ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿಎಸ್ಸಿ ಕರ್ಮಕಾಂಡದ ಆರೋಪಿಗಳ ಜೊತೆ ಡೀಲ್, ಪೊಲೀಸ್ ಪೇದೆಗಳು ಅಮಾನತು

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಮಾರ್ಚ್ 17: ಅಕ್ರಮ ಎಸಗಿದವರನ್ನು ಪತ್ತೆಹಚ್ಚಿ ಅವರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಪೊಲೀಸರ ಜವಾಬ್ದಾರಿ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದರೇ ಕಾಯೋರು ಯಾರು?

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇಂತಹದೊಂದು ಮಾತು ಇದೀಗ ಕಲಬುರಗಿ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಕಾರಣ ಕಲಬುರಗಿ ನಗರದ ಅಶೋಕ ನಗರ ಠಾಣೆಯ ಇಬ್ಬರು ಪೇದೆಗಳು ಕೆಪಿಎಸ್ಸಿ ಹಗರಣದ ಶಂಕಿತ ಆರೋಪಿಗಳಿಂದ ಹಣಕ್ಕೆ ಬೇಡಿಕೆ ಇಟ್ಟು ಅಮಾನತ್ತಾಗಿದ್ದಾರೆ.

ಅಶೋಕ ನಗರ ಠಾಣೆಯ ರೈಟರ್ ನೆಹರು ಸಿಂಗ್ ಮತ್ತು ಪೇದೆ ಮಲ್ಲಿಕಾರ್ಜುನ ಅಮಾನತ್ತಾದವರು. ಕಲಬುರಗಿ ಎಸ್ಪಿ ಎನ್. ಶಶಿಕುಮಾರ್ ಇಬ್ಬರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

 Deal with suspects of KPSC scam, 2 police suspended

ಘಟನೆಯ ವಿವರ

ಕಲಬುರಗಿ ಜಿಲ್ಲೆಯಲ್ಲಿ ಕೆಪಿಎಸ್ಸಿ ಕರ್ಮಕಾಂಡ ಕಳೆದ ತಿಂಗಳು ಹೊರಬಿದ್ದಿತ್ತು. ಪ್ರಶ್ನೆಪತ್ರಿಕೆ ನಾಪತ್ತೆ ಸೇರಿದಂತೆ ಅಭ್ಯರ್ಥಿಗಳಿಂದ ಹಣ ಪಡೆದು ಉತ್ತರ ಹೇಳೋ ದೊಡ್ಡ ಜಾಲವನ್ನು ಕಲಬುರಗಿ ನಗರದ ಅಶೋಕ ನಗರ ಠಾಣೆಯ ಪೊಲೀಸರು ಭೇದಿಸಿದ್ದರು. ಆಗ ಪೊಲೀಸರ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದ ಪೊಲೀಸರು ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ. ಯಾರೆಲ್ಲಾ ಅಕ್ರಮ ಮಾಡಿ ನೌಕರಿ ಪಡೆದಿದ್ದಾರೆ ಅನ್ನೋದನ್ನು ಪತ್ತೆ ಹಚ್ಚುತ್ತಿದ್ದರು.

 Deal with suspects of KPSC scam, 2 police suspended

ಆದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದ್ದ ಪೇದೆಗಳಾದ ನೆಹರು ಸಿಂಗ್ ಮತ್ತು ಮಲ್ಲಿಕಾರ್ಜುನ
ಕೆಪಿಎಸ್ಸಿ ಅಕ್ರಮದ ಶಂಕಿತ ಆರೋಪಿಗಳಿಂದ ಹಣ ವಸೂಲಿ ದಂಧೆಗೆ ಇಳಿದಿದ್ದಾರೆ. ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣ ಡಿಲ್ ನಡೆಸಿದ್ದರು.

ತನಿಖೆ ನೆಪದಲ್ಲಿ ಅನೇಕರ ಮನೆಗಳಿಗೆ ಹೋಗಿ, "ನಾವು ಹೇಳಿದಷ್ಟು ಹಣ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನು ಕೇಸ್ ನಲ್ಲಿ ಸಿಲುಕಿಸುತ್ತೇವೆ," ಅಂತ ಬೆದರಿಸಿದ್ದರಂತೆ. ಕೆಲವರಿಂದ ಹಣವನ್ನು ಕೂಡಾ ಪಡೆದಿದ್ದರಂತೆ. ಇದು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಗೊತ್ತಾಗಿದೆ. ಹೀಗಾಗಿ ಇಬ್ಬರು ಪೇದೆಗಳನ್ನು ಎಸ್ಪಿ ಎನ್. ಶಶಿಕುಮಾರ್ ಅಮಾನತು ಮಾಡಿದ್ದಾರೆ.

English summary
It is the responsibility of the police to locate and punish the victims. However, two policemen of Ashok Nagar police station have been suspended for demanding money from the suspects of the KPSC scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X