ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಂಖ್ಯಾಬಲ 104 ರಿಂದ 106ಕ್ಕೇರಿಕೆ: ಶೋಭಾ ಕರಂದ್ಲಾಜೆ ವಿಶ್ವಾಸ

|
Google Oneindia Kannada News

ಚಿಂಚೋಳಿ, ಮೇ 12: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ದಿನ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಬಿಜೆಪಿಯ ಬಹುತೇಕ ಮುಖಂಡರು ಪಕ್ಷದ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಬಿಜೆಪಿ ನಾಯಕಿ, ಸಂಸದೆ ಶೋಭಾ ಕರಂದ್ಲಾಜೆಯವರು ಚಿಂಚೋಳಿಯಲ್ಲಿ ಮಹಿಳಾ ಪ್ರಚಾರ ಸಮಾವೇಶ ನಡೆಸಿದರು. ಅದಕ್ಕೂ ಮುನ್ನ ತಾಲ್ಲೂಕಿನ ವಿವಿಧ ಗ್ರಾಮಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.

ಸಮ್ಮಿಶ್ರ ಸರಕಾರಕ್ಕೆ ಭಯ ಹುಟ್ಟಿಕೊಂಡಿದೆ : ಮಾಜಿ ಸಚಿವ ಸೋಮಣ್ಣಸಮ್ಮಿಶ್ರ ಸರಕಾರಕ್ಕೆ ಭಯ ಹುಟ್ಟಿಕೊಂಡಿದೆ : ಮಾಜಿ ಸಚಿವ ಸೋಮಣ್ಣ

ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು ಈ ಉಪಚುನಾವಣೆಯ ನಂತರ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 104 ರಿಂದ 106 ಕ್ಕೆ ಏರಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಂತಹ ಸಂದರ್ಭದಲ್ಲಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಸಹ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿದೆ.

ಚಿಂಚೋಳಿ ಉಪ ಚುನಾವಣಾ ಕಣ : ಪಕ್ಷಗಳ ಬಲಾಬಲಚಿಂಚೋಳಿ ಉಪ ಚುನಾವಣಾ ಕಣ : ಪಕ್ಷಗಳ ಬಲಾಬಲ

ಸುವರ್ಣ ಗ್ರಾಮ ನೀರಾವರಿ ಯೋಜನೆಗಳು ಮತ್ತು ರೈಲ್ವೆ ಯೋಜನೆಗಳನ್ನ ಸಕ್ರಿಯವಾಗಿ ಅನುಷ್ಠಾನಗೊಳಿಸಿ ಕಾರ್ಯ ಮಾಡಿದೆ. ಹಾಗಾಗಿ ಇಲ್ಲಿನ ಜನ ಈ ಬಾರಿ ಬಿಜೆಪಿಯನ್ನು ಬಾರಿ ಬಹುಮತದಿಂದ ಗೆಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಡಿಕೆ ಶಿವಕುಮಾರ್ ವಿರುದ್ಧ ಶೋಭ ವಾಗ್ದಾಳಿ

ಡಿಕೆ ಶಿವಕುಮಾರ್ ವಿರುದ್ಧ ಶೋಭ ವಾಗ್ದಾಳಿ

ಉಪಚುನಾವಣೆ ಮತ್ತು ಪ್ರತಿಷ್ಠಿತ ಚುನಾವಣಾ ಕಣಗಳಲ್ಲಿ ಡಿ.ಕೆ.ಶಿವಕುಮಾರ್ ಹಣಬಲ, ಅಧಿಕಾರದ ಬಲ ಮತ್ತು ಬಹುಬಲದಿಂದ ಚುನಾವಣಾ ಅಕ್ರಮ ಎಸಗುತ್ತಿದ್ದಾರೆ. ಆದರೆ ನಮ್ಮ ಕಾರ್ಯಕರ್ತರು ಯಾರು ಕೂಡ ಖರೀದಿಗಿಲ್ಲ. ಇನ್ನು ತಮ್ಮ ಕಾರಿನಲ್ಲೇ ಪ್ರಯಾಣಿಸುವಂತೆ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಬಿಜೆಪಿ ಕಾರು ಇದೆ ಕಾರ್ಯಕರ್ತರು ಇದ್ದಾರೆ. ನಮ್ಮ ಬದಲು ಪೋಲಿಸಿನವರೋ ಅಥವಾ ಇಂಟೆಲಿಜೆನ್ಸ್ ನವರೋ ಪ್ರಯಾಣ ಬೆಳೆಸಿದರೆ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಹಂಚುವುದನ್ನು ತಡೆಯಬಹುದು ಎಂದು ಶೋಭಾ ಕರಂದ್ಲಾಜೆಯವರು ತಿಳಿಸಿದರು.

ರಾಜ್ಯ ಸರ್ಕಾರ ಬಿದ್ದರೆ ಅದು ಬಿಜೆಪಿಯಿಂದ ಅಲ್ಲ

ರಾಜ್ಯ ಸರ್ಕಾರ ಬಿದ್ದರೆ ಅದು ಬಿಜೆಪಿಯಿಂದ ಅಲ್ಲ

ರಾಜ್ಯ ಸರ್ಕಾರ ಬಿದ್ದರೆ ಅದು ಬಿಜೆಪಿಯಿಂದ ಅಲ್ಲ ಬದಲಾಗಿ ಕಾಂಗ್ರೇಸ್‍ನವರ ಒಳಜಗಳ ಮತ್ತು ಒಳಬೇಗುದಿಯಿಂದ ಎಂದು ಶೋಭಾ ಕರಂದ್ಲಾಜೆಯವರು ತಿಳಿಸಿದರು. ಸಿದ್ದರಾಮಯ್ಯ , ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ. ಶಿವಕುಮಾರ್ ಅವರ ಮೇಲಾಟಗಳಿಗೆ ಸರ್ಕಾರ ಬಿದ್ದರು ಬೀಳಬಹುದು ಎಂದರು.

ಮಹಿಳಾ ಪ್ರಚಾರ ಸಮಾವೇಶ

ಮಹಿಳಾ ಪ್ರಚಾರ ಸಮಾವೇಶ

ಇನ್ನು ಚಿಂಚೋಳಿಯ ಪಟ್ಟದ ಹಾರಕೋಡು ಕಲ್ಯಾಣ ಮಂಟಪದಲ್ಲಿ ಶೋಭಾ ಕರಂದ್ಲಾಜೆಯವರು ನೇತೃತ್ವದಲ್ಲಿ ನಡೆದ ಮಹಿಳಾ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ, ಸ್ಥಳೀಯ ಮುಖಂಡರಾದ ಉಮಾ ಪಾಟೀಲ್, ಶಕುಂತಲಾ ಪಾಟೀಲ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಹಲವೆಡೆ ರೋಡ್ ಶೋ ನಡೆಸಿದ ಶೋಭಾ

ಹಲವೆಡೆ ರೋಡ್ ಶೋ ನಡೆಸಿದ ಶೋಭಾ

ಇದಕ್ಕೂ ಮೊದಲು ಚಿಂಚೋಳಿ ವಿಧಾನಸಭಾ ಕ್ಷೇತ್ರದ ರಟಕಲ, ಐನಾಪುರ, ಕೊಟಗಿ, ಚಂದನಾಕ್ಕೆರಾ ದಲ್ಲಿ ರೋಡ್ ಶೋ ನಡೆಸಿ ನಂತರ ಸಾರ್ವಜನಿಕವಾಗಿ ಮಾತಯಾಚನೆ ಮಾಡಿದರು.

ಈ ವೇಳೆ ಮಾತನಾಡಿದ ಶೋಭಾ ಕರಂದ್ಲಾಜೆಯವರು ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದಕ್ಕಾಗಿ ಚಿಂಚೋಳಿಯ ಮತದಾರರು ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಅವರನ್ನು ಅಭೂತಪೂರ್ವ ಅಂತರದಿಂದ ಗೆಲ್ಲಿಸಬೇಕೆಂದು ಕೇಳಿಕೊಂಡರು.

ಯುವ ಮತದಾರರ ಜೊತೆ ಸಂವಾದ ನಡೆಸಿದರು

ಯುವ ಮತದಾರರ ಜೊತೆ ಸಂವಾದ ನಡೆಸಿದರು

ಈ ರೋಡ್ ಶೋ ಮತ್ತು ಬಹಿರಂಗ ಪ್ರಚಾರದ ಉದ್ದಕ್ಕೂ ಸ್ಥಳೀಯ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಗೆ ಬಿಜೆಪಿಗೆ ಮತ ಚಲಾಯಿಸುವಂತೆ ಮನವರಿಕೆ ಮಾಡಲಾಯಿತು. ಅಲ್ಲದೆ ಯುವ ಮತದಾರರ ಜೊತೆ ಸಂವಾದ ನಡೆಸಿ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.

ಈ ಸಂದರ್ಭದಲ್ಲಿ ಕುಮಾರಿ ಶೋಭಾ ಕರಂದ್ಲಾಜೆಯವರ ಜೊತೆಯಲ್ಲಿ ಯುವ ನಾಯಕರಾದ ದೊಡ್ಡಪ್ಪ ಗೌಡ ಪಾಟೀಲ್ ನರಿಬೊಳ, ಶ್ರೀಮತಿ ಶಶಿಕಲಾ ಟೆಂಗಳಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೋಂಡರು. ಈ ವೇಳೆ ದೇವಕರ ಮಹಾರಾಜ, ರಾಮರಾವ ಪಾಟೀಲ ಹಾಗೂ ಅನೇಕ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

English summary
Former minister, MP Shobha Karandlaje has expressed confidence that BJP MLAs number will be increased to 106 from 104 in the Legislative Assembly after two by elections schedule for May 19 and result will be out on May 23 along with Lok sabha elections 2019
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X