ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭ

|
Google Oneindia Kannada News

ಕಲಬುರಗಿ, ಮಾರ್ಚ್ 20: ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್ 21ರಿಂದ ಕೊರೊನಾ ಪರೀಕ್ಷೆ ಪ್ರಾಯೋಗಾಲಯ ಆರಂಭವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ಮಾರಣಾಂತಿಕ ಕಾಯಿಲೆಗೆ ವೃದ್ಧನೊಬ್ಬ ಬಲಿಯಾಗಿದ್ದಾನೆ.

ಜಿಲ್ಲಾಧಿಕಾರಿ ಶರತ್ ಬಿ. ಈ ಕುರಿತು ಮಾಹಿತಿ ನೀಡಿದ್ದಾರೆ. "ಕೋವಿಡ್ 19 ಪರೀಕ್ಷೆಗೆ ನವದೆಹಲಿಯಿಂದ ಈಗಾಗಲೇ ರೀಜೆಂಟ್ ಬಂದಿದ್ದು, ಮಾರ್ಚ್ 21ರಿಂದ ಪ್ರಯೋಗಾಲಯ ಕಾರ್ಯಾಚರಣೆ ಮಾಡಲಿದೆ" ಎಂದು ಹೇಳಿದರು.

ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ? ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?

"ಪ್ರಸ್ತುತ ಶಂಕಿತ ಕೊರೊನಾ ವೈರಸ್ ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗುತ್ತಿದ್ದು, ವರದಿ ಬರಲು 3-4 ದಿನಗಳು ತೆಗೆದುಕೊಳ್ಳುತ್ತಿದೆ. ಇಲ್ಲಿಗೆ ಕೋವಿಡ್-19 ಪತ್ತೆಗೆ ಪ್ರಯೋಗಾಲಯ ಸ್ಥಾಪಿಸಬೇಕೆಂಬ ಬೇಡಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸಿವೆ" ಎಂದರು.

ಕಲಬುರಗಿ; ಬೆಂಗಳೂರು, ಹೊರ ರಾಜ್ಯಕ್ಕೆ ಖಾಸಗಿ ಬಸ್ ಇಲ್ಲ ಕಲಬುರಗಿ; ಬೆಂಗಳೂರು, ಹೊರ ರಾಜ್ಯಕ್ಕೆ ಖಾಸಗಿ ಬಸ್ ಇಲ್ಲ

Coronavirus Test Lab To Open In Kalaburagi On March 21

ಕಲಬುರಗಿ ಜಿಲ್ಲೆಯಿಂದ ಇದೂವರೆಗೆ ಕೋವಿಡ್-19 ಪರೀಕ್ಷೆಗೆ ಮೃತ ವಯೋವೃದ್ಧ ವ್ಯಕ್ತಿ ಸೇರಿದಂತೆ ಒಟ್ಟಾರೆ 22 ಸ್ಯಾಂಪಲ್‌ಗಳನ್ನು ಕಳುಹಿಸಲಾಗಿತ್ತು. ಇದರಲ್ಲಿ 8 ನೆಗೆಟಿವ್ ಮತ್ತು 3 ಪಾಸಿಟಿವ್ ವರದಿಗಳು ಬಂದಿದೆ. 2 ಪ್ರಕರಣಗಳಲ್ಲಿ ತಾಂತ್ರಿಕ ಕಾರಣದಿಂದ ಪರೀಕ್ಷೆಯಾಗಿರುವುದಿಲ್ಲ. ಇನ್ನೂ 9 ಪ್ರಕರಣದಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರಬೇಕಿದೆ.

ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರಗಿ ವೈದ್ಯನಿಗೂ ಕೊರೊನಾ ಪಾಸಿಟಿವ್ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ಕಲಬುರಗಿ ವೈದ್ಯನಿಗೂ ಕೊರೊನಾ ಪಾಸಿಟಿವ್

ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಹೊಂದಿದ ವ್ಯಕ್ತಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ 98 ಜನ ಹಾಗೂ ಎರಡನೇ ಸಂಪರ್ಕ ಹೊಂದಿರುವ 333 ಜನರನ್ನು ಗುರುತಿಸಲಾಗಿದೆ. ಇದಲ್ಲದೆ ವಿದೇಶದಿಂದ ಆಗಮಿಸಿದ 250 ಜನರನ್ನು ಸಹ ಪತ್ತೆ ಹಚ್ಚಲಾಗಿದೆ. ಒಟ್ಟಾರೆ ಇದೂವರೆಗೆ 641 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ಎಲ್ಲರ ಮೇಲೆ ನಿಗಾ ವಹಿಸಲಾಗಿದೆ. 11 ಜನರಿಗೆ ಐಸೋಲೇಟೆಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಮಾರ್ಚ್ 19ರ ರಾತ್ರಿ 8 ಗಂಟೆಯಿಂದ ಮಾರ್ಚ್ 22ರ ರಾತ್ರಿ 8 ಗಂಟೆಯವರೆಗೆ ಮೂರು ದಿನಗಳ ಕಾಲ ಕಲಬುರಗಿ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

English summary
Sharat B. Deputy Commissioner of Kalaburagi district said that coronavirus test lab to open on district on March 21, 2020. One death reported in district due to coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X