ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಂಚೋಳಿ ಉಪ ಚುನಾವಣೆ : ಬಿಜೆಪಿಯ ಅವಿನಾಶ್ ಜಾಧವ್ ಗೆಲುವು

|
Google Oneindia Kannada News

ಕಲಬುರಗಿ, ಮೇ 23 : ಭಾರಿ ಕುತೂಹಲ ಮೂಡಿಸಿದ್ದ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದಾಗಿ ಉಪ ಚುನಾವಣೆ ಎದುರಾಗಿತ್ತು.

ಗುರುವಾರ ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಅವರು 8026 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಕಾಂಗ್ರೆಸ್‌-ಜೆಡಿಎಸ್‌ನ ಸುಭಾಷ್ ರಾಥೋಡ್‌ ಅವರು ಸೋಲು ಅನುಭವಿಸಿದರು.

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರುಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಡಾ.ಉಮೇಶ್ ಜಾಧವ್ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಈಗ ಉಪ ಚುನಾವಣೆಯಲ್ಲಿ ಅವರ ಪುತ್ರ ಡಾ.ಅವಿನಾಶ್ ಜಾಧವ್ ಅವರು ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಕುಂದಗೋಳ ಉಪ ಚುನಾವಣೆ : 1611 ಮತದ ಅಂತದಲ್ಲಿ ಕುಸುಮಾ ಶಿವಳ್ಳಿ ಜಯಕುಂದಗೋಳ ಉಪ ಚುನಾವಣೆ : 1611 ಮತದ ಅಂತದಲ್ಲಿ ಕುಸುಮಾ ಶಿವಳ್ಳಿ ಜಯ

ಚಿಂಚೋಳಿ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಾ.ಉಮೇಶ್ ಜಾಧವ್ ಅವರ ನಡುವಿನ ಪ್ರತಿಷ್ಠೆಯ ಹೋರಾಟವಾಗಿತ್ತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಗುಲ್ಬರ್ಗದಲ್ಲಿ ಗೆದ್ದ ಉಮೇಶ್ ಜಾಧವ್, ಚಿಂಚೋಳಿಯಲ್ಲಿ ಪುತ್ರನನ್ನು ಗೆಲ್ಲಿಸಿದ್ದಾರೆ. ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ದೊಡ್ಡ ಅಘಾತ ಉಂಟು ಮಾಡಿದ್ದಾರೆ.

ಡಾ.ಅವಿನಾಶ್ ಜಾಧವ್ ಗೆಲುವು

ಡಾ.ಅವಿನಾಶ್ ಜಾಧವ್ ಗೆಲುವು

* ಡಾ.ಅವಿನಾಶ್ ಜಾಧವ್ 69,109 ಮತ
* ಸುಭಾಷ್ ರಾಥೋಡ್ 61079 ಮತ
* ಗೆಲುವಿನ ಅಂತರ 8030 ಮತಗಳು

ಡಾಕ್ಟರ್ ಈಗ ಶಾಸಕರು

ಡಾಕ್ಟರ್ ಈಗ ಶಾಸಕರು

ಡಾ.ಅವಿನಾಶ್ ಜಾಧವ್ ಅವರು ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಎಂಡಿ ಜನರಲ್ ಮೆಡಿಸಿನ್ ಕೋರ್ಸ್ ಅನ್ನು ಕಲಬುರಗಿಯ ಕೆಬಿಎಸ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮೇ 8ರಂದು ಅವರು ಪರೀಕ್ಷೆ ಬರೆದಿದ್ದಾರೆ.

ಅಪ್ಪ ಸಂಸತ್‌ಗೆ, ಮಗ ವಿಧಾನಸಭೆಗೆ

ಅಪ್ಪ ಸಂಸತ್‌ಗೆ, ಮಗ ವಿಧಾನಸಭೆಗೆ

ಡಾ.ಉಮೇಶ್ ಜಾಧವ್ ಅವರು ಗುಲ್ಬರ್ಗ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಉಮೇಶ್ ಜಾಧವ್ ಪುತ್ರ ಡಾ.ಅವಿನಾಶ್ ಜಾಧವ್ ಚಿಂಚೋಳಿ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ.

ಮಾವನ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ

ಮಾವನ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ

ಡಾ.ಅವಿನಾಶ್ ಜಾಧವ್ ಅವರು 6 ತಿಂಗಳ ಹಿಂದೆ ವಿವಾಹವಾಗಿದ್ದಾರೆ. ಮಾವನ ಮನೆಯಲ್ಲಿ ಅವರು ರಾಜಕೀಯಕ್ಕೆ ಬರುವುದಕ್ಕೆ ಒಪ್ಪಿಗೆ ಇರಲಿಲ್ಲ. ಆದರೆ, ಪಕ್ಷ ಹೈಕಮಾಂಡ್ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಅವರು ಜಯಗಳಿಸಿದ್ದಾರೆ.

English summary
Kalaburagi district Chincholi assembly seat by elections result 2019. BJP candidate Avinash Jadhav win the election. Subash Rathod contested as Congress-JD(S) candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X