ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆರೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ: ಎಚ್‌ಡಿಕೆ ಭರವಸೆ

|
Google Oneindia Kannada News

ಕಲಬುರಗಿ, ಜೂನ್ 27: ಕಳೆದ ಶನಿವಾರ ಮಳೆ ಸುರಿದ ಕಾರಣ ರದ್ದಾಗಿದ್ದ ಕಲಬುರಗಿ ಜಿಲ್ಲೆಯ ಹೆರೂರು ಗ್ರಾಮದಲ್ಲಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಮುಂದಿನ ತಿಂಗಳು ನಡೆಸುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.

ಕಲಬುರ್ಗಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

ಕಲಬುರ್ಗಿ ಜಿಲ್ಲೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ, ಕಲಬುರ್ಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ ಕಲಬುರ್ಗಿ ಜಿಲ್ಲೆಯ ಬರ ಪರಿಹಾರ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ಮಾರ್ಗದರ್ಶನ ನೀಡಿದರು.

ಶನಿವಾರದ ಜನತಾ ದರ್ಶನ, ಗ್ರಾಮ ವಾಸ್ತವ್ಯ ಮುಂದೂಡಿದ ಸಿಎಂ ಶನಿವಾರದ ಜನತಾ ದರ್ಶನ, ಗ್ರಾಮ ವಾಸ್ತವ್ಯ ಮುಂದೂಡಿದ ಸಿಎಂ

ಹೈದರಾಬಾದ್ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಯುವಕರ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ದೂರದೃಷ್ಟಿ ಹೊಂದಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.

ಬಸವಕಲ್ಯಾಣದಲ್ಲಿ ಮನೆ ಕುಸಿತದಿಂದ ಆರು ಮಂದಿ ಮೃತಪಟ್ಟಿರುವ ಕುಟುಂಬವನ್ನು ಭೇಟಿ ಮಾಡಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಬಳಿಕ ಕುಟುಂಬದ ಸದಸ್ಯರಿಗೆ ಪರಿಹಾರದ ಚೆಕ್ ನೀಡಿದರು.

ಮುಂದಿನ ತಿಂಗಳು ಗ್ರಾಮ ವಾಸ್ತವ್ಯ

ಮುಂದಿನ ತಿಂಗಳು ಗ್ರಾಮ ವಾಸ್ತವ್ಯ

ಕಲಬುರಗಿ ಜಿಲ್ಲೆಯ ಹೇರೂರ ಬಿ. ಗ್ರಾಮದಲ್ಲಿ ನಿಗದಿಯಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಮಳೆಯಿಂದಾಗಿ ಮುಂದೂಡಲ್ಪಟ್ಟಿತ್ತು. ಈ ಗ್ರಾಮ ವಾಸ್ತವ್ಯ ನಿಲ್ಲುವುದಿಲ್ಲ. ಈ ಗ್ರಾಮದಲ್ಲಿ ಸುಮಾರು 500 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದ್ದು, ಗ್ರಾಮದ ಅಭಿವೃದ್ಧಿಗೆ ಕ್ರಮ ಜರುಗಿಸಲಾಗಿದೆ ಎಂದರು.

ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿಯೇ ಅಡ್ಡಿ; ಎಚ್. ವಿಶ್ವನಾಥ್ಸಿಎಂ ಗ್ರಾಮವಾಸ್ತವ್ಯಕ್ಕೆ ಬಿಜೆಪಿಯೇ ಅಡ್ಡಿ; ಎಚ್. ವಿಶ್ವನಾಥ್

ಹೈ.ಕ. ಶಾಲೆಗಳ ಅಭಿವೃದ್ಧಿ

ಹೈ.ಕ. ಶಾಲೆಗಳ ಅಭಿವೃದ್ಧಿ

ಹೈದರಾಬಾದ್-ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಲ್ಲಿ ಅವಶ್ಯಕವಿರುವ ಶಾಲಾ ಕೊಠಡಿಗಳ ಮಾಹಿತಿಯನ್ನು ಪಡೆಯಲಾಗಿದೆ. ಮುಂದಿನ 8-10 ದಿನಗಳಲ್ಲಿ ಸಭೆ ಕರೆದು ಎಲ್ಲ ಶಾಲೆಗಳ ದುರಸ್ತಿ, ಹೆಚ್ಚುವರಿ ಕಟ್ಟಡ ಮತ್ತು ಶಿಕ್ಷಕರ ಕೊರತೆ ನೀಗಿಸುವಲ್ಲಿ ಸೂಕ್ತ ನಿರ್ದೇಶನ ನೀಡಲಾಗುವುದು. ಹೈ.ಕ. ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಸಿಗುವ ಹಾಗೆ ಕ್ರಮ ಕೈಗೊಳ್ಳಲಾಗುವುದು. ಈ ವರ್ಷ ಬೇರೆ ಜಿಲ್ಲೆಗಳಿಗೆ ಹೋಲಿಕೆಯಾಗುವ ಹಾಗೆ ಈ ಭಾಗದ ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸುವಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.

ಎಲ್ಲ ಹಳ್ಳಿಗಳಲ್ಲಿಯೂ ಸೌಲಭ್ಯ

ಎಲ್ಲ ಹಳ್ಳಿಗಳಲ್ಲಿಯೂ ಸೌಲಭ್ಯ

ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗಳಲ್ಲದೆ, ಎಲ್ಲ ಹಳ್ಳಿಗಳಲ್ಲಿಯೂ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಜರುಗಿಸಲಾಗುವುದು. ಗ್ರಾಮ ವಾಸ್ತವ್ಯದ ಮೂಲಕ ಮೈತ್ರಿ ಸರಕಾರವನ್ನು ಜನರ ಹತ್ತಿರಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಎರಡು ಗ್ರಾಮ ವಾಸ್ತವ್ಯಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.

ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ

24 ಲಕ್ಷ ರೂ ಪರಿಹಾರದ ಚೆಕ್

24 ಲಕ್ಷ ರೂ ಪರಿಹಾರದ ಚೆಕ್

ಬಸವಕಲ್ಯಾಣ ಪಟ್ಟಣಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಮನೆ ಕುಸಿತದಿಂದ ಮೃತಪಟ್ಟಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಬಸವ ಕಲ್ಯಾಣದ ಛಿಲ್ಲಾ ಗಲ್ಲಿಯಲ್ಲಿ ಮನೆ ಕುಸಿತದಿಂದಾಗಿ ಬುಧವಾರ ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದರು. ಅವರ ಕುಟುಂಬದ ಮುಖ್ಯಸ್ಥರಾದ ಇಸೂಫ್ ಬಕರೆ ವಾಲೆ ಅವರಿಗೆ ಮುಖ್ಯಮಂತ್ರಿ 24 ಲಕ್ಷ ರೂ.ಗಳ ಚೆಕ್ಕು ವಿತರಿಸಿದರು.

English summary
Chief Minister HD Kumaraswamy on Thursday held a meeting with Kalburgi district officers. He clarified Grama vastavya program in Herur B village will be held in next month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X