ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿಯಿಂದ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ: ಆಸ್ಪತ್ರೆ ಮುಂಭಾಗವೇ ಹೆರಿಗೆ!

|
Google Oneindia Kannada News

ಕಲಬುರಗಿ, ಏಪ್ರಿಲ್ 22: ಕೋವಿಡ್-19 ಭೀತಿಯಿಂದ ಗರ್ಭಿಣಿ ಮಹಿಳೆಯನ್ನು ಅಡ್ಮಿಟ್ ಮಾಡಿಕೊಳ್ಳಲು ಸಿಬ್ಬಂದಿ ಹಿಂದೇಟು ಹಾಕಿದ ಪರಿಣಾಮ ಆಸ್ಪತ್ರೆಯ ಮುಂಭಾಗದಲ್ಲೇ ಹೆರಿಗೆಯಾದ ಘಟನೆ ಇಂದು ಕಲಬುರಗಿಯಲ್ಲಿ ನಡೆದಿದೆ.

Recommended Video

ಆಸ್ಪತ್ರೆ ಮುಂದೆಯ ರಸ್ತೆಯಲ್ಲಿಯೇ ಮಹಿಳೆಯ ಹೆರಿಗೆ, ಕಣ್ಣಿದ್ದು ಕುರುಡರಾದ ಸಿಬ್ಬಂದಿ | Kalburgi

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ಚೆನ್ನಮ್ಮ ಎಂಬುವರು ಹೆರಿಗೆ ನೋವಿನಿಂದ ಇಂದು ಬೆಳಗ್ಗೆ ಜಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಆದ್ರೆ, ಕೊರೊನಾ ವೈರಸ್ ಪ್ರಕರಣಗಳು ಕಲಬುರಗಿಯಲ್ಲಿ ಹೆಚ್ಚಾಗಿರುವ ಕಾರಣ, ಗರ್ಭಿಣಿ ಚೆನ್ನಮ್ಮ ಅವರನ್ನು ಅಡ್ಮಿಟ್ ಮಾಡಿಕೊಳ್ಳಲು ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ.

Coronavirus scare: Woman Delivers Baby Infront Of Hospital After Denial Of Admission

ಹೀಗಿರುವಾಗಲೇ, ಆಸ್ಪತ್ರೆ ಮುಂಭಾಗವೇ ಮಗುವಿಗೆ ಚೆನ್ನಮ್ಮ ಜನ್ಮ ನೀಡಿದ್ದಾರೆ. ಆಸ್ಪತ್ರೆಯ ಮುಂದೆಯೇ ಹೆರಿಗೆಯಾದರೂ, ಮಾನವೀಯತೆ ಮೆರೆಯದ ಸಿಬ್ಬಂದಿ ಚೆನ್ನಮ್ಮ ಅವರನ್ನು ದಾಖಲು ಮಾಡಿಕೊಳ್ಳಲಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡರು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ, ಜಿಮ್ಸ್ ಆಸ್ಪತ್ರೆಗೆ ಸಿಬ್ಬಂದಿ ದಾಖಲು ಮಾಡಿಕೊಂಡಿದ್ದಾರೆ.

ಹೆರಿಗೆ ಬಳಿಕ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

English summary
Coronavirus scare: Woman delivers baby infront of Hospital after denial of Admission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X