ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ತಾಪುರದಲ್ಲಿ ಚುನಾವಣಾ ಪೂರ್ವ ಬಿಜೆಪಿ ರಣ ಕಹಳೆಯೇ?

|
Google Oneindia Kannada News

ಕಲಬುರಗಿ ಡಿಸೆಂಬರ್ ೧೧ : ಚಿತ್ತಾಪುರದಲ್ಲಿ ಸೋಮವಾರ ಬಿಜೆಪಿ ಪರಿವರ್ತನಾ ಯಾತ್ರೆ ನಡೆಯಿತು. ಕ್ಷೇತ್ರದ ಜನತೆ ಈ ಪರಿವರ್ತನಾ ಯತ್ರೆಯು 2018ರ ಚುನಾವಣೆ ರಣ ಕಹಳೆ ಎಂದೇ ಭಾವಿಸಿದ್ದಾರೆ. ಹೇಗಾದರೂ ಮಾಡಿ 159 ಸ್ಥಾನಗಳನ್ನು ಪಡೆಯಲೇ ಬೇಕು ಎಂಬ ಛಲದೊಂದಿಗೆ ರಾಜ್ಯಾದಾದ್ಯಂತ ಭರ್ಜರಿ ಯಾತ್ರೆ ಮೂಲಕ ಪಕ್ಷವು ಸಂಘಟನೆಯಲ್ಲಿ ತೊಡಗಿದೆ.

ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಗೆ ಯುವ ಪಡೆಯನ್ನು ತಯಾರು ಮಾಡಿದ್ದು ಮಂಡಲ ಅದ್ಯಕ್ಷ ಮಲ್ಲಿಕರ್ಜುನ ಎಮ್ಮೆನೋರ ವಿವಿಧ ಮೋರ್ಚಾ ಅದ್ಯಕ್ಷರು ಮತ್ತು ಪದಾಧಿಕಾರಿಗಳು ಪಕ್ಷವು ವಹಿಸಿದ ಜವಾಬ್ದಾರಿಯನ್ನು ಸದುಪಯೋಗಪಡಿಸಿಕೊಂಡು ಸಂಘಟನೆಗೆ ಒತ್ತು ನೀಡಿದ್ದಾರೆ. ಹೆಂಗಾದರೂ ಮಾಡಿ ಕಳೆದುಕೊಂಡ ವಿಧಾನ ಸಭಾ ಕ್ಷೇತ್ರವನ್ನು ಮರಳಿ ಪಡೆಯಲು ತೀವ್ರ ಕಠಿಣ ಶ್ರಮ ಇಲ್ಲಿನ ನಾಯಕರು ಮಾಡುತ್ತೀದ್ದಾರೆ.

Chittapur gets ready to Parivarthan Yatra

ಚಿತ್ತಾಪೂರ ವಿಧಾನಸಭಾ ಕ್ಷೇತ್ರ ಮೀಸಲು ಕ್ಷೇತ್ರವಾಗಿದ್ದರಿಂದ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೆ ಬಹಿರಂಗವಾಗಿ ಯಾವ ನಾಯಕರು ತೊರ್ಪಡಿಸಿತ್ತಿಲ್ಲ. ಎಲ್ಲವೂ ಪಕ್ಷದ ಹೈಕಮಾಂಡ್ ಗೆ ಬಿಟ್ಟಿದ್ದು ಅಂತು ಹೇಳುತ್ತಿದ್ದಾರೆ. ನಮಗೆ ಪಕ್ಷವು ಜವಾಬ್ದಾರಿ ಕೊಟ್ಟಿದೆ ಎಲ್ಲರೂ ಕೂಡಿ ಪಕ್ಷ ಸಂಘಟನೆ ಮಾಡಿ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದೇವೆ ಎಂದು ನಾಯಕರು ಹೇಳುತ್ತಾರೆ.

ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ ಮಾಜಿ ಶಾಸಕ ವಾಲ್ಮೀಕಿ ನಾಯಕ ತಾವು ಚುನಾವಣೆಯಲ್ಲಿ ಗೆದ್ದು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು ಕಳೆದ ಚುನಾವಣೆಯಲ್ಲಿ ಸೊತ್ತಿದ್ದು ತಮ್ಮಗೆ ಇನ್ನೊಂದು ಅವಕಾಶ ಕಲ್ಪಿಸಿ ಎಂದು ಕೇಳುತ್ತೀದ್ದಾರೆ. ಬಿಜೆಪಿ ಯುವ ಮುಖಂಡ ಅರವಿಂದ ಚವ್ಹಾಣ ಅವರು ಜಿಲ್ಲಾ ಪಂಚಾಯತಿ ಚುನಾವಣೆಯಲ್ಲಿ ಗೆದ್ದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಕ್ಷೇತ್ರದಲ್ಲಿ ಪ್ರಭಲ ಆಕಾಂಕ್ಷಿ ಆಗಿದ್ದಾರೆ.
ಅಭಿವೃದ್ಧಿಯ ಕನಸ್ಸು ಹೊತ್ತಿರುವ ತಮ್ಮಗೆ ಪಕ್ಷವು ಟಿಕೆಟ್ ನೀಡಿದಲ್ಲಿ ಯುವಕರಿಗೆ ಆದ್ಯತೆ ಮತ್ತು ಅಭಿವೃದ್ಧಿ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಈಗಿನಿಂದಲೇ ಕ್ಷೇತ್ರದಲ್ಲಿ ಸಂಘಟನೆಗೆ ಆಧ್ಯತೆ ನೀಡಿ ಸಂಚಾರ ಕೈಗೊಂಡಿದ್ದಾರೆ. ಆದರೆ ಪಕ್ಷವು ಯಾರಿಗೆ ಬಿಜೆಪಿ ಚಿತ್ತಾಪುರ ಮತಕ್ಷೇತ್ರದ ಟಿಕೇಟ್ ಈಗ ಕಾಯಬೇಕು ಅಷ್ಟೆ.

ಆಕಾಂಕ್ಷಿಗಳ ಪಟ್ಟಿ: ಮಾಜಿ ಸಚಿವ ಬಾಬುರಾವ ಚೌವ್ಹಾಣ, ವಾಲ್ಮೀಕಿ ನಾಯಕ,ಮಲ್ಲಿಕಾರ್ಜುನ ಎಮ್ಮೆನೋರ, ಶಂಕರ್ ಚೌವ್ಹಾಣ, ಗೋಪಾಲ ರಾಠೋಡ, ಹಾಗೂ ಟಿಕೇಟ್ ಮೇಲೆ ಕಣ್ಣಿಟ್ಟು ಪಕ್ಷದ ಸೇರ್ಪಡೆಗೊಂಡಿರುವ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಬಸವರಾಜ ಬೆಣ್ಣೂರ, ಹಲವು ಮುಖಂಡರುನ ತೆರೆಮರೆಯಲ್ಲಿ ಪಕ್ಷದ ಟಿಕೇಟ್ ಗಾಗಿ ಕಸರತ್ತು ನಡೆಸಿದ್ದಾರೆ. ಮುಂದಿನ ದಿನದಲ್ಲಿ ಚಿತ್ತಾಪುರ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಕಾದು ನೋಡಬೇಕು.

English summary
Chittapur constituency geared up to welcome the Parivarthan Yatra led by state president BS Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X