ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪರಿಂದ ಕೋಲಿ ಸಮುದಾಯ ಎಸ್ಟಿಗೆ ಸೇರ್ಪಡೆ ಭರವಸೆ

|
Google Oneindia Kannada News

ಚಿಂಚೋಳಿ, ಮೇ 16: ಚುನಾವಣೆ ನಂತರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿ ಕೋಲಿ ಸಮುದಾಯವನ್ನು ಎಸ್ ಟಿ ಸೇರಿಸುವ ಭರವಸೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಚಿಂಚೋಳಿಲ್ಲಿ ನಡೆದ ಕೋಲಿ ಸಮುದಾಯದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಲಿ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ನೀಡಲು ಹೋರಾಟ ನಡೆಸಿರುವ ಬಾಬುರಾವ್ ಚಿಂಚನಸೂರ್ ಅವರಿಗೆ ಸೂಕ್ತ ಸ್ಥಾನಮಾನ ಒದಗಿಸುವುದಾಗಿ ಹೇಳಿದರು.

'ಸಮ್ಮಿಶ್ರ ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸಲಿದೆ' : ಬಿಎಸ್ವೈ'ಸಮ್ಮಿಶ್ರ ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸಲಿದೆ' : ಬಿಎಸ್ವೈ

ಸ್ವಾತಂತ್ರ್ಯ ಬಂದ ನಂತರ ಈ ವರೆಗೂ ಅಧಿಕಾರ ನಡೆಸಿರುವ ಕಾಂಗ್ರೆಸ್ ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರ್ಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. 22 ಲೋಕಸಭಾ ಕ್ಷೇತ್ರವನ್ನು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮೇ 23 ರ ನಂತರ ರಾಜ್ಯ ರಾಜಕಾರಣದಲ್ಲಿ ಏರುಪೇರಾಗುತ್ತದೆ ಎಂದರು. ಕಾಂಗ್ರೆಸ್ ಜೆ ಡಿ ಎಸ್ ಕಚ್ಚಾಟದಿಂದ ಅಧಿಕಾರ ಬದಲಾಗುತ್ತದೆ. ಉಮೇಶ್ ಜಾಧವ್ ದೆಹಲಿಗೆ ಹೋಗುತ್ತಾರೆ ಎಂದು ಹೇಳಿದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾತನಾಡಿ

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾತನಾಡಿ

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮಾತನಾಡಿ, 50 ವರ್ಷ ಅಧಿಕಾರದಲ್ಲಿ ಇದ್ದರೂ ಖರ್ಗೆ ಕೋಲಿ ಸಮುದಾಯವನ್ನು ಎಸ್ ಟಿ ಗೆ ಸೇರಿಸಲಿಲ್ಲಾ. ನನ್ನ ಹೆಂಡತಿ ಆಪರೇಶನ್ ಇದ್ದರೂ ನಾನು ಕ್ಯಾಬಿನೆಟ್ ಸಭೆಗೆ ಹೋಗಿದ್ದೆ. ಅದು ಎಸ್ ಟಿ ಸಮುದಾಯ ನನಗೆ ಮುಖ್ಯವಾಗಿತ್ತು. ಕ್ಯಾಬಿನೆಟ್ ನಲ್ಲಿ ಅಪ್ರೂ ಮಾಡಿ ಕಳುಹಿಸಿದ್ದ ಫೈಲ್ ದೆಹಲಿಗೆ ಹೋಯಿತು. ಆದರೆ ಅದನ್ನು ಮುಂದಕ್ಕೆ ತಗೆದುಕೊಂಡು ಹೋಗುವ ಯಾವುದೇ ಕ್ರಮಕ್ಕೂ ಖರ್ಗೆ ಮುಂದಾಗಲಿಲ್ಲಾ. ನನಗೆ ಮಕ್ಕಳು ಇಲ್ಲ ಅವಿನಾಶ್ ನ್ನು ದತ್ತು ಪಡೆದಿದ್ದೇನೆ. ಅವಿನಾಶ್ ಗೆಲ್ಲಿಸಿ ಕಾಂಗ್ರೆಸ್ ಡೆಪಾಸಿಟ್ ಕಳಿಯಬೇಕು ಎಂದು ಹೇಳಿದರು.

ಉಮೇಶ್ ಜಾಧವ್ ಮಾತನಾಡಿ

ಉಮೇಶ್ ಜಾಧವ್ ಮಾತನಾಡಿ

ಉಮೇಶ್ ಜಾಧವ್ ಮಾತನಾಡಿ, ಕೋಲಿ ಸಮುದಾಯದ ಋಣವನ್ನು ಕಾಂಗ್ರೆಸ್ ತೀರಿಸಿಲ್ಲ. ಅಂಬಿಗರ ಚೌಡಯ್ಯ ನಿಗಮ ಮಾಡಿದ್ದು ಬಿಜೆಪಿ ಸರಕಾರ. ಆರ್ಥಿಕವಾಗಿ ಕೋಲಿ ಸಮುದಾಯ ಮುಂದೆ ಬರಲು ಎಸ್ ಟಿ ಗೆ ಸೇರ್ಪಡೆ ಆಗಬೇಕು. ಈ ಕೆಲಸ ಬಿಜೆಪಿ ಮಾಡೇ ಮಾಡಲಿದೆ. ಕಲಬುರ್ಗಿ ಎಂಪಿ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬೃಹತ್ ರೋಡ್ ಶೋ

ಬಿಜೆಪಿಯಿಂದ ಬೃಹತ್ ರೋಡ್ ಶೋ

ಚಿಂಚೋಳಿ ಉಪಚುನಾವಣೆ ಹಿನ್ನಲೆ ಯಲ್ಲಿ ಬಿಜೆಪಿಯಿಂದ ಬೃಹತ್ ರೋಡ್ ಶೋ ಆಯೋಜಿಸಲಾಗಿತ್ತು. ಚಿಂಚೋಳಿ ಪಟ್ಟಣದಲ್ಲಿ ಲಕ್ಷ್ಮಿ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ರೋಡ್ ಶೋ ನಡೆಯಿತು. ರೋಡ್ ಶೋ ಗೆ ಚಾಲನೆ ನೀಡಿ ಬಿ ಎಸ್ ಯಡಿಯೂರಪ್ಪ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು.

ಸಾಲಮನ್ನಾ ಹೆಸರಿನಲ್ಲಿ ಮೋಸ

ಸಾಲಮನ್ನಾ ಹೆಸರಿನಲ್ಲಿ ಮೋಸ

ಮತ್ತೆ ನಮ್ಮ ಸರ್ಕಾರ ಬಂದರೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಹಿಂದೆ ನಮ್ಮ ಸರ್ಕಾರ ರೈತರಿಗೆಂದೇ ಪ್ರತ್ಯೇಕ ಬಜೆಟ್ ಮಾಡಿತ್ತು. ಬಂಜಾರ ನಿಗಮವನ್ನು ಸ್ಥಾಪಿಸುವ ಮೂಲಕ ಈ ಸಮುದಾಯದ ಶ್ರೇಯೋಭಿವೃದ್ಧಿಗೆ ಕ್ರಮ ಕೈಗೊಂಡಿತ್ತು. ಆದರೆ, ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರ ಸಾಲ ಮನ್ನಾ ಹೆಸರಲ್ಲಿ ಈ ಸಮುದಾಯಕ್ಕೆ ಮೋಸ ಮಾಡುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದರು.

English summary
Former CM, BJP state president BS Yeddyurappa gave assurance that Koli community in Karnataka will get ST status and he will discuss the matter with Rajnath Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X