ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿ; ಪಾಲಿಕೆ ಮೇಯರ್ ಪಟ್ಟ ಪಡೆಯಲು ಬಿಜೆಪಿ ತಂತ್ರ!

|
Google Oneindia Kannada News

ಕಲಬುರಗಿ, ನವೆಂಬರ್ 16; ಕಲಬುರಗಿ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಅತಂತ್ರ ಫಲಿತಾಂಶ ಬಂದಿರುವ ಹಿನ್ನಲೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಪಟ್ಟ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ನವೆಂಬರ್ 20ರಂದು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಮೇಯರ್ ಪಟ್ಟ ಪಡೆಯಲು ತಂತ್ರ ರೂಪಿಸುತ್ತಿವೆ. ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಯಾರನ್ನು ಬೆಂಬಲಿಸಲಿದೆ? ಎನ್ನುವುದು ಕುತೂಹಲಕ್ಕೆ ಮೂಡಿಸಿದೆ.

ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತಂತ್ರ; ಕಾಂಗ್ರೆಸ್‌ಗೆ ಹಿನ್ನಡೆ? ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ತಂತ್ರ; ಕಾಂಗ್ರೆಸ್‌ಗೆ ಹಿನ್ನಡೆ?

ಬಿಜೆಪಿಯ ವಿಧಾನ ಪರಿಷತ್‌ನ 7 ಸದಸ್ಯರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹೆಸರುಗಳನ್ನು ಜಿಲ್ಲೆಯ ದಾಖಲೆಗಳಲ್ಲಿ ಸೇರಿಸಬೇಕು ಎಂದು ವಿಧಾನ ಪರಿಷತ್ ಕಾರ್ಯದರ್ಶಿಗಳು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಪಕ್ಷೇತರ ಅಭ್ಯರ್ಥಿಗೆ ಉಪ-ಮೇಯರ್ ಸ್ಥಾನ ಕೊಟ್ಟ ಬಿಜೆಪಿ!ಪಕ್ಷೇತರ ಅಭ್ಯರ್ಥಿಗೆ ಉಪ-ಮೇಯರ್ ಸ್ಥಾನ ಕೊಟ್ಟ ಬಿಜೆಪಿ!

BJP Strategy To Get Mayor Post At Kalaburagi City Corporation

ಏಳು ಪರಿಷತ್ ಸದಸ್ಯರು ಕಲಬುರಗಿ ದಕ್ಷಿಣ ಅಥವ ಉತ್ತರ ಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡರೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಪಡೆಯಲಿದ್ದಾರೆ. ಆಗ ಜೆಡಿಎಸ್ ಬೆಂಬಲವಿಲ್ಲದೇ ಬಿಜೆಪಿ ಅಧಿಕಾರ ಪಡೆಯಬಹುದಾಗಿದೆ.

 ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಜೆಡಿಎಸ್ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನಕ್ಕೆ ಬೇಡಿಕೆಯಿಟ್ಟ ಜೆಡಿಎಸ್

ಯಾರು, ಯಾರು ಸೇರ್ಪಡೆ?; ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಪ್ರತಾಪ ಸಿಂಹ ನಾಯಕ್, ಲೆಹರ್ ಸಿಂಗ್, ಭಾರತಿ ಶೆಟ್ಟಿ, ಡಾ. ಸಾಬಣ್ಣ ತಳವಾರ, ರಘುನಾಥರಾವ್ ಮಲ್ಕಾಪುರೆ ತಮ್ಮ ನೋಡೆಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಪರಿಷತ್ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಈ ಪತ್ರದ ಅನ್ವಯ ವಿಧಾನ ಪರಿಷತ್ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಏಳು ಸದಸ್ಯರ ಹೆಸರು ಸೇರ್ಪಡೆ ಬಗ್ಗೆ ಉಪವಿಭಾಗಾಧಿಕಾರಿಗಳು ಇನ್ನೂ ತೀರ್ಮಾನ ಕೈಗೊಂಡಿಲ್ಲ.

ದಾಖಲೆ ಬಿಡುಗಡೆ ಮಾಡಿದ ಕಾಂಗ್ರೆಸ್; ಕಲಬುರಗಿ ಕಾಂಗ್ರೆಸ್ ಬಿಜೆಪಿ ತಂತ್ರವನ್ನು ತಿಳಿದಿದೆ. ಮಂಗಳವಾರ ಮತದಾರರ ಚೀಟಿಯುಳ್ಳ ದಾಖಲೆ, ಮನೆ ಬಾಡಿಗೆ ಕರಾರು ಪತ್ರ ಸೇರಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಏಳು ಜನ ವಿಧಾನ ಪರಿಷತ್ ಸದಸ್ಯರು ಸಲ್ಲಿಸಿರುವ ಮನೆ ಕರಾರು ಪತ್ರ ಬಿಜೆಪಿ ಕಾರ್ಯಕರ್ತರದ್ದು. ಈ ಸಂಬಂಧ ಅಧಿಕಾರಿಗಳು ಭೇಟಿ ನೀಡಿದಾಗಲೂ ಅವರು ಅಲ್ಲಿ ಹಾಜರಿರಲಿಲ್ಲ. ಆದರೆ ಅಕ್ಕಪಕ್ಕದ ಮನೆಯವರು ಅವರು ಇಲ್ಲಿ ಬಾಡಿಗೆಗೆ ಇದ್ದಾರೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಇಂತಹ ತಂತ್ರ ಅನುಸರಿಸುತ್ತಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಟೀಕಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಬೇರೆ-ಬೇರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮತದಾನ ಮಾಡಲು ಹೆಸರು ನೋಂದಾಯಿಸಿಕೊಳ್ಳಬಹುದು. ಆದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಮತದಾನ ಮಾಡುವುದಾಗಿ ತಿಳಿಸಬೇಕು. ಆಗ ಉಳಿದ ಕಡೆ ಮತದಾನ ಮಾಡಲು ಅವಕಾಶ ಇರುವುದಿಲ್ಲ.

ಪಾಲಿಕೆ ಅಂಕಿ-ಸಂಖ್ಯೆಗಳು; ಕಲಬುರಗಿ ಮಹಾನಗರ ಪಾಲಿಕೆ 55 ವಾರ್ಡ್‌ಗಳನ್ನು ಒಳಗೊಂಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ 27, ಬಿಜೆಪಿ 23 ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ 4 ಸ್ಥಾನದಲ್ಲಿ ಜಯಗಳಿಸಿದೆ. ಯಾವುದೇ ಪಕ್ಷ ಅಧಿಕಾರ ಹಿಡಿಯಲು 28 ಸದಸ್ಯ ಬಲದ ಅಗತ್ಯವಿದೆ.

ಸ್ವಂತ ಬಲದ ಮೇಲೆ ಯಾವುದೇ ಪಕ್ಷ ಮೇಯರ್ ಪಟ್ಟ ಪಡೆಯದಂತೆ ಅತಂತ್ರ ಫಲಿತಾಂಶ ಬಂದಿದೆ. ಜೆಡಿಎಸ್ ಪಕ್ಷ ಇತರ ಪಕ್ಷಗಳಿಗೆ ಬೆಂಬಲ ನೀಡಲು ಮೇಯರ್ ಪಟ್ಟ ತನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದೆ. ಇದಕ್ಕೆ ರಾಷ್ಟ್ರೀಯ ಪಕ್ಷಗಳ ಒಪ್ಪಿಗೆ ಇಲ್ಲ.

ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪ ಮೇಯರ್ ಸ್ಥಾನವು ಒಬಿಸಿಗೆ ನಿಗದಿಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಈ ಅರ್ಹತೆ ಇರುವ ಸದಸ್ಯರು ಇದ್ದಾರೆ. ಜೆಡಿಎಸ್ ಬೆಂಬಲ ನೀಡಿದ ಮಾತ್ರಕ್ಕೆ ಮೇಯರ್ ಪಟ್ಟ ಕೊಡಲು ಪಕ್ಷಗಳು ಸಿದ್ಧವಿಲ್ಲ.

English summary
BJP's 7 legislative council members may join Kalaburagi district voters list. It is BJP strategy to get mayor post at Kalaburagi city corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X