ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎಫೆಕ್ಟ್: ಇನ್ನೆರೆಡು ದಿನದಲ್ಲೇ ಕಲಬುರಗಿಯಲ್ಲಿ ಲ್ಯಾಬ್ ಆರಂಭ

|
Google Oneindia Kannada News

ಕಲಬುರಗಿ, ಮಾರ್ಚ್.16: ಭಾರತದಲ್ಲೇ ಮಾರಕ ಕೊರೊನಾ ವೈರಸ್ ನಿಂದ ಮೊದಲು ಪ್ರಾಣ ಬಿಟ್ಟಿದ್ದು ಕಲಬುರಗಿಯ 76 ವರ್ಷದ ವೃದ್ಧ. ಈ ಸಾವಿನ ಬೆನ್ನಲ್ಲೇ ಕಲಬುರಗಿಯಲ್ಲಿ ಅವರದ್ದೇ ಕುಟುಂಬದ ಮತ್ತೊೂಬ್ಬ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದೆ.

ಕಲಬುರಗಿಯಲ್ಲಿ ಡೆಡ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಜಿಲ್ಲೆಯ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತವು ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ನಡುವೆ ಇನ್ನೆರೆಡು ದಿನಗಳಲ್ಲೇ ಜಿಲ್ಲಾಕೇಂದ್ರದಲ್ಲಿ ಸ್ಪೆಷಲ್ ಲ್ಯಾಬ್ ಒಂದು ಕಾರ್ಯಾರಂಭ ಮಾಡಲಿದೆ.

ಕೊರೊನಾ; ಕಲಬುರಗಿಯಿಂದ ಪರೀಕ್ಷೆಗೆ 4 ಮಾದರಿ ರವಾನೆಕೊರೊನಾ; ಕಲಬುರಗಿಯಿಂದ ಪರೀಕ್ಷೆಗೆ 4 ಮಾದರಿ ರವಾನೆ

ಕಲಬುರಗಿಯಲ್ಲಿ ಮಾರ್ಚ್.18ರಿಂದ ವೈರಸ್ ರಿಸರ್ಚ್ ಆಂಡ್ ಡೈಯಾಗ್ನಾಸ್ಟಿಕ್ ಲ್ಯಾಬೋರೇಟರಿ (VRDL) ಕಾರ್ಯಾರಂಭ ಮಾಡಲಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬ್ ತೆರೆಯುವುದಾಗಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.

Coronavirus Effect: New VRD Lab Open At Kalburgi On March.18

ಸಂಸದ ಉಮೇಶ್ ಜಾಧವ್ ಟ್ವೀಟ್ ನಲ್ಲಿ ಇರುವುದೇನು?:

ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರ ಜೊತೆಗೆ ದೆಹಲಿಯಲ್ಲಿ ಇರುವ ಐಸಿಎಂಆರ್ ಗೆ ಭೇಟಿ ನೀಡಿದ್ದು ಅಲ್ಲಿ ನಡೆಯುವ ವೈದ್ಯಕೀಯ ಪ್ರಕ್ರಿಯೆ ಬಗ್ಗೆ ತಿಳಿದುಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ಅಂಥದೊಂದು ಲ್ಯಾಬ್ ಅಗತ್ಯವಿದ್ದು, ಕೊರೊನಾ ವೈರಸ್ ಭೀತಿ ಹುಟ್ಟಿಸಿರುವ ಕಲಬುರಗಿಯಲ್ಲಿಯೇ ವಿಆರ್ ಡಿಎಲ್ ಸ್ಥಾಪಿಸಲು ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೆರೆಡು ದಿನಗಳಲ್ಲೇ ಅಂದರೆ ಮಾರ್ಚ್.18ರಂದು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಲ್ಯಾಬೋರೇಟರ್ ಆರಂಭಿಸಲಾಗುತ್ತದೆ ಎಂದು ಸಂಸದ ಡಾ.ಉಮೇಶ್ ಜಾಧವ್ ಟ್ವೀಟ್ ಮಾಡಿದ್ದಾರೆ.

English summary
Coronavirus Effect: New VRD Lab Open At Kalburgi Within Two Days. Now More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X