ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ; 3 ಹೊಸ ಮಾರ್ಗದಲ್ಲಿ ವಿಮಾನ ಸಂಚಾರ

|
Google Oneindia Kannada News

ಕಲಬುರಗಿ, ನವೆಂಬರ್ 11; ಕಲಬುರಗಿ ವಿಮಾನ ನಿಲ್ದಾಣ ದೇಶದ ವಿವಿಧ ರಾಜ್ಯಗಳಿಗೆ ಸಂಪರ್ಕವನ್ನು ಕಲ್ಪಿಸುತ್ತಿದೆ. ಕೆಲವು ಹೊಸ ಮಾರ್ಗಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಸ್ತಾವನೆ ಸಿದ್ಧಗೊಳಿಸಿ ಸಲ್ಲಿಕೆ ಮಾಡಿದ್ದಾರೆ.

ಕೋವಿಡ್ ಪರಿಸ್ಥಿತಿ ಬಳಿಕ ವಿಮಾನ ಹಾರಾಟ ಪುನಃ ಆರಂಭವಾಗಿದೆ. ಕಲಬುರಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಕೆಲವು ಹೊಸ ಮಾರ್ಗದಲ್ಲಿಯೂ ಸಂಚಾರ ಆರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಪ್ರಸ್ತಾವನೆ ಕಳಿಸಲಾಗಿದೆ.

ಖಾಸಗೀಕರಣ ಮಂತ್ರ: ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಪಟ್ಟಿ ರೆಡಿಖಾಸಗೀಕರಣ ಮಂತ್ರ: ಹುಬ್ಬಳ್ಳಿ ಸೇರಿ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಪಟ್ಟಿ ರೆಡಿ

ಕಲಬುರಗಿ-ಮುಂಬೈ, ಕಲಬುರಗಿ-ಗೋವಾ ಮತ್ತು ಕಲಬುರಗಿ-ಅಹಮದಾಬಾದ್‌ ಮಾರ್ಗಕ್ಕೆ ಕಲಬುರಗಿ ವಿಮಾನ ನಿಲ್ದಾಣದಿಂದ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ನಿಲ್ದಾಣದ ಅಧಿಕಾರಿಗಳು ವಿಮಾನಯಾನ ಸಂಸ್ಥೆಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ, ವಿಮಾನ ಸೇವೆಯನ್ನು ಈ ಮಾರ್ಗದಲ್ಲಿ ಆರಂಭಿಸಬಹುದು ಎಂದು ಹೇಳಿದ್ದಾರೆ.

ಹುಬ್ಬಳ್ಳಿ; ಕಾರ್ಗೋ ಟರ್ಮಿನಲ್ ಉದ್ಘಾಟನೆ ಕೇಂದ್ರ ಸಚಿವರಿಗೆ ಪತ್ರ ಹುಬ್ಬಳ್ಳಿ; ಕಾರ್ಗೋ ಟರ್ಮಿನಲ್ ಉದ್ಘಾಟನೆ ಕೇಂದ್ರ ಸಚಿವರಿಗೆ ಪತ್ರ

 Demand For Flight In Three New Routes From Kalaburagi

ಕಲಬುರಗಿಯಿಂದ ಪ್ರಸ್ತುತ, ಬೆಂಗಳೂರು, ಹಿಂಡನ್ (ದೆಹಲಿ), ತಿರುಪತಿಗೆ ವಿಮಾನ ಸಂಚಾರ ನಡೆಸುತ್ತಿದೆ. ಕಲಬುರಗಿಯಿಂದ ತಿರುಪತಿಗೆ ಸಾಗುವ ವಿಮಾನ ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ಮುಂದೆ ಸಾಗುತ್ತದೆ.

ಕರ್ನಾಟಕ; ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಇಲ್ಲ ಕರ್ನಾಟಕ; ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ಇಲ್ಲ

ಈ ಹಿಂದೆ ಕಲಬುರಗಿ-ಮುಂಬೈ ನಡುವೆ ಪ್ರಾಯೋಗಿಕವಾಗಿ ವಿಮಾನ ಸಂಚಾರ ಆರಂಭಿಸಲಾಗಿತ್ತು. ಎರಡು ದಿನದ ಪ್ರಾಯೋಗಿಕ ಹಾರಾಟದ ಬಳಿಕ ವಾರದಲ್ಲಿ ಎಲ್ಲಾ ದಿನ ವಿಮಾನ ಸಂಚಾರ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್ ಪರಿಸ್ಥಿತಿ ಕಾರಣ ವಿಮಾನ ಹಾರಾಟ ಆರಂಭವಾಗಲಿಲ್ಲ.

ಈಗ ಕೋವಿಡ್ ಪರಿಸ್ಥಿತಿ ಬಳಿಕ ಪುನಃ ಕಲಬುರಗಿ-ಮುಂಬೈ ಮಾರ್ಗಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಟಾರ್ ಏರ್, ಅಲಯನ್ಸ್ ಏರ್ ವಿಮಾನಯಾನ ಸಂಸ್ಥೆಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

2 ವರ್ಷ ಕಳೆಯುತ್ತಿದೆ; ಕಲಬುರಗಿ ವಿಮಾನ ನಿಲ್ದಾಣ ಆರಂಭಗೊಂಡು ನವೆಂಬರ್ 23ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ವಿವಿಧ ನಗರಗಳಿಗೆ ವಿಮಾನ ಸೇವೆಯನ್ನು ನೀಡಲಾಗುತ್ತಿದೆ.

ಕಲಬುರಗಿ ವಿಮಾನ ನಿಲ್ದಾಣವು ಶ್ರೀನಿವಾಸ್ ಸರಡಗಿ ಗ್ರಾಮದ ಸಮೀಪವಿರುವ ರಾಜ್ಯ ಹೆದ್ದಾರಿಯ 15 ಕಿ. ಮೀ. ದೂರದಲ್ಲಿದೆ. ವಿಮಾನ ನಿಲ್ದಾಣದ ಒಟ್ಟು ವಿಸ್ತೀರ್ಣ 750 ಎಕರೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರಾಯೋಗಿಕ ಹಾರಾಟ ಆಗಸ್ಟ್ 26, 2018ರಂದುದ ಪೂರ್ಣಗೊಂಡಿತು. ಕರ್ನಾಟಕದ 2ನೇ ಅತಿದೊಡ್ಡ ರನ್‌ ವೇಯನ್ನು ವಿಮಾನ ನಿಲ್ದಾಣ ಹೊಂದಿದೆ.

2019ರ ನವೆಂಬರ್ 23ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣ ಉದ್ಘಾಟಿಸಿದ್ದರು. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ದಶಕಗಳ ಬೇಡಿಕೆಯನ್ನು ಈಡೇರಿಸಿದ್ದರು.

ಸುಮಾರು 230 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾಲು 175.57 ಕೋಟಿ ರೂ.ಗಳು. ಶಂಕು ಸ್ಥಾಪನೆ ಮಾಡಿದ 11 ವರ್ಷಗಳ ಬಳಿಕ ವಿಮಾನ ಸಂಚಾರ ಆರಂಭಗೊಂಡಿದೆ.

ಕಲಬುರಗಿ ಕರ್ನಾಟಕದ 7ನೇ ವಿಮಾನ ನಿಲ್ದಾಣವಾಗಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಬಳ್ಳಾರಿಯ ವಿಮಾನ ನಿಲ್ದಾಣಗಳಿವೆ. ಶಿವಮೊಗ್ಗದಲ್ಲಿ ವಿಮಾಣ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಹಾಸನದಲ್ಲಿ ಸಹ ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ರಾಜ್ಯದಲ್ಲಿ ಮಿಲಿಟರಿ ವಿಮಾನ ನಿಲ್ದಾಣಗಳು ಎಚ್‌ಎಎಲ್, ಬೀದರ್ ಮತ್ತು ಯಲಹಂಕದಲ್ಲಿವೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಆರಂಭಿಸಲಾಗಿದೆ. ವ್ಯಾಪಾರ, ಐಟಿ-ಬಿಟಿ ಸೇರಿದಂತೆ ಇತರ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ವಿಮಾನ ನಿಲ್ದಾಣ ಸಹಾಯಕವಾಗಿದೆ.

English summary
Demand for flight service from Kalaburagi to Ahmedabad, Mumbai and Goa. Flight service may start soon in new routes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X