• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಥಳೀಯ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗರ: ಸಚಿವ ಸುಧಾಕರ್ ಕಿಡಿ

|

ಕಲಬುರಗಿ, ಮೇ 1: ಸ್ಥಳೀಯವಾಗಿ ಮಾಡುವ ಅವಾಂತರಗಳಿಗೆ ಸರ್ಕಾರ ಮುಜುಗರ ಅನುಭವಿಸಬೇಕಾಗಿದೆ. ಇನ್ನು ಮುಂದೆ ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಎಚ್ಚರಿಕೆ ನೀಡಿದರು.

ರೆಮ್‌ಡೆಸಿವಿರ್, ಹಾಸಿಗೆ, ಆಕ್ಸಿಜನ್ ಸಹಿತ ಇತರೆ ವಿಷಯದಲ್ಲಿ ಡಿಎಚ್ಒ ಅವರ ಬಳಿಯೇ ಮಾಹಿತಿ ಇಲ್ಲದ್ದನ್ನು ಕಂಡ ಸಚಿವರು, ಕೆಂಡಾಮಂಡಲರಾಗಿ "ಜವಾಬ್ದಾರಿ ಹುದ್ದೆಯಲ್ಲಿದ್ದು, ಇದೇ ರೀತಿ ಮುಂದುವರಿದರೆ ಅಮಾನತು ಮಾಡಬೇಕಾಗುತ್ತದೆ' ಎಂದು ಎಚ್ಚರಿಕೆ ನೀಡಿದರು.

ಕೋವಿಡ್ ಜವಾಬ್ದಾರಿ ತಪ್ಪಿಸಿಕೊಂಡರೆ ಕ್ರಮ: ಜಿಮ್ಸ್ ಆಡಳಿತಕ್ಕೆ ಸಚಿವ ಸುಧಾಕರ್ ಎಚ್ಚರಿಕೆ ಕೋವಿಡ್ ಜವಾಬ್ದಾರಿ ತಪ್ಪಿಸಿಕೊಂಡರೆ ಕ್ರಮ: ಜಿಮ್ಸ್ ಆಡಳಿತಕ್ಕೆ ಸಚಿವ ಸುಧಾಕರ್ ಎಚ್ಚರಿಕೆ

ಸರಕಾರ ನೀಡಿರುವ ಮಾರ್ಗಸೂಚಿ ಮತ್ತು ಸೂಚನೆಗಳನ್ನು ಸರಿಯಾಗಿ ಪಾಲಿಸಿಲ್ಲ. ಆಸ್ಪತ್ರೆ ಹೊರಭಾಗದ ಪ್ರಕಟಣಾ ಫಲಕದಲ್ಲಿ ಎಲ್ಲಾ ಮಾಹಿತಿ ಪ್ರಕಟಿಸುವಂತೆ ತಾಕೀತು ಮಾಡಿದ್ದರೂ, ಜಿಮ್ಸ್ ಮುಂದೆ ಯಾವುದೇ ಮಾಹಿತಿ ಇಲ್ಲ. ಖಾಸಗಿಯವರ ಬಳಿ ಶೇ.75 ಹಾಸಿಗೆ ತೆಗೆದುಕೊಳ್ಳಲು ಸೂಚನೆ ನೀಡಿದ್ದರೂ ಪಾಲನೆ ಮಾಡಿಲ್ಲ. ನಿಮ್ಮ ಕೈಯಲ್ಲಿ ಈ ಕೆಲಸ ಆಗದಿದ್ದರೆ ಬೇರೆಯವರಿಂದ ಮಾಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಮ್ಸ್ ನಿರ್ದೇಶಕರಿಗೆ ಎಚ್ಚರಿಕೆ ನೀಡಿದರು.

ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ

ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿ

ಖಾಸಗಿ ಆಸ್ಪತ್ರೆಗಳು ಹಾಸಿಗೆಗಳ ಸಂಖ್ಯೆ ಕುರಿತು ಸುಳ್ಳು ಮಾಹಿತಿ ನೀಡಿದರೆ ಸಹಿಸುವುದಿಲ್ಲ. ಕೆಪಿಎಂಇ ನೋಂದಣಿ ವೇಳೆ ನಮ್ಮ ಬಳಿ ಎಲ್ಲಾ ಮಾಹಿತಿ ಇರುತ್ತದೆ. ಮೋಸ ಮಾಡಲು ಆಗುವುದಿಲ್ಲ ಎಂದರು. ತುರ್ತು ಇರುವ ಚಿಕಿತ್ಸೆ ಹೊರತುಪಡಿಸಿ ಉಳಿದ ಚಿಕಿತ್ಸೆ, ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲು ಜಿಲ್ಲಾಡಳಿತ ಸೂಚನೆ ನೀಡಬೇಕು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಪರಿಸ್ಥಿತಿಯನ್ನು ಅರಿತು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಆಕ್ಸಿಜನ್ ಬಳಕೆಯಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಅರ್ಹ ಸೋಂಕಿತರನ್ನು ಮಾತ್ರ ದಾಖಲು ಮಾಡಬೇಕು. ಉಳಿದವರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಬೇಕು. ಅವರಿಗೆ ಆತಂಕ ಎದುರಾಗದಂತೆ ಕೌನ್ಸೆಲಿಂಗ್ ಮಾಡುವ ಜತೆಗೆ, ಮೆಡಿಕಲ್ ಕಿಟ್ ನೀಡಬೇಕು ಎಂದು ಸೂಚಿಸಿದರು.

ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ

ಗ್ರಾಮ ಮಟ್ಟದಲ್ಲಿ ಸಮಿತಿ ರಚಿಸಿ

ಗ್ರಾಮ ಮಟ್ಟದ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿರುವ ಸೋಂಕಿತರನ್ನು ಚೆನ್ನಾಗಿ ನೋಡಿಕೊಂಡರೆ ಸುಲಭವಾಗಿ ನಿಯಂತ್ರಣ ಸಾಧ್ಯ ಎಂಬುದನ್ನು ಮರೆಯಬಾರದು. ಮೆಡಿಕಲ್ ಕಾಲೇಜು ಹಾಗೂ ಇತರೆ ಅರೆ ವೈದ್ಯಕೀಯ ಕೋರ್ಸುಗಳ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಹೊರತಾದ ಕರ್ತವ್ಯಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ ಲಾಕ್ ಡೌನ್ ಮುಂದುವರಿಸುವುದು ಅನಿವಾರ್ಯವಾಗುತ್ತದೆ ಎಂದರು.

ಕಠಿಣ ಕ್ರಮ ಕೈಗೊಳ್ಳಬೇಕು

ಕಠಿಣ ಕ್ರಮ ಕೈಗೊಳ್ಳಬೇಕು

ಸರಕಾರದ ಸೂಚನೆಯಂತೆ ಟಾರ್ಗೆಟೆಡ್ ಟೆಸ್ಟಿಂಗ್ ಮಾಡಬೇಕು. ರೋಗ ಲಕ್ಷಣ ಇರುವ, ಐಎಲ್ಐ ಪ್ರಕರಣಗಳಲ್ಲಿ ಮಾತ್ರ ಟೆಸ್ಟ್ ಮಾಡುವ ಮೂಲಕ ಸೋಂಕು ಆರಂಭದ ಹಂತದಲ್ಲಿ ಇರುವಾಗಲೇ ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು ಎಂದು ಅಧಿಕಾರಿಗಳು ತಾಕೀತು ಮಾಡಿದ ಅವರು, ಸರಕಾರದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪದೇ ಪದೇ ಉಲ್ಲಂಘನೆ ಮಾಡುವವರನ್ನು ಹತ್ತಿಕ್ಕಲು ಪ್ರಕರಣ ದಾಖಲಿಸುವುದು, ಲೈಸೆನ್ಸ್ ರದ್ದಿನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಹೇಳಿದರು. ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಪೊಲೀಸ್ ಇಲಾಖೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಇದೇ ವೇಳೆ ಸೂಚನೆ ನೀಡಿದರು.

ಸಮನ್ವಯ ಅಗತ್ಯ

ಸಮನ್ವಯ ಅಗತ್ಯ

ಆಯುಷ್ ಕಾಲೇಜು ಮತ್ತು ಆರೋಗ್ಯ ಇಲಾಖೆ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇತರೆ ಇಲಾಖೆಗಳ ಜತೆ ಸಮನ್ವಯ ಇಟ್ಟುಕೊಂಡು ಕೆಲಸ ಮಾಡಬೇಕು. ಇದು ಯಾವುದೋ ಒಂದೆರಡು ಇಲಾಖೆಗಳಿಗೆ ಸೀಮಿತವಾದ ವಿಷಯವಲ್ಲ. ಜಿಲ್ಲಾಧಿಕಾರಿಯವರು ಈ ವಿಷಯದಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಗೊಂದಲಕ್ಕೆ ಅವಕಾಶ ಇಲ್ಲದಂತೆ ಕೆಲಸ ಮಾಡಬೇಕು ಎಂದರು. ಹಳ್ಳಿಗಳಲ್ಲಿ ಜನದಟ್ಟಣೆಯ ಸಭೆ, ಸಮಾರಂಭ ನಡೆಯುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ರಕ್ಷಣಾ ಇಲಾಖೆ ಜತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಾಗಿ ನಿರ್ಬಂಧಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಕ್ರಮ ಜರುಗಿಸಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ ಎಂದರು.

ಮಾಹಿತಿ ನೀಡಬೇಕು

ಮಾಹಿತಿ ನೀಡಬೇಕು

ಕೇಂದ್ರೀಕೃತ ಹಾಸಿಗೆ ಹಂಚಿಕೆ ಪದ್ಧತಿ ಅಳವಡಿಸಿಕೊಂಡು ಎಲ್ಲಾ ಮಾಹಿತಿ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಬೇಕು. ಹಾಗೆಯೇ, ಟೆಲಿಕಾಲ್ ವ್ಯವಸ್ಥೆ ಮೂಲಕ ಮನೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಕೌನ್ಸೆಲಿಂಗ್ ಜತೆಗೆ ಚಿಕಿತ್ಸೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

English summary
The government is embarrassed by the local mistakes. Health and medical education minister Dr K Sudhakar warned that such negligence would not be tolerated
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X