ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 25ರಿಂದ ಕಲಬುರಗಿ–ಮುಂಬೈ ಮಧ್ಯೆ ವಿಮಾನ ಸಂಚಾರ ಆರಂಭ

|
Google Oneindia Kannada News

ಕಲಬುರಗಿ, ಮಾರ್ಚ್ 18: ಏರ್ ಇಂಡಿಯಾದ ಅಂಗ ಸಂಸ್ಥೆ ಅಲಯನ್ಸ್ ಏರ್ ಇದೇ ಮಾರ್ಚ್ 25ರಿಂದ ಕಲಬುರಗಿ ಹಾಗೂ ಮುಂಬೈ ಮಧ್ಯೆ ವಾರದ ಎಲ್ಲ ದಿನವೂ ನೇರ ವಿಮಾನ ಹಾರಾಟ ಆರಂಭಿಸಲಿದೆ.

ಇದರಿಂದಾಗಿ ಕಲ್ಯಾಣ ಕರ್ನಾಟಕವನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈಯೊಂದಿಗೆ ಸಂಪರ್ಕಿಸಬೇಕೆನ್ನುವ ಈ ಭಾಗದ ಉದ್ಯಮಿಗಳ ಬೇಡಿಕೆ ಈಡೇರಿದಂತಾಗಿದೆ. ಇದೇ 18ರಿಂದ ಬುಕ್ಕಿಂಗ್ ಕೂಡಾ ಆರಂಭಗೊಳ್ಳಲಿದೆ.

ಬೆಂಗಳೂರಲ್ಲಿ ಈ ವಾರ ಮಳೆ ಬೀಳುತ್ತೆ, ಕಲಬುರಗಿಯಲ್ಲಿ ನೆತ್ತಿ ಸುಡುತ್ತೆ! ಬೆಂಗಳೂರಲ್ಲಿ ಈ ವಾರ ಮಳೆ ಬೀಳುತ್ತೆ, ಕಲಬುರಗಿಯಲ್ಲಿ ನೆತ್ತಿ ಸುಡುತ್ತೆ!

ಮಾ.25ರಿಂದ ನಿತ್ಯ ಬೆಳಿಗ್ಗೆ 7.20ಕ್ಕೆ ಮುಂಬೈನಿಂದ ಹೊರಡುವ 70 ಸೀಟುಗಳ ವಿಮಾನ (9I 665) ಬೆಳಿಗ್ಗೆ 9ಕ್ಕೆ ಕಲಬುರಗಿಗೆ ಬಂದಿಳಿಯಲಿದೆ.

Daily Flight Services Between Kalaburagi And Mumbai To Begin from March 25

ಬೆಳಿಗ್ಗೆ 9.25ಕ್ಕೆ ಕಲಬುರಗಿಯಿಂದ ಹೊರಡುವ ವಿಮಾನ (9I 666) ಬೆಳಿಗ್ಗೆ 10.55ಕ್ಕೆ ಮುಂಬೈ ತಲುಪಲಿದೆ.

ವಿಮಾನ ಬುಕ್ಕಿಂಗ್ ಹಾಗೂ ಇತರ ವಿವರಗಳಿಗಾಗಿ www.airindia.in ವೆಬ್‌ಸೈಟ್‌ ಸಂಪರ್ಕಿಸಬಹುದು ಎಂದು ಅಲಯನ್ಸ್ ಏರ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಉಪೇಂದ್ರ ಸಿಂಗ್ ತಿಳಿಸಿದ್ದಾರೆ.

ಮಾಸ್ಕ್ ಧರಿಸದ 4 ಪ್ರಯಾಣಿಕರನ್ನು 'ನೋ-ಫ್ಲೈ' ಪಟ್ಟಿಗೆ ಸೇರಿಸಿದ ಏರ್ ಇಂಡಿಯಾಮಾಸ್ಕ್ ಧರಿಸದ 4 ಪ್ರಯಾಣಿಕರನ್ನು 'ನೋ-ಫ್ಲೈ' ಪಟ್ಟಿಗೆ ಸೇರಿಸಿದ ಏರ್ ಇಂಡಿಯಾ

ಅಲಯನ್ಸ್ ಏರ್ ಈಗಾಗಲೇ ಕಲಬುರಗಿ ಹಾಗೂ ಕರ್ನಾಟಕ ರಾಜಧಾನಿ ಬೆಂಗಳೂರು ಮಧ್ಯೆ ವಿಮಾನಯಾನ ಸೇವೆ ಒದಗಿಸುತ್ತಿದೆ.

English summary
Alliance Air will begin direct Daily Flight Services Between Kalaburagi And Mumbai from March 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X