ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೇವರ್ಗಿ ವಿಧಾನ ಸಭಾ ಕ್ಷೇತ್ರ ಮತ್ತೆ ಬಿಜೆಪಿಗೆ ಸಿಗಬಹುದೇ?

|
Google Oneindia Kannada News

ಕಲಬುರಗಿ : ಜಿಲ್ಲೆಯ ಜೇವರ್ಗಿ ವಿಧಾನ ಸಭಾ ಕ್ಷೇತ್ರ ಭಾರಿ ಕುತೂಹಲ ಮೂಡಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ರವರ ಸತತ ಗೆಲುವಿನ ಕ್ಷೇತ್ರವಾದ್ದರಿಂದ ಭಾರಿ ಚರ್ಚೆ ಆಗುವ ಕ್ಷೇತ್ರವಾಗಿದೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜಯ್ ಸಿಂಗ್ 36, 700 ಮತಗಳ ಪಡೆದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟಿಲ್ ನರಿಬೋಳ ಅವರನ್ನು ಸೋಲಿಸಿದ್ದರು.

ಇದಕ್ಕಿಂತ ಮೊದಲು ದೊಡ್ಡಪ್ಪಗೌಡ ಮಾಜಿ ಮುಖ್ಯಮಂತ್ರಿಯಾದ ಧರ್ಮಸಿಂಗ್ ಅವರನ್ನು 51 ಮತಗಳಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಡೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು 30,338 ಮತಗಳು ಪಡೆದರು ಅದೆ ರೀತಿ ಜೆಡಿಎಸ್ ನ ಕೇದಾರಲಿಂಗಯ್ಯ ಹಿರೇಮಠ ಅವರು 24,920 ಮತಗಳು ಪಡೆದರು.

ಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಕಲಬುರಗಿ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆ

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮತ್ತು ಕೆಜೆಪಿ ಎಂಬ ಎರಡು ಪಕ್ಷಗಳು ಉದ್ಬವಿಸಿದ್ದವು ಆದರೆ ಅದೆ ಕೆಜೆಪಿಯ ಸಂಸ್ಥಾಪಕ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು ಬಿಜೆಪಿಗೆ ಬಂದಿದ್ದು ರಾಜ್ಯದಲ್ಲಿ ಹಾಗೂ ತಾಲ್ಲೂಕಿನಲ್ಲಿ ಬಾರಿ ಕುತೂಹಲ ಮೂಡಿಸಿದೆ.

ಇವರ ಜತೆಗೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪರ ಯೋಜನಗಳು ಹಾಗೂ ರಾಜ್ಯ ಸರಕಾರದ ವೈಫಲ್ಯ ಕುರಿತು ಜನರಲ್ಲಿ ಅರಿವು ಮೂಡಿಸುತ್ತಾ ರಾಜ್ಯಾದ್ಯಂತ ಮಾಜಿ ಮುಖ್ಯಮಂತ್ರಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂದು ಪರಿವರ್ತನಾ ಯಾತ್ರೆ ಆರಂಭಿಸಿದ್ದಾರೆ.

ಕಲಬುರಗಿ: ಬಗೆಹರಿಯುತ್ತಾ ವಲ್ಲ್ಯಾಪುರೆ,ಯಾಕಾಪುರ್ ಟಿಕೇಟ್ ಫೈಟ್ ?ಕಲಬುರಗಿ: ಬಗೆಹರಿಯುತ್ತಾ ವಲ್ಲ್ಯಾಪುರೆ,ಯಾಕಾಪುರ್ ಟಿಕೇಟ್ ಫೈಟ್ ?

ಈ ಪರಿವರ್ತನಾ ಯಾತ್ರೆಯಿಂದ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇತಿಹಾಸ ನೋಡಿದ್ದರೆ ಅರ್ಧ ಶತಮಾನ ಒಂದೆ ಕುಟುಂಬದಲ್ಲಿ ರಾಜ್ಯಕೀಯ ಉಳಿದಿದೆ. ಈ ಹಿಂದೆ ತಾಲ್ಲೂಕಿನ ಬಿಜೆಪಿ ನಾಯಕರಾದ ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳರ ಅಕಾಲಿಕ ಮರಣದಿಂದ ಅನುಕಂಪದ ಅಲೆಯ ಮೇಲೆ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳ ಅವರು ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಅವರನ್ನು ಕೇವಲ್ 51 ಮತಗಳಿಂದ ಪರಾಭವಗೋಳಿಸಿ ಜೇವರ್ಗಿಯಲ್ಲಿ ಪ್ರಥಮವಾಗಿ ಕಮಲ ಅರಳಿಸಿದ್ದರು.

ಜೇವರ್ಗಿಯಲ್ಲಿ ತ್ರೀಕೋನ ಸ್ಪರ್ದೆ:

ಜೇವರ್ಗಿಯಲ್ಲಿ ತ್ರೀಕೋನ ಸ್ಪರ್ದೆ:

ಈಗ ಜೇವರ್ಗಿಯಲ್ಲಿ ಕಟ್ಟಾ ಬಿಜೆಪಿ ಶಿವಲಿಂಗಪ್ಪಗೌಡ ಪಾಟೀಲ್ ಪುತ್ರ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಜಿಲ್ಲಾ ಬಿಜೆಪಿ ಗ್ರಾಮೀಣ ಅದ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜತೆಗೆ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗರವರ ಪುತ್ರ ಡಾ. ಅಜಯಸಿಂಗ್ ರವರು ಜೇವರ್ಗಿ ಕ್ಷೇತ್ರದಲಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದಾರೆ. ಇವರ ಜೋತೆಗೆ ಕರ್ನಾಟಕ ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನ ಕೇದಾರಲಿಂಗಯ್ಯ ಹಿರೇಮಠ ಅವರು ರೈತ ನಾಯಕರಾಗಿ ರೈತರ ಸಮಸ್ಯೆಗಳು ಸ್ಪದೆನೆ ಮಾಡಿ ರೈತ ನಾಯಕರಾಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಮೂರು ಪಕ್ಷಗಳ ಭಲಾಭಲ ತೋರಿಸುವ ವೇಧಿಕೆಯಾಗಲ್ಲಿದೆ.

೨೦೧೩ರಲ್ಲಿ ಎರಡು ಪಕ್ಷದ ಕಿತ್ತಾಟದಿಂದ ಬಿಜೆಪಿಗೆ ಸೋಲು

೨೦೧೩ರಲ್ಲಿ ಎರಡು ಪಕ್ಷದ ಕಿತ್ತಾಟದಿಂದ ಬಿಜೆಪಿಗೆ ಸೋಲು

ಆದ್ರೆ 2013ರಲ್ಲಿ ಬಿಜೆಪಿ ಪಕ್ಷದಲ್ಲಿ ಎರಡು ಗೊಂದಲಗಳಿಂದಾಗಿ ಬಿಜೆಪಿ ಮತ್ತು ಕೆಜೆಪಿ ತಿಕ್ಕಾಟದಿಂದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತರು ಎಂಬ ತಾಲ್ಲೂಕಿನಲ್ಲಿ ಹರಿದಾಡುತ್ತೀದೆ. ಇದರ ಲಾಭವನ್ನು ಪಡೆದ ಶಾಸಕ ಡಾ ಅಜಯ್ ಸಿಂಗ್ ಭಾರಿ ಮತಗಳ ಅಂತರದಿಂದ ಮತ್ತೆ ಕಳೆದುಕೊಂಡ ಕೈ ಕ್ಷೇತ್ರವನ್ನು ಪಡೆದ್ದರು.

ಇನ್ನೊಂದೆಡೆ ಜೇವರ್ಗಿ ಮತಕ್ಷೇತ್ರದಲ್ಲಿ ಯಾರು ಗೆಲ್ಲುವ ಕುದುರೆ ಎಂಬ ಲೆಕ್ಕಾಚಾರ ನಡೆದಿದೆ. ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಡಾ. ಅಜಯಸಿಂಗ್ ಅವರು ಕ್ಷೇತ್ರದಲ್ಲಿ ಹೆಚ್ಚಿಗೆ ಇರುವುದಿಲ್ಲ ಮತ್ತು ಅಭಿವೃದ್ಧಿ ಕಾಮಗಾರಿಗಳು ಮಾಡಿದ್ದರು.

ಇಲ್ಲಿನ ಅವರ ಪಿಎಗಳ ಧರ್ಬಾರ ಎಂಬ ನೋವು ಜನಸಾಮಾನ್ಯರಲ್ಲಿ ಇದೆ. ಇನ್ನೊಂದಡೆ ಜೇವರ್ಗಿ ಕ್ಷೇತ್ರದಲ್ಲಿ ಹೆಚ್ಚಿಗೆ ಇರುವರು ದೊಡ್ಡಪ್ಪಗೌಡ ಪಾಟೀಲ್ ಅದರಿಂದ ಅವರನ್ನು ಮತದಾರರು ಕೈ ಹಿಡಿಯಲ್ಲಿದ್ದಾರೆ ಎಂಬುವುದು ಕ್ಷೇತ್ರದ ಮತದಾರರು ಕೈ ಹಿಡಿಯಲ್ಲಿದ್ದಾರೆ ಎಂಬುದು ಬಿಜೆಪಿ ನಾಯಕರ ಅಭಿಪ್ರಾಯ.

ಜೇವರ್ಗಿ ರಾಜ್ಯದ ಗಮನ ಸೆಳೆದ ಕ್ಷೇತ್ರ

ಜೇವರ್ಗಿ ರಾಜ್ಯದ ಗಮನ ಸೆಳೆದ ಕ್ಷೇತ್ರ

ಜೇವರ್ಗಿ ತಾಲ್ಲೂಕು ಇಡೀ ರಾಜ್ಯದ ಗಮನ ಸೆಳೆದ ಕ್ಷೇತ್ರವಾಗಿದೆ ಯಾಕೆಂದರೆ ಇಲ್ಲಿಯ ಸತತ 8 ಬಾರಿ ಶಾಸಕರಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಎನ್ ಧರ್ಮಸಿಂಗ್ ರವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯದ ಗಮನ ಸೆಳೆದು ವಿವಿಧ ಸಚಿವರಾಗಿ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಅವರ ಗೆಲುವಿನ ಓಟವನ್ನು ಬ್ರೇಕ್ ಮಾಡಿದ್ದೆ ಇಂದಿನ ಬಿಜೆಪಿ ಜಿಲ್ಲಾ ಗ್ರಾಮೀಣ ಅದ್ಯಕ್ಷರಾದ ಹಾಗೂ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಿಬೋಳರವರು ಆದರಿಂದ ತಾಲ್ಲೂಕಿನಲ್ಲಿ ಮತ್ತೆ ಕಮಲದ ಕಹಳೆ ಅರಳಿಸಲು ಸಜ್ಜಾಗಿದ್ದಾರೆ.

ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ಟಿಕೇಟ್ ಆಕಾಂಕ್ಷಿ

ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ಟಿಕೇಟ್ ಆಕಾಂಕ್ಷಿ

ಇದೆ ಸಮಾಜದ ಮತ್ತೊಬ್ಬ ನಾಯಕ ಶಿವರಾಜ ಪಾಟೀಲ್ ರದ್ದೆವಾಡ್ಡಗಿ ಮತ್ತು ಗಾಣಿಗೇರ ಸಮಾಜದ ರೇವಣ್ಣಸಿದ್ದಪ್ಪ ಸಂಕಾಲಿ ಮತ್ತು ಕುರುಬ ಸಮಾಜದ ಧರ್ಮಣ್ಣ ದೊಡ್ಡಮನಿ ಬಿಜೆಪಿ ಟಿಕೇಟ್ ಗಾಗಿ ತೀವ್ರ ಸ್ಪರ್ದೆ ಮಾಡಿದ್ದರು ಅಂತಿಮವಾಗಿ ಕ್ಷೇತ್ರದ ಜನತೆಯ ಅಭಿಪ್ರಾಯ ಪಡೆದು ಟಿಕೇಟ್ ಕೊಡಲಾಗುವುದು ಎಂದು ರಾಜ್ಯ ಬಿಜೆಪಿ ಅದ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು ಈಗಾಗಲೇ ಘೋಷಣೆ ಮಾಡಿದ್ದರೆ. ಇದರಿಂದ ಕ್ಷೇತ್ರದ ಮತದಾರರು ಯಾರ ಪರವಾಗಿದ್ದಾರೆ ಎಂಬುವುದನ್ನು ಕಾದು ನೋಡ ಬೇಕಿದೆ.

English summary
Ajay singh, son of former chief minister Dharam singh presently representing Jevargi assembly constituency. But, opponent BJP is trying hard to regain the same as earlier. The party defeated former cm in 2008 assembly constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X