ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ವಾಣಿಜ್ಯ ಸಂಚಾರ

|
Google Oneindia Kannada News

ಕಲಬುರಗಿ, ಅಕ್ಟೋಬರ್ 31 : ಕಲಬುರಗಿ ವಿಮಾನ ನಿಲ್ದಾಣದಲ್ಲಿ ಜಿ.ಎಂ.ಆರ್. ಕಂಪನಿಯವರು ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವ ಕುರಿತು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆಗಸ್ಟ್ 26ರಂದು ವಿಮಾನ ನಿಲ್ದಾಣ ಉದ್ಘಾಟನೆಗೊಂಡಿದೆ.

ಕಲಬುರಗಿ ವಿಮಾನ ನಿಲ್ದಾಣವನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಈಗಾಗಲೇ ವಿಶೇಷ ಸಂದರ್ಭಗಳಲ್ಲಿ ಚಾರ್ಟರ್ಡ್ ವಿಮಾನಗಳು ಬಂದಿಳಿಯುತ್ತಿವೆ.ಕಲಬುರಗಿಯಿಂದ ಬೆಂಗಳೂರು ಹಾಗೂ ಹೈದ್ರಾಬಾದ್‍ಗಳಿಗೆ ವಿಮಾನ ಹಾರಾಟ ಆರಂಭವಾಗಬೇಕಿದೆ.

ಚಿತ್ರಗಳು : ಕಲಬುರಗಿ ಜನರ ದಶಕಗಳ ಕನಸು ನನಸಾದ ಕ್ಷಣಚಿತ್ರಗಳು : ಕಲಬುರಗಿ ಜನರ ದಶಕಗಳ ಕನಸು ನನಸಾದ ಕ್ಷಣ

ಹೈದರಾಬಾದ್‌ನ ಜಿ.ಎಂ.ಆರ್. ಕಂಪನಿಯು ವಿಮಾನ ಹಾರಾಟ ಆರಂಭಿಸಲು ಆಸಕ್ತಿ ತೋರಿದೆ. ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಬೇಕಾಗಿರುವ ಒಪ್ಪಿಗೆ ಕುರಿತು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಯೊಂದಿಗೆ ಚರ್ಚೆ ನಡೆದಿದೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿಕಲಬುರಗಿ ವಿಮಾನ ನಿಲ್ದಾಣದಲ್ಲಿ ಪ್ರಾಯೋಗಿಕ ಹಾರಾಟ ಯಶಸ್ವಿ

ಆಗಸ್ಟ್ 26ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಮಾಡುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಲಘು ವಿಮಾನಗಳನ್ನು ಯಶಸ್ವಿಯಾಗಿ ನಿಲ್ದಾಣದಲ್ಲಿ ಇಳಿಸಲಾಯಿತು. ಈಗ ವಿಮಾನ ಸಂಚಾರಕ್ಕೆ ನಿಲ್ದಾಣ ಸಿದ್ಧವಾಗುತ್ತಿದೆ.

ಕಲಬುರಗಿ ಜನರ ವಿಮಾನ ಹಾರಾಟದ ಕನಸು ಶೀಘ್ರವೇ ನನಸುಕಲಬುರಗಿ ಜನರ ವಿಮಾನ ಹಾರಾಟದ ಕನಸು ಶೀಘ್ರವೇ ನನಸು

ಜಿ.ಎಂ.ಆರ್. ಕಂಪನಿ

ಜಿ.ಎಂ.ಆರ್. ಕಂಪನಿ

ಹೈದರಾಬಾದ್ ಮೂಲದ ಜಿ.ಎಂ.ಆರ್.ಕಂಪನಿಯ ಮುಖ್ಯಸ್ಥ ಹೇಮಂತ್ ಪಾಟೀಲ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಮಾನ ನಿಲ್ದಾಣದಲ್ಲಿ ರನ್‍ವೇ, ಮಾರ್ಕಿಂಗ್, ಲೈಟಿಂಗ್ ಕಾಮಗಾರಿಗಳು ಪೂರ್ಣಗೊಂಡಿದ್ದು, ಒಂದು ಕಚೇರಿ ಸೌಲಭ್ಯ ಕಲ್ಪಿಸಿದಲ್ಲಿ ಜಿ.ಎಂ.ಆರ್. ಕಂಪನಿಯಿಂದ ವಿಮಾನಗಳಿಗೆ ಇಂಧನ ಮರು ಭರ್ತಿ ಸೌಲಭ್ಯದೊಂದಿಗೆ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಅನುಮತಿ ನೀಡುವಂತೆ ಪತ್ರ

ಅನುಮತಿ ನೀಡುವಂತೆ ಪತ್ರ

ಜಿ.ಎಂ.ಆರ್. ಕಂಪನಿಯ ಎಪಿಎಫ್‍ಟಿ ಯಿಂದ ವಿಮಾನ ಹಾರಾಟ ತರಬೇತಿ ಪ್ರಾರಂಭಿಸಲು ಸರ್ಕಾರವು ಎನ್.ಓ.ಸಿ. ನೀಡಿದಲ್ಲಿ ವಿಮಾನ ಹಾರಾಟ ತರಬೇತಿಗೆ ಪರವಾನಿಗೆ ನೀಡುವಂತೆ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಎವಿಯೇಶನ್ ಅವರಿಗೆ ಪತ್ರ ಬರೆಯಲಾಗುವುದು. ಅವರಿಂದ ಪರವಾನಿಗೆ ದೊರೆತ ನಂತರ ವಿಮಾನ ಹಾರಾಟ ತರಬೇತಿ ಪ್ರಾರಂಭಿಸುವುದರ ಜೊತೆಗೆ ವಿಮಾನ ನಿರ್ವಹಣೆ ಸಹ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಅಗತ್ಯ ವ್ಯವಸ್ಥೆ ಬೇಕು

ಅಗತ್ಯ ವ್ಯವಸ್ಥೆ ಬೇಕು

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲುಗಡೆಗೆ ಹ್ಯಾಂಗರ್ ಅವಶ್ಯಕತೆಯಿದ್ದು, ಹ್ಯಾಂಗರ್ ನಿರ್ಮಿಸಿ ಕೊಟ್ಟಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಬೇರೆ ಪಟ್ಟಣಗಳಿಗೆ ವಿಮಾನ ಹಾರಾಟ ಆರಂಭಿಸಲಾಗುತ್ತದೆ. ಜಿ.ಎಂ.ಆರ್. ಕಂಪನಿಯು ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣ ನಿರ್ವಹಣೆ ಹಾಗೂ ವಿಮಾನಗಳ ಹಾರಾಟ ನಡೆಸುತ್ತಿದೆ. ಡಿಸೆಂಬರ್ 1ರಂದು ಕಲಬುರಗಿಯಲ್ಲಿ ವಿಮಾನಗಳ ವಾಣಿಜ್ಯ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

742 ಎಕರೆ ಪ್ರದೇಶ

742 ಎಕರೆ ಪ್ರದೇಶ

ಕಲಬುರಗಿ ವಿಮಾನ ನಿಲ್ದಾಣವನ್ನು 742 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಏರ್‌ಬಸ್ 320 ಸಹ ಲ್ಯಾಂಡ್ ಆಗುವಷ್ಟು ವ್ಯವಸ್ಥೆಯನ್ನು ಮಾಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಎವಿಕಾನ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ಫ್ಲೈಯಿಂಗ್ ಸ್ಕೂಲ್ ಆರಂಭಿಸುವ ಪ್ರಸ್ತಾವನೆಯೂ ಇದೆ.

ಉಡಾನ್ ಯೋಜನೆಗೆ ಸೇರಿಸಿ

ಉಡಾನ್ ಯೋಜನೆಗೆ ಸೇರಿಸಿ

ಕಲಬುರಗಿ ವಿಮಾನ ನಿಲ್ದಾಣದಿಂದ ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಇತರ ಭಾಗಕ್ಕೆ ಹಾರಾಟ ನಡೆಸಬಹುದಾಗಿದೆ. ಕಲಬುರಗಿ ವಿಮಾನ ನಿಲ್ದಾಣವನ್ನು ಉಡಾನ್ ಯೋಜನೆಗೆ ಸೇರಿಸಬೇಕು ಎಂದು ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಲಿದೆ.

English summary
Commercial operation from Kalaburagi airport will began soon. Trial landing of aircraft successful in airport on August 26, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X