ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆ ಕುರಿತು ಹೊಸ ಆದೇಶ ಹೊರಡಿಸಿದ ಕಲಬುರಗಿ ಜಿಲ್ಲಾಡಳಿತ

|
Google Oneindia Kannada News

ಕಲಬುರಗಿ, ಜುಲೈ 8: ಕೊರೊನಾ ವೈರಸ್ ಹಿನ್ನೆಲೆ ಅದ್ಧೂರಿ ವಿವಾಹಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಆದರೆ, ಸರಳ ವಿವಾಹಕ್ಕೆ ಅವಕಾಶ ನೀಡಲಾಗಿತ್ತು. ಆದ್ರೀಗ, ಕಲಬುರಗಿ ಜಿಲ್ಲೆಯಲ್ಲಿ ಸರಳ ವಿವಾಹವೂ ಮಾಡುವಂತಿಲ್ಲ. ಈ ಕುರಿತು ಜಿಲ್ಲಾಡಳಿತ ಹೊಸದಾಗಿ ಆದೇಶ ಹೊರಡಿಸಿದೆ.

Recommended Video

UN ಸಭೆಯಲ್ಲಿ Pakistan ವಿರುದ್ಧ ಭಾರತ ವಾಗ್ದಾಳಿ | Oneindia Kannada

ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡವರಲ್ಲಿ ಸೋಂಕು ವರದಿಯಾಗಿರುವ ಪ್ರಕರಣಗಳು ದಾಖಲಾಗಿರುವ ಕಾರಣ ಕಲಬುರಗಿಯಲ್ಲಿ ಸಾರ್ವಜನಿಕವಾಗಿ ವಿವಾಹ ಮಾಡುವುದಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.

ಈ ಕುರಿತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದು, ಜಿಲ್ಲಾಡಳಿತ ಆದೇಶ ನೀಡಿದೆ. ಲಾಕ್‌ಡೌನ್‌ ವಿನಾಯತಿ ಬಳಿಕ ದೇವಸ್ಥಾನದಲ್ಲಿ, ಮನೆ ಮುಂದೆ ಹಾಗೂ ಸಮುದಾಯ ಭವನದಲ್ಲಿ ಮದುವೆ ಮಾಡಲಾಗುತ್ತಿದೆ. ಇನ್ಮುಂದೆ ಕಲಬುರಗಿಯಲ್ಲಿ ಇಂತಹ ಮದುವೆಗೆ ಅನುಮತಿ ಇಲ್ಲ.

ಸೋಂಕಿನ ಲಕ್ಷಣವಿದ್ದರೂ ಮದುವೆಗಾಗಿ ವಿಷಯ ಮುಚ್ಚಿಟ್ಟಿದ್ದೇ ತಪ್ಪಾಯ್ತುಸೋಂಕಿನ ಲಕ್ಷಣವಿದ್ದರೂ ಮದುವೆಗಾಗಿ ವಿಷಯ ಮುಚ್ಚಿಟ್ಟಿದ್ದೇ ತಪ್ಪಾಯ್ತು

ಮದುವೆ ಮಾಡುವವರು ಪರ್ಯಾಯವಾಗಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ಜರುಗಿಸಬಹುದು. ಅಲ್ಲಿ ಕೇವಲ ಐದು ಮಂದಿ ಮಾತ್ರ ಭಾಗವಹಿಸಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

Kalaburagi Dist Admin Restricted Marriages At Public Places In View Covid19

ಅಂದ್ಹಾಗೆ, ಇದು ಕೇವಲ ಕಲಬುರಗಿ ಜಿಲ್ಲೆಗೆ ಮಾತ್ರವಲ್ಲ ಬಾಗಲಕೋಟೆಗೂ ಅನ್ವಯಿಸಿದೆ ಎಂದು ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಿಂದೆ ಮದುವೆ ಸಮಾರಂಭದಲ್ಲಿ ಕೇವಲ 50 ಜನ ಮಾತ್ರ ಭಾಗವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ, ಅದಕ್ಕಿಂತ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳುವುದು ಹಲವು ಕಡೆ ವರದಿಯಾಗಿದೆ.

English summary
Kalaburagi dist admin restricted marriages at public places, convention halls at home, in view COVID19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X