ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯ ವೃದ್ಧನ ಟ್ರಾವೆಲ್ ಹಿಸ್ಟರಿ ಬೆಚ್ಚಿಬೀಳಿಸುತ್ತೆ

|
Google Oneindia Kannada News

ಕಲಬುರಗಿ, ಮಾರ್ಚ್ 17: ದೇಶದಲ್ಲಿ ಕೊರೊನಾಗೆ ಬಲಿಯಾದ ಮೊದಲ ಪ್ರಕರಣ ಕಲಬುರಗಿಯಲ್ಲಿ ದಾಖಲಾಗಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದಾರೆ. ಮಾರ್ಚ್ 12ರಂದು ಕೊರೊನಾ ಸೋಂಕು ತಗುಲಿತ್ತು ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿತ್ತು. ಈಗ ವೃದ್ದನ ಅಧಿಕೃತ ಟ್ರಾವೆಲ್ ಹಿಸ್ಟರಿಯನ್ನು ಆರೋಗ್ಯ ಇಲಾಖೆ ಹೊರಹಾಕಿದ್ದು, ಮೃತ ಸಿದ್ದಿಕಿ ಓಡಾಡಿದ ಪ್ರದೇಶ, ಭೇಟಿಯಾದವರಿಗೆಲ್ಲರಿಗೂ ಭೀತಿ ಆವರಿಸಿದೆ.

Recommended Video

Kalaburagi marks one more corona case but Sriramulu urges not to worry

ಕಲಬುರಗಿ ನಗರದ ನಿವಾಸಿ 76 ವರ್ಷದ ಮಹ್ಮದ್ ಹುಸೇನ್ ಸಿದ್ದಿಕಿ ಸೌದಿ ಅರೇಬಿಯಾ ಪ್ರವಾಸ ಮುಗಿಸಿಕೊಂಡು ನಗರಕ್ಕೆ ವಾಪಸ್ ಬಂದಿದ್ದರು. ವಯೋಸಹಜದಿಂದ ಶ್ವಾಸಕೋಶದ ತೊಂದರೆ, ಕೆಮ್ಮು, ಜ್ವರದಿಂದ ಬಳಲುತ್ತಿದ್ದ ಅವರು ಕೊರೊನಾವೈರಸ್ ನಿಂದಲೇ ಮೃತಪಟ್ಟಿದ್ದು ಎಂದು ಸಾಬೀತಾಗಿದೆ. ಆದರೆ, ಈ ನಡುವೆ ಸಿದ್ದಿಕಿ ದಾಖಲಾಗಿದ್ದ ಆಸ್ಪತ್ರೆ, ಆಂಬ್ಯುಲೆನ್ಸ್ ಸಿಬ್ಬಂದಿ, ಶವ ಸಂಸ್ಕಾರದ ವೇಳೆ ಸೇರಿದ್ದ ಬಂಧು ಮಿತ್ರರ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಕಲಬುರಗಿ ; ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಿಗೆ ಸೋಂಕಿಲ್ಲಕಲಬುರಗಿ ; ಮೃತಪಟ್ಟ ವೃದ್ಧನ ಕುಟುಂಬ ಸದಸ್ಯರಿಗೆ ಸೋಂಕಿಲ್ಲ

ಈ ನಡುವೆ ಕೊರೊನಾ ವೈರಸ್ ನಿಂದ 76 ವರ್ಷದ ವೃದ್ಧನ ಕುಟುಂಬದ ಸದಸ್ಯರ ನಾಲ್ಕು ಜನರ ಪೈಕಿ ಮೂವರಿಗೆ ಸೋಂಕು ತಗುಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧನ ಜೊತೆ ನೇರ ಸಂಪರ್ಕದಲ್ಲಿದ್ದ ಕುಟುಂಬದ 4 ಜನ ಸದಸ್ಯರನ್ನು ನಗರದ ಇ.ಎಸ್.ಐ.ಸಿ ಮೆಡಿಕಲ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಕೊರೊನಾವೈರಸ್ ಪಾಸಿಟಿವ್ ಎಂದು ಬಂದಿರುವುದು ಆತಂಕ ಹೆಚ್ಚಿಸಿದೆ.

ಕೊರೊನಾವೈರಸ್ ಹರಡದಂತೆ ಎಲ್ಲೆಡೆ ಸ್ವಚ್ಛತೆ ಅಭಿಯಾನ

 ಸೌದಿಯಿಂದ ಹೈದರಾಬಾದಿಗೆ ಪ್ರಯಾಣ

ಸೌದಿಯಿಂದ ಹೈದರಾಬಾದಿಗೆ ಪ್ರಯಾಣ

ಫೆಬ್ರವರಿ 29 ರಂದು 12:30 ಕ್ಕೆ ಸೌದಿಯಿಂದ ಹೈದ್ರಾಬಾದ್ ಗೆ ಬಂದಿದ್ದ ವೃದ್ದ ಸಿದ್ದಿಕಿ, ಹೈದ್ರಾಬಾದ್ ನ ಪಟೆಂಚರು ಬಳಿ‌ ಚಹಾ ಕುಡಿದಿದ್ದ.

ಚಹಾ ಕುಡಿದ ಬಳಿಕ‌ ಕಾರ್ ಮೂಲಕ ಕಲಬುರಗಿಗೆ ಕಡೆಗೆ ಪಯಣ ಬೆಳೆಸಿದ್ದ.

ರಸ್ತೆಯ ಮುಖಾಂತರ ಕಲಬುರಗಿಗೆ ಕಡೆ ಆಗಮನ
ಮಾರ್ಗ ಮಧ್ಯದಲ್ಲಿ ಕಾರ್ ನಿಲ್ಲಿಸಿ ಊಟ ಮಾಡಿದ್ದ ವೃದ್ದ, ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಡಾಭಾದಲ್ಲಿ ಊಟ ಮಾಡಿದ್ದ

ಮಧ್ಯಾಹ್ನ 3:30 ರಿಂದ 4:30 ರ ವರೆಗೂ ನಾನ್ ವೇಜ್ ಊಟ ಮಾಡಿ ಮತ್ತೆ ಕಲಬುರಗಿಯತ್ತ ಪ್ರಯಾಣ, ಬಳಿಕ ಸಂಜೆ ಐದು ಗಂಟೆ ಮನೆ ತಲಪಿದ ವೃದ್ಧ ಫೆಬ್ರವರಿ 29 ರಿಂದ ಮಾರ್ಚ್ 6 ವರೆಗೆ ಕಲಬಬುರಗಿಯ ನಿವಾಸದಲ್ಲೆ ವಾಸವಿದ್ದ.

 ಮೊದಲಿಗೆ ಜ್ವರ ಕಾಣಿಸಿಕೊಂಡಿತ್ತು

ಮೊದಲಿಗೆ ಜ್ವರ ಕಾಣಿಸಿಕೊಂಡಿತ್ತು

ಮಾರ್ಚ್ 6 ರಂದು ಜ್ವರದಿಂದ ಬಳಲುತ್ತಿದ್ದ ವೃದ್ದನನ್ನು ತಪಾಸಣೆ ಮಾಡಲು ಫ್ಯಾಮಿಲಿ ಡಾಕ್ಟರ್ ಮನೆಗೆ ಬಂದಿದ್ದರು. ಮಾರ್ಚ್ 9 ರ ವರೆಗೆ ಮನೆಯಲ್ಲೆ ತಪಾಸಣೆ, ಚಿಕಿತ್ಸೆ ನೀಡಲಾಗಿತ್ತು. ಜ್ವರ, ಕೆಮ್ಮು, ನೆಗಡಿ ಕಮ್ಮಿಯಾಗದ ಹಿನ್ನಲೆ ಮಾರ್ಚ್ 9 ರಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಫ್ಯಾಮಿಲಿ ಡಾಕ್ಟರ್ ಸೂಚಿಸಿದ್ದರು. ಮಾರ್ಚ್ 9 ರಂದು ರಾತ್ರಿ 10 ಗಂಟೆಗೆ ವೃದ್ದನನ್ನು ಆಸ್ಪತ್ರೆಯಿಂದ ಡಿಸ್ ಚಾರ್ಜ್ ಮಾಡಿಸಿಕೊಂಡು ಕುಟುಂಬ ತೆರಳಿತ್ತು. ಕಲಬುರಗಿಯಿಂದ ನೇರವಾಗಿ ಹೈದ್ರಾಬಾದ್ ಗೆ ತೆರಳಿತ್ತು.

ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರಗಿ ವೈದ್ಯನಿಗೂ ಕೊರೊನಾ ಪಾಸಿಟಿವ್ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರಗಿ ವೈದ್ಯನಿಗೂ ಕೊರೊನಾ ಪಾಸಿಟಿವ್

 ಹೈದ್ರಾಬಾದ್ ನ ಕೇರ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ

ಹೈದ್ರಾಬಾದ್ ನ ಕೇರ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆ

ಮಾರ್ಚ್ ‌10 ರಂದು ಹೈದ್ರಾಬಾದ್ ನ ಕೇರ್ ಆಸ್ಪತ್ರೆಯಲ್ಲಿ‌ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ‌ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಪರಿಸ್ಥಿತಿ ತಿರ ಹದಗೆಟ್ಟ ಹಿನ್ನಲೆ ವಾಪಸ್ ಕಲಬುರಗಿಗೆ ಕರೆದುಕೊಂಡು ಬರಲು ನಿರ್ಧರಿಸಿದ ಕುಟುಂಬಸ್ಥರು. ಮಾರ್ಚ್ 10 ರಂದು ಸಂಜೆ ಹೈದ್ರಾಬಾದ್ ನ‌ ಕೇರ್ ಆಸ್ಪತ್ರೆಯಿಂದ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬಂದ ಕುಟುಂಬ, ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುವಾಗಲೆ ಸಾವನ್ನಪ್ಪಿದ ವೃದ್ದ. ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಕುಟುಂಬ, ಜಿಮ್ಸ್ ಆಸ್ಪತ್ರೆಯ ವೈದ್ಯರಿಂದ ವೃದ್ದ ಸಾವನ್ನಪ್ಪಿರೋದು ಅಧಿಕೃತ ಘೋಷಣೆ ಮಾಡಲಾಯಿತು.

 ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ

ಯಾವುದೇ ಮುನ್ನೆಚ್ಚರಿಕೆ ವಹಿಸಿಲ್ಲ

ಮಾರ್ಚ್ 11 ರಂದು ವೃದ್ದನ ಅಂತ್ಯಕ್ರಿಯೆ ನಡೆಸಲಾಯಿತು. ಅಂತ್ಯಕ್ರಿಯೆ ಸಂದರ್ಭದಲ್ಲಿ 70ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಮಾರ್ಚ್ 12 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತೆಲಂಗಾಣ ಸರ್ಕಾರಕ್ಕೆ ಕ್ರಾಸ್ ನೋಟಿಫಿಕೆಷನ್ ನೀಡಲಾಯಿತು.ವೃದ್ದನ ಜೊತೆ ಸಂಪರ್ಕ ಹೊಂದಿದ್ದ 71 ಜನರ ಮೇಲೆ ನಿಗಾ ವಹಿಸುವ ಅಗತ್ಯದ ಬಗ್ಗೆ ಒತ್ತು ನೀಡಲಾಯಿತು.ವೃದ್ದನ ಕುಟುಂಬ , ಏರಿಯಾ ಜನ ಸೇರಿ , ಅಂತ್ಯಕ್ರಿಯೆ ಯಲ್ಲಿ ಭಾಗಿಯಾದವರ ಮೇಲೆ ನಿಗಾ ಇಡಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?

 ಉತ್ತರ ಸಿಗದ ಪ್ರಶ್ನೆಗಳು

ಉತ್ತರ ಸಿಗದ ಪ್ರಶ್ನೆಗಳು

ವೃದ್ದ ಊಟ ಮಾಡಿದ್ದ ಧಾಬಾದ ಕೆಲಸಗಾರರ ಸಂಪರ್ಕವೆ ಮಾಡಲಿಲ್ಲವೇ? ಜಿಲ್ಲಾಡಳಿತ ಸದ್ಯಕ್ಕೆ ನೀಡಿರುವ ಮಾಹಿತಿಯಲ್ಲಿ ಧಾಭಾದ ಕೆಲಸ ಮಾಡಿರುವವರ ಬಗ್ಗೆ ತಪಾಸಣೆ ನಡೆಸಿರುವ ಯಾವುದೆ ಉಲ್ಲೇಖವಿಲ್ಲ. ಧಾಭಾದಲ್ಲಿ ವೃದ್ದನಿಗೆ ಊಟ ಸಪ್ಲೈ ಮಾಡಿದ ವೇಟರ್ , ಬಿಲ್‌ ಕೌಂಟರ್ ನಲ್ಲಿ ಬಿಲ್ ‌ಪಡೆದವರನ್ನು ಆರೋಗ್ಯ ಇಲಾಖೆ ಸಂಪರ್ಕಿಸಿಲ್ಲವೇಕೆ? ವೃದ್ಧನ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಗುರುತಿಸಿ ಪತ್ಯೇಕಿಸುವ ಕಾರ್ಯದ ಅಪ್ಡೇಟ್ ಇನ್ನೂ ಬಹಿರಂಗವಾಗಿಲ್ಲ.

English summary
Covid19 Kalaburagi death: Siddique Travel history is out, Siddique timeline of travel from Dubai to Karnataka, Hyderabad has made Health department to take intense measures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X