chincholi BJP and KJP leaders for ticket

ಈ ಹಿಂದೆ ಇದೇ ಕ್ಷೇತ್ರದಿಂದ ಸುನೀಲ್ ವಲ್ಲ್ಯಾಪುರೆ ಗೆದ್ದಾಗ ಕ್ಷೇತ್ರದ ಜನರ ವಿಶ್ವಾಸವನ್ನು ಉಳಿಸಿಕೊಂಡಿಲ್ಲಾ. ಹೀಗಾಗಿ ಈ ಭಾರಿ ಸುನೀಲ್ ವಲ್ಲ್ಯಾಪುರೆಗೆ ಟಿಕೇಟ್ ನೀಡಬಾರದು ಅಂತ ಆಗ್ರಹಿಸುತ್ತಿದ್ದಾರೆ

ತಾಲೂಕಿನವರಿಗೆ ಟಿಕೇಟ್ ನೀಡಿ, ಹೊರಗಿನವರಿಗೆ ಬೇಡ ಅನ್ನೋ ಹೋರಾಟ ಕೂಡಾ ನಡೆಯುತ್ತಿದೆ. ಸುನೀಲ್ ವಲ್ಲ್ಯಾಪುರೆ ಚಿಂಚೋಳಿ ತಾಲೂಕಿನವರಲ್ಲಾ. ವಿಜಯಪುರದಿಂದ ಬಂದು ಇಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಟಿಕೇಟ್ ನೀಡಬಾರದು. ತಾಲೂಕಿನವರಿಗೆ ಬಿಜೆಪಿ ಟಿಕೇಟ್ ನೀಡಬೇಕು ಅನ್ನೋ ಆಗ್ರಹ ಕೂಡಾ ಹೆಚ್ಚಾಗಿದೆ. ತರೆಮರೆಯಲ್ಲಿ ಇದನ್ನು ಸಂಜೀವ್ ಯಾಕಾಪೂರ್ ಅವರೇ ತಮ್ಮ ಬೆಂಬಲಿಗರ ಮೂಲಕ ಮಾಡಿಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

ಅಂತಿಮವಾಗಿ ಯಾರಿಗೆ ಬಿಜೆಪಿ ಟಿಕೆಟ್ ಸಿಗಲಿದೆ, ಟಿಕೆಟ್ ಘೋಷಣೆಯಾದ ಮೇಲೆ ಯಾವ ರೀತಿಯ ಬಂಡಾಯ ಸ್ಪೋಟಗೊಳ್ಳಲಿದೆ ಅನ್ನೋದಕ್ಕೆ ಕಾಲವೇ ಉತ್ತರ ಹೇಳಲಿದೆ.

English summary
There is a fight for election ticket between BJP leader Sanjeev Yakapur and KJP leader Sunil Valyapore in Kalaburagi districts Chincholi constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X