ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾಗೆ ದರ್ಶನ ಭಾಗ್ಯ ನೀಡದಿದ್ದ 'ಶಿವೈಕ್ಯ' ಮಾತೆ ಮಾಣಿಕೇಶ್ವರಿ

|
Google Oneindia Kannada News

ಯಾನಾಗುಂದಿಯ ಪವಾಡಗಳ ಮಾತಾಜಿ, ಭಕ್ತರ ಪಾಲಿನ ನಡೆದಾಡುವ ದೇವರು, ಮಾತೆ ಮಾಣಿಕೇಶ್ವರಿ ಶನಿವಾರ (ಮಾ 7) ಲಿಂಗೈಕ್ಯರಾಗಿದ್ದಾರೆ.

ಹಲವಾರು ಪವಾಡಗಳನ್ನು ಮಾಡುತ್ತಿದ್ದ ಮಾತೆ, ಏನು ಹೇಳಿದರು ಅದೇ ಆಗುವುದು ಎನ್ನುವ ನಂಬಿಕೆ ಇರುವುದರಿಂದ, ಮಾತೆಯ ದರ್ಶನ ಪಡೆಯಲು ಯಾವತ್ತೂ ಜನಸಾಗರವೇ ಇರುತ್ತಿತ್ತು.

ಮಾತೆ ಮಾಣಿಕೇಶ್ವರಿ ಲಿಂಗೈಕ್ಯ; ಅಂತಿಮ ದರ್ಶನಕ್ಕೆ ಜನ ಸಾಗರಮಾತೆ ಮಾಣಿಕೇಶ್ವರಿ ಲಿಂಗೈಕ್ಯ; ಅಂತಿಮ ದರ್ಶನಕ್ಕೆ ಜನ ಸಾಗರ

ಪ್ರತೀ ವರ್ಷ ಶಿವರಾತ್ರಿ ಮತ್ತು ಗುರುಪೂರ್ಣಿಮಾದ ದಿನದಂದು ಮಾತ್ರ ಮಾತೆ, ಗುಹೆಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡುತ್ತಿದ್ದರು.

ಮಾತೆ ಮಾಣಿಕೇಶ್ವರಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರುಮಾತೆ ಮಾಣಿಕೇಶ್ವರಿ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

ರಾಜಕಾರಣಿಗಳು, ಅಧಿಕಾರಿಗಳು ಇವರ ದರ್ಶನಕ್ಕೆ ಗಂಟೆಗಟ್ಟಲೆ ಕಾಯುತ್ತಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ವೇಳೆ ಅಮಿತ್ ಶಾ ಕೂಡಾ ಇವರ ದರ್ಶನ ಪಡೆಯಲು ಬಂದಿದ್ದರು.

ಮಾತೆ ಮಾಣಿಕೇಶ್ವರಿಗೆ ಗಾಳಿಯೇ ಆಹಾರವಾಗಿತ್ತು

ಮಾತೆ ಮಾಣಿಕೇಶ್ವರಿಗೆ ಗಾಳಿಯೇ ಆಹಾರವಾಗಿತ್ತು

ನಿರಾಹಾರಿಯಾಗಿದ್ದ ಮಾತೆ ಮಾಣಿಕೇಶ್ವರಿಗೆ ಗಾಳಿಯೇ ಆಹಾರವಾಗಿತ್ತು. ಎಲ್ಲೋ ಕೆಲವೊಮ್ಮೆ ಹಣ್ಣುಹಂಪಲು ಸೇವಿಸುತ್ತಿದ್ದ ಮಾತೆ, ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಶನಿವಾರ ಸಂಜೆ ಆಶ್ರಮಕ್ಕೆ ಆಗಮಿಸಿದ ಜಿಲ್ಲಾಸ್ಪತ್ರೆಯ ವೈದ್ಯರು ಮಾತೆಯ ಆರೋಗ್ಯ ಪರಿಶೀಲಿಸಿದ ನಂತರ, ಅವರು ಪ್ರಾಣ ತ್ಯಜಿಸಿದ ವಿಷಯವನ್ನು ಪ್ರಕಟಿಸಿದರು.

ರಾಹುಲ್ ಗಾಂಧಿ, ಅಮಿತ್ ಶಾ ಪ್ರವಾಸ

ರಾಹುಲ್ ಗಾಂಧಿ, ಅಮಿತ್ ಶಾ ಪ್ರವಾಸ

ಫೆಬ್ರವರಿ 2018, ಕರ್ನಾಟಕ ಅಸೆಂಬ್ಲಿ ಚುನಾವಣೆಯ ಸಮಯ. ರಾಹುಲ್ ಗಾಂಧಿ ಮುಂಬೈ ಕರ್ನಾಟಕದ ಭಾಗದಲ್ಲಿ ಪ್ರವಾಸದಲ್ಲಿದ್ದರು. ಅಮಿತ್ ಶಾ, ಹೈದಾರಾಬಾದ್ ಕರ್ನಾಟಕದಲ್ಲಿ ಪ್ರಚಾರಕ್ಕೆ ಆಗಮಿಸಿದ್ದರು. ಫೆಬ್ರವರಿ 23, 2018ರಂದು ಬಸವಣ್ಣನ ಕರ್ಮಭೂಮಿಗೆ ನಮನ ಸಲ್ಲಿಸಿ, ಶಾ ಪ್ರವಾಸವನ್ನು ಆರಂಭಿಸಿದ್ದರು.

ಅಮಿತ್ ಶಾ, ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಆಗಮಿಸಿದ್ದರು

ಅಮಿತ್ ಶಾ, ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಆಗಮಿಸಿದ್ದರು

ಪೂರ್ವ ನಿಗದಿತ ಕಾರ್ಯಕ್ರಮದ ಪ್ರಕಾರ ಅಮಿತ್ ಶಾ, ಮಾತೆ ಮಾಣಿಕೇಶ್ವರಿ ಅಮ್ಮನವರ ದರ್ಶನಕ್ಕೆ ಆಗಮಿಸಿದ್ದರು. ಸೇಡಂ ತಾಲೂಕಿನ ಯಾನಾಗುಂದಿ ಬೆಟ್ಟದ ಬಳಿ ಇರುವ ಮಾತೆ ಮಾಣಿಕೇಶ್ವರಿ ಅಮ್ಮನ ದರ್ಶನ ಸಿಗದೇ ವಾಪಸ್ ಆಗಿದ್ದರು. ಅರ್ಧಗಂಟೆ ಕಾದರೂ, ಮಾಣಿಕೇಶ್ವರಿ ಅಮ್ಮ ಗುಹೆಯಿಂದ ವಾಪಸ್ ಬಂದಿರಲಿಲ್ಲ.

ಅಮಿತ್ ಶಾ ಬರೀಗೈಯಲ್ಲಿ ವಾಪಸ್

ಅಮಿತ್ ಶಾ ಬರೀಗೈಯಲ್ಲಿ ವಾಪಸ್

ಅಮ್ಮನ ದರ್ಶನ ಭಾಗ್ಯ ಸಿಗದೆ ಅಮಿತ್ ಶಾ ಬರೀಗೈಯಲ್ಲಿ ವಾಪಸ್ ಆಗಿದ್ದರು. ಬೇರೆ ಕಾರ್ಯಕ್ರಮ ನಿಗದಿಯಾಗಿದ್ದರಿಂದ, ಅಮಿತ್ ಶಾ ಅಲ್ಲಿಂದ ತೆರಳಿದ್ದರು. ಅಮ್ಮನ ದರ್ಶನ ಸಿಗದೇ ಇದ್ದದ್ದು, ಬಿಜೆಪಿಗೆ ಮುಂದಾಗುವ ಹಿನ್ನಡೆ/ಅಪಶಕುನ ಎಂದೇ ಆ ವೇಳೆ ವ್ಯಾಖ್ಯಾನಿಸಲಾಗಿತ್ತು.

English summary
During Karnataka Assembly Election Campaign, Amit Shah Failed To Take Darshan Of Mate Manikeshwari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X