ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ಗೆ ಮುಸ್ಲಿಂರ ಮೇಲೆ ಮಾತ್ರ ಪ್ರೀತಿ: ಅಮಿತ್ ಶಾ

By Manjunatha
|
Google Oneindia Kannada News

ಕಲಬುರಗಿ, ಫೆಬ್ರವರಿ 26: ರಾಜ್ಯದಲ್ಲಿ ಪರಿವರ್ತನೆ ಆಗಬೇಕೆಂದರೆ ಅದು ಹಿಂದುಳಿದ ವರ್ಗದ ಜನರಿಂದಲೇ ಸಾಧ್ಯ, ರಾಜ್ಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಒಬಿಸಿ ವರ್ಗ ಈ ಬಾರಿ ಕಾಂಗ್ರೆಸ್‌ ಅನ್ನು ಕಿತ್ತೊಗೆಯಿರಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಬ್ಬರಿಸಿದರು.

ಕಲಬುರಗಿಯಲ್ಲಿ ಆಯೋಜಿಸಿದ್ದ ಒಬಿಸಿ ವರ್ಗಗಗಳ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ ಅವರು ಕಾಂಗ್ರೆಸ್ ಸರ್ಕಾರಕ್ಕೆ ಸದಾ ಮುಸ್ಲಿಮರದ್ದೇ ಚಿಂತೆ ಅವರನ್ನು ಬಿಟ್ಟರೆ ಇನ್ನಾವ ಹಿಂದುಳಿದವರ ಬಗ್ಗೆಯೂ ಅವರಿಗೆ ಕಾಳಜಿ ಇಲ್ಲ ಎಂದು ಆಪಾದಿಸಿದರು.

ಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆಬಿಜೆಪಿಯ ಎ ಪ್ಲಾನ್, ಬಿ ಪ್ಲಾನ್ ಕುರಿತು ಇಂಟರೆಸ್ಟಿಂಗ್ ಚರ್ಚೆ

ಒಬಿಸಿ ಸಮುದಾಯಕ್ಕಾಗಿ ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಅಮಿತ್ ಶಾ ಅವರು, ಸದಾ 'ಅಹಿಂದ' ಜಪ ಮಾಡುವ ಸಿದ್ದರಾಮಯ್ಯ ಕೇವಲ ಆ ಸಮುದಾಯವನ್ನು ಮತಗಳಿಕೆಗಷ್ಟೆ ಬಳಸಿಕೊಳ್ಳುತ್ತಿದ್ದಾರೆ ಆದರೆ ಅವರ ಉದ್ಧಾರಕ್ಕೆ ಏನನ್ನೂ ಮಾಡಿಲ್ಲ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರದ ಪ್ರವಾಸ ವೇಳಾಪಟ್ಟಿಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೋಮವಾರದ ಪ್ರವಾಸ ವೇಳಾಪಟ್ಟಿ

ಮಗನನ್ನು ಬೆಳೆಸಿದರಷ್ಟೆ

ಮಗನನ್ನು ಬೆಳೆಸಿದರಷ್ಟೆ

ಹೈ-ಕರ್ನಾಟಕ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದ ಅವರು, ಇದೇ ಭಾಗದಿಂದಾಯ್ಕೆಯಾಗುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಕ್ಷೇತ್ರದಲ್ಲಿ ಒಂದು ಬಸ್ ನಿಲ್ದಾಣ ಸಹ ನಿರ್ಮಿಸಲು ಸಾಧ್ಯವಾಗಿಲ್ಲ, ಆ ಕೆಲಸವನ್ನು ಯಡಿಯೂರಪ್ಪ ಅವರೇ ಮಾಡಬೇಕಾಯಿತು ಎಂದ ಅವರು ಖರ್ಗೆ ಅವರು ಮಗನ ಅಭಿವೃದ್ಧಿ ಕಡೆ ಮಾತ್ರ ಗಮವಹಿಸಿದರು ಕ್ಷೇತ್ರದ ಕಡೆ ತಿರುಗಿ ಸಹ ನೋಡಲಿಲ್ಲ ಎಂದರು.

ಕೇಂದ್ರದ ಯೋಜನೆ ನಿಮ್ಮನ್ನು ತಲುಪುವುದಿಲ್ಲ

ಕೇಂದ್ರದ ಯೋಜನೆ ನಿಮ್ಮನ್ನು ತಲುಪುವುದಿಲ್ಲ

ಮೋದಿಯನ್ನು ವಿದ್ಯುತ್ ಫ್ಯಾಕ್ಟರಿಗೆ ಹೋಲಿಸಿದ ಅಮಿತ್ ಶಾ ಅವರು ಸಿದ್ದರಾಮಯ್ಯ ಅವರನ್ನು ಸುಟ್ಟುಹೋದ ವಿದ್ಯುತ್ ಪರಿವರ್ತಕಕ್ಕೆ ಹೋಲಿಸಿದರು. ಮೋದಿಯಿಂದ ಬರುವ ಅಭಿವೃದ್ಧಿ ಯೋಜನೆಗಳೆಂಬ ವಿದ್ಯುತ್‌ ಅನ್ನು ರಾಜ್ಯಕ್ಕೆ ಹಂಚಬೇಕಾದ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದೆ ಹಾಗಾಗಿ ಅದನ್ನು ಕಿತ್ತು ಬಿಸಾಡಿ ಬಿಜೆಪಿಗೆ ಮತ ನೀಡಿ ರಾಜ್ಯದ ಅಭಿವೃದ್ಧಿ ಹೇಗೆ ಆಗುತ್ತದೆ ನೋಡಿ ಎಂದು ಹೇಳಿದರು.

ಹಿಂದುಳಿದವರ ಅಭಿವೃದ್ಧಿ ಅವರಿಗೆ ಬೇಕಿಲ್ಲ

ಹಿಂದುಳಿದವರ ಅಭಿವೃದ್ಧಿ ಅವರಿಗೆ ಬೇಕಿಲ್ಲ

ಕಾಂಗ್ರೆಸ್‌ ದಲಿತರ, ಹಿಂದುಳಿದವರ ಅಭಿವೃದ್ಧಿಯ ಮಾತನಾಡುತ್ತದೆ ಆದರೆ ಅದಕ್ಕೆ ಅದು ಬೇಕಿಲ್ಲ, ಬಿಜೆಪಿ ಓಬಿಸಿ ವರ್ಗದವರ ಕಲ್ಯಾಣಕ್ಕಾಗಿ ತಂದ ಮಸೂದೆಯನ್ನು ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿರೋಧಿಸಿತು ಹೀಗಾಗಿ ಅದಿನ್ನೂ ಕಡತದಲ್ಲಿಯೇ ಇದೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಬೇಕಿದ್ದರೆ ಅವರೇಕೆ ಮಸೂದೆಯನ್ನು ವಿರೋಧಿಸುತ್ತಿದ್ದರು? ಎಂದು ಅಮಿತ್ ಶಾ ಪ್ರಶ್ನೆ ಮಾಡಿದರು.

ರಾಜ್ಯದಲ್ಲಿ ಹೆಚ್ಚಿನ ಜನ ಇರುವುದು ನೀವೇ

ರಾಜ್ಯದಲ್ಲಿ ಹೆಚ್ಚಿನ ಜನ ಇರುವುದು ನೀವೇ

ಕರ್ನಾಟಕದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಇರುವುದು ಓಬಿಸಿ ಸಮುದಾಯದ್ದು ಎಂದ ಅಮಿತ್ ಶಾ ಅವರು ರಾಜ್ಯದಲ್ಲಿ ಪರಿವರ್ತನೆ ಆಗಬೇಕೆಂದರೆ ಅದು ನಿಮ್ಮಿಂದಲೇ ಆಗಬೇಕು. ಹಾಗಾಗಿ ಸಮುದಾಯದ ಅಭಿವೃದ್ಧಿಗೆ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಓಬಿಸಿ ಸಮುದಾಯ ಪರಿವರ್ತನೆಯ ಜವಾಬ್ದಾರಿ ಹೊರಬೇಕಿದೆ ಎಂದು ಅವರು ಕರೆ ನೀಡಿದರು.

English summary
BJP national president Amit Shah said 'congress is anti backward community, they please them only for vote so clear the corrupt congress government of Karnataka and vote for BJP'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X